ಏ.22 : ಬೋಳ ಶ್ರೀ 1008 ವರ್ಧಮಾನ ಸ್ವಾಮಿ ಬಸದಿಯ ಪುನರ್ ನಿರ್ಮಾಣದ ಶಿಲಾನ್ಯಾಸ

ಜಾಹೀರಾತು/Advertisment
ಜಾಹೀರಾತು/Advertisment

 ಏ.22 :  ಬೋಳ ಶ್ರೀ 1008 ವರ್ಧಮಾನ ಸ್ವಾಮಿ

ಬಸದಿಯ ಪುನರ್ ನಿರ್ಮಾಣದ ಶಿಲಾನ್ಯಾಸ 

ಮೂಡುಬಿದಿರೆ: ಕಾರ್ಕಳ ತಾಲೂಕಿನ ಬೋಳ ಶ್ರೀ 1008   ವರ್ಧಮಾನ ಸ್ವಾಮಿ ಬಸದಿಯ ಪುನರ್ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮವು  ಏ. 22ರಂದು ನಡೆಯಲಿದೆ. 


  ಪರಮಪೂಜ್ಯ ಮುನಿಶ್ರೀ 108

ಪ್ರಸಂಗಸಾಗರ ಮಹಾರಾಜರು ಮತ್ತು ಪರಮ ಪೂಜ್ಯ ಯುಗಳ ಮುನಿಗಳ ಆಶೀರ್ವಾದದೊಂದಿಗೆ ಮೂಡುಬಿದಿರೆ ಜೈನ ಮಠದ ಭಾರತಭೂಷಣ ಸ್ವಸ್ತಿ ಶ್ರೀ ಡಾ| ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ


ಮಹಾಸ್ವಾಮೀಜಿಯವರ ಸಾನಿಧ್ಯದಲ್ಲಿ ಬೆಳಿಗ್ಗೆ 9.45-10

ಗಂಟೆಯ ಅವಧಿಯ ಮಿಥುನ ಲಗ್ನದಲ್ಲಿ ಬಸದಿಯ ಶಿಲಾನ್ಯಾಸ ಕಾರ್ಯಕ್ರಮ ನೆರವೇರಲಿದೆ ಎಂದು ಬಸದಿಯ ಜೀರ್ಣೋದ್ಧಾರ ಸಮಿತಿ ಪ್ರಕಟನೆ ತಿಳಿಸಿದೆ.


ಧಾರ್ಮಿಕ ಸಭೆ : ಬೆಳಿಗ್ಗೆ 10.30ಕ್ಕೆ ನಡೆಯಲಿರುವ ಧಾರ್ಮಿಕ ಸಭೆಯಲ್ಲಿ ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಲಿರುವರು. ಅರಳ ಚಂದ್ರನಾಥ ಸ್ವಾಮಿ ಬಸದಿ ಆಡಳಿತ ಮೊಕ್ತಸರ ರಾಜೇಂದ್ರ ಶೆಟ್ಟಿ ಅರಳ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ವಿ. ಸುನೀಲ್ ಕುಮಾರ್, ಮಾಜಿ ಸಚಿವ ಅಭಯ್‌ಚಂದ್ರ ಜೈನ್, ಚೌಟರ ಅರಮನೆಯ ಕುಲದೀಪ್ ಎಂ., ಕೆದಿಂಜೆ ಬೋಳಾ ಆಗೋ ಪ್ರೈ.ಲಿ. ನಿರ್ದೆಶಕ ಬೋಳ ರಾಹುಲ್ ಕಾಮತ್, ಉದ್ಯಮಿಗಳಾದ ವಿಜೇಶ್ ವಿ. ಶೆಟ್ಟಿ, ಮಹಾವೀರ ಹೆಗ್ಡೆ ಕಾರ್ಕಳ, ಪ್ರೇಮ್ ಕುಮಾ‌ರ್ ಹೊಸ್ಮಾರು, ಬೋಳ ಬಸದಿ ಜ್ಯೋತಿಷ್ಯರು ಚಂದ್ರಶೇಖ‌ರ್ ಇಂದ್ರರು, ಬೋಳ ಮರಿಮಾ‌ರ್ ಗುತ್ತು ಅವಿನಾಶ್‌ ಮಲ್ಲಿ ಬೋಳ ಗ್ರಾ. ಪಂ. ಅಧ್ಯಕ್ಷ ದಿನೇಶ್‌ ಪೂಜಾರಿ ಉಪಸ್ಥಿತರಿರುವರು ಎಂದು ತಿಳಿಸಿದ್ದಾರೆ.

Post a Comment

0 Comments