ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅತಿದೊಡ್ಡ ಹೊಡೆತ-ಮಾಜಿ ಶಾಸಕ ಸೇರಿದಂತೆ 38 ನಾಯಕರು ಬಿಜೆಪಿ ಸೇರ್ಪಡೆ
ಲೋಕಸಭಾ ಚುನಾವಣಾ ರಣಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಇದಕ್ಕೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಕೂಡಾ ಹೊರತಾಗಿಲ್ಲ. ಇಂದು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡ, ತರೀಕೆರೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಎಸ್.ಎಮ್. ನಾಗರಾಜು ಸೇರಿದಂತೆ ಕಾಂಗ್ರೆಸ್ ಪಕ್ಷದ ದಿಗ್ಗಜ ನಾಯಕರು ಭಾರತೀಯ ಜನತಾ ಪಾರ್ಟಿಯನ್ನು ಸೇರಿದರು.
ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ರಾಷ್ಟ್ರೀಯ ನಾಯಕ ಸಿಟಿ ರವಿ,ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಮಾಧುಸ್ವಾಮಿ, ತರೀಕೆರೆ ಮಾಜಿ ಶಾಸಕ ಸುರೇಶ್, ಬಿಜೆಪಿ ಜಿಲ್ಲಾಧ್ಯಕ್ಷರಾದ ದೇವರಾಜ್ ಶೆಟ್ಟಿ ಸೇರಿದಂತೆ ಇತರರ ಉಪಸ್ಥಿತಿಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಿತು.
ಕಾಂಗ್ರೆಸ್ ಪಕ್ಷದ ಜಿಲ್ಲಾ ನಾಯಕರಾದ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಧ್ರುವ ಕುಮಾರ್, ಜಿಲ್ಲಾ ಪಂಚಾಯತ ಮಾಜಿ ಸದಸ್ಯರು ಹಾಗೂ ಮಾಜಿ ಎಪಿಎಂಸಿ ಅಧ್ಯಕ್ಷರಾದ ಕೃಷ್ಣಮೂರ್ತಿ, ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಕುಮಾರ್ ನಾಯ್ಕ್, ತಾಲೂಕು ಮಾಜಿ ಸದಸ್ಯರಾದ ಬಿಪಿ ಲೋಕೇಶಪ್ಪ, ಎಂ ಸಿದ್ರಾಮಪ್ಪ, ಶ್ರೀಮತಿ ಶಾರದಾ, ಪುರಸಭಾ ಮಾಜಿ ಸದಸ್ಯರು ಹಾಗೂ ಕುಂಬಾರ ಸಮಾಜದ ಮುಖಂಡರಾದ ಶ್ರೀ ಕೃಷ್ಣಮೂರ್ತಿ, ಪುರಸಭಾ ಮಾಜಿ ಸದಸ್ಯರು ಹಾಗೂ ಉಪ್ಪಾರ ಸಮಾಜದ ಮುಖಂಡರಾದ ಟಿಡಿ ಲಕ್ಷ್ಮಣ್, ಮಾಜಿ ಪುರಸಭಾ ಸದಸ್ಯರಾದ ಶ್ರೀ ಕುಮಾರ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಎಸ್.ಎಮ್. ಲೋಹಿತ್, ಎಪಿಎಂಸಿ ಮಾಜಿ ಅಧ್ಯಕ್ಷರಾದ ಗಂಗಾಧರಪ್ಪ, ಯುವ ಕಾಂಗ್ರೆಸ್ ಘಟಕದ ಮಾಜಿ ಉಪಾಧ್ಯಕ್ಷ ಪರಮೇಶ್ವರ್, ವಿಶ್ವಕರ್ಮ ಸಮಾಜದ ಮುಖಂಡರಾದ ಕಲಿವೀರಾಚಾರ್, ಕೊರವ ಸಮಾಜದ ಅಧ್ಯಕ್ಷರಾದ ಜಯಣ್ಣ, ಗತೀಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಜಿಎಸ್ ತಿಮ್ಮಯ್ಯ, ಗ್ತಾಮ ಪಂಚಾಯತಿ ಸದಸ್ಯರು ಮಾಜಿ ಸದಸ್ಯರು, ವಿವಿಧ ಸ್ತರದ ಜವಬ್ದಾರಿಯುತರು ಸೇರಿದಂತೆ ಒಟ್ಟು 38 ನಾಯಕರು ಕಾಂಗ್ರೆಸ್ ತ್ಯಜಿಸಿ ಭಾರತೀಯ ಜನತಾ ಪಾರ್ಟಿ ಸೇರ್ಪಡೆಯಾದರು.
0 Comments