ಲೋಕಸಭಾ ಚುನಾವಣೆ : ಪೊಲೀಸ್, ಸಿಆರ್ ಪಿ ಅಧಿಕಾರಿಗಳಿಂದ ಪಥ ಸಂಚಲನ

ಜಾಹೀರಾತು/Advertisment
ಜಾಹೀರಾತು/Advertisment

 ಲೋಕಸಭಾ ಚುನಾವಣೆ : ಪೊಲೀಸ್,  ಸಿಆರ್ ಪಿ ಅಧಿಕಾರಿಗಳಿಂದ ಪಥ ಸಂಚಲನ

ಮೂಡುಬಿದಿರೆ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಭಾರತ ಚುನಾವಣಾ ಆಯೋಗ, ದಕ್ಷಿಣ ಕನ್ನಡ‌ ಜಿಲ್ಲಾ‌ಪಂಚಾಯತ್ ಸ್ವೀಪ್ ಸಮಿತಿ, ಮೂಡುಬಿದಿರೆ ತಾಲೂಕು ಪಂಚಾಯತ್ ಹಾಗೂ ಮೂಡುಬಿದಿರೆ ಆರಕ್ಷಕರ ಠಾಣೆಯ ಸಹಯೋಗದಲ್ಲಿ ಬೆಳುವಾಯ ಪಂಚಾಯತ್ ವ್ಯಾಪ್ತಿಯಲ್ಲಿ ಮತ್ತು ಮೂಡುಬಿದಿರೆ ಪೇಟೆಯಲ್ಲಿ  ಪೊಲೀಸರು ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆಯಿಂದ ಶುಕ್ರವಾರ ಪಥಸಂಚಲನ ನಡೆಯಿತು.


  ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎಸ್. ವೆಂಕಟಾಚಲಪತಿ, 242 ಬೆಟಾಲಿಯನ್ ಸಿಆರ್ ಪಿ ಕೆ.ಎ.ಮಹಾಧಿಕ್, ಪೊಲೀಸ್ ಉಪ ನಿರೀಕ್ಷಕರಾದ ಸಿದ್ಧಪ್ಪ ನರನೂರ ಅವರು ಮತದಾನ ಮಾಡುವುದು  ನಮ್ಮ ಹಕ್ಕು ಎಂಬುದರ  ಬಗ್ಗೆ ಅರಿವು ಮೂಡಿಸಿದರು.

 ಬೆಳುವಾಯಿ ಗ್ರಾಮ ಪಂಚಾಯತ್ ಬಳಿಯಿಂದ ಆರಂಭಗೊಂಡ ಪಥ ಸಂಚಲನವು ಮುಖ್ಯ ಪಟ್ಟಣದಲ್ಲಿ ಕೊನೆಗೊಂಡಿತು.

ನಂತರ  ಮೂಡುಬಿದಿರೆ ಸಮಾಜ‌ ಮಂದಿರದ ಬಳಿಯಿಂದ  ಆರಂಭಗೊಂಡ ಪಥ ಸಂಚಲನವು ಹೊರಟು  ನಿಶ್ಮಿತಾ ಟವರ್ಸ್ ಮೂಲಕ ಹಾದು  ಮಾರುಕಟ್ಟೆಯಾಗಿ ಕನ್ನಡ ಭವನದಲ್ಲಿ ಕೊನೆಗೊಂಡಿತು.  

ಪೊಲೀಸ್ ಸಿಬ್ಬಂದಿಗಳು, ಕೇಂದ್ರೀಯ‌ ಮೀಸಲು ಪೊಲೀಸ್ ಪಡೆಯ ಸಿಬಮಧಿಗಳು, ಯೋಧರು, ಗ್ರಾಮ ಪಂಚಾಯತ್ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Post a Comment

0 Comments