ಇತಿಹಾಸ ಪ್ರಸಿದ್ಧ "ವೀರ - ವಿಕ್ರಮ" ಜೋಡುಕರೆ ಕಂಬಳ ಕೂಟದ ಫಲಿತಾoಶ

ಜಾಹೀರಾತು/Advertisment
ಜಾಹೀರಾತು/Advertisment

 ಇತಿಹಾಸ ಪ್ರಸಿದ್ಧ "ವೀರ - ವಿಕ್ರಮ" ಜೋಡುಕರೆ ಕಂಬಳ ಕೂಟದ ಫಲಿತಾoಶ 

 ಮೂಡುಬಿದಿರೆ: ಶ್ರೀ ಮಹಿಷಮರ್ಧಿನಿ ಕಂಬಳ ಸಮಿತಿ ಹೊಕ್ಕಾಡಿಗೋಳಿ ಇದರ ವತಿಯಿಂದ ಕಂಬಳ ಸಮಿತಿಯ ಅಧ್ಯಕ್ಷ ರಶ್ಮಿತ್ ಶೆಟ್ಟಿ ನೋಣಾಲ್ ಗುತ್ತು ಅವರ ಅಧ್ಯಕ್ಷತೆಯಲ್ಲಿ  ಶನಿವಾರ ಆರಂಭಗೊಂಡ  "ಶ್ರೀ ವೀರ-ವಿಕ್ರಮ" ಜೋಡುಕರೆ ಬಯಲು ಕಂಬಳವು ಅತ್ಯಂತ ಯಶಸ್ವಿಯಾಗಿ ನಡೆಯಿತು.



  ಒಂದೇ ಊರಿನಲ್ಲಿ ಎರಡು  ಕಡೆಗಳಲ್ಲಿ ಕಂಬಳಗಳು ನಡೆದಿದ್ದು  ರಶ್ಮಿತ್ ಶೆಟ್ಟಿ ಅವರ ನೇತೃತ್ವದಲ್ಲಿ ನಡೆದ  ಹೊಕ್ಕಾಡಿಗೋಳಿ ವೀರ- ವಿಕ್ರಮ  ಕಂಬಳದಲ್ಲಿ ಒಟ್ಟು 115 ಜತೆ ಕಂಬಳದ ಕೋಣಗಳು ಭಾಗವಹಿಸಿದ್ದವು.


ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ :


ಕನೆಹಲಗೆ: 02 ಜೊತೆ 

ಅಡ್ಡಹಲಗೆ: 02 ಜೊತೆ 

ಹಗ್ಗ ಹಿರಿಯ: 07 ಜೊತೆ 

ನೇಗಿಲು ಹಿರಿಯ: 15 ಜೊತೆ 

ಹಗ್ಗ ಕಿರಿಯ: 11 ಜೊತೆ 

ನೇಗಿಲು ಕಿರಿಯ: 30 ಜೊತೆ 

ನೇಗಿಲು ಸಬ್ ಜೂನಿಯರ್: 48

ಒಟ್ಟು ಕೋಣಗಳ ಸಂಖ್ಯೆ: 115 ಜೊತೆ

••••••••••••••••

ಕನೆಹಲಗೆ: 

( 6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ )


ಕಾಂತಾವರ ಬೇಲಾಡಿ ಬಾವ ಅಶೋಕ್ ಶೆಟ್ಟಿ

ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ

••••••••••••••••

ಅಡ್ಡ ಹಲಗೆ:


ಪ್ರಥಮ: ನಾರಾವಿ ಯುವರಾಜ್ ಜೈನ್ 

ಹಲಗೆ ಮುಟ್ಟಿದವರು: ಭಟ್ಕಳ ಹರೀಶ್ 


ದ್ವಿತೀಯ: ನೇರಳ ಕಟ್ಟೆ ಕೊಡ್ಲಾಡಿ ಅದ್ವಿನ್ ರವಿರಾಜ್ ಶೆಟ್ಟಿ

ಹಲಗೆ ಮುಟ್ಟಿದವರು: ಭಟ್ಕಳ ಹರೀಶ್ 

••••••••••••••••

ಹಗ್ಗ ಹಿರಿಯ: 


ಪ್ರಥಮ: ಮಿಜಾರು ಪ್ರಸಾದ್ ನಿಲಯ ಪ್ರಖ್ಯಾತ್ ಶಕ್ತಿ ಪ್ರಸಾದ್ ಶೆಟ್ಟಿ "ಎ"

ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ


ದ್ವಿತೀಯ: ನಂದಳಿಕೆ ಶ್ರೀಕಾಂತ್ ಭಟ್ "ಬಿ"

ಓಡಿಸಿದವರು: ನಕ್ರೆ ಪವನ್ ಮಡಿವಾಳ

••••••••••••••••

ಹಗ್ಗ ಕಿರಿಯ:


ಪ್ರಥಮ: ಶಿಬರೂರು ಮುಟ್ಟಿಕಲ್ಲು ಕೀರ್ತನ್ ರಾಜೇಶ್ ಪಾಣಾರ

ಓಡಿಸಿದವರು: ಕಡಂದಲೆ ಮುಡಾಯಿಬೆಟ್ಟು ರೋಹಿತ್ ಪಾಣಾರ್


ದ್ವಿತೀಯ: ಕಕ್ಕೆಪದವು ಕಕ್ಯ ಇಂದಿರಾ ಮಹಾಬಲ ರೈ

ಓಡಿಸಿದವರು: ಉಜಿರೆ ಹೊಸಮನೆ ಸ್ಪಂದನ್ ಶೆಟ್ಟಿ

••••••••••••••••

ನೇಗಿಲು ಹಿರಿಯ: 


ಪ್ರಥಮ: ಬೆಳ್ಳಿಪ್ಪಾಡಿ ಕೈಪ ಕೇಶವ ಮಾಂಕು ಭಂಡಾರಿ

ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ


ದ್ವಿತೀಯ: ಮಾಣಿ ಗುತ್ತು ಪ್ರಸನ್ನ ರಘುರಾಮ್ ನಾಯ್ಕ

ಓಡಿಸಿದವರು: ಉಜಿರೆ ಹೊಸಮನೆ ಸ್ಪಂದನ್ ಶೆಟ್ಟಿ


••••••••••••••••

ನೇಗಿಲು ಕಿರಿಯ:


ಪ್ರಥಮ: ಹೆಬ್ರಿ ಮಾಡಿಗೆ ಮನೆ ದಿಲೀಪ್ ಶಿವರಾಮ ಹೆಗ್ಡೆ

ಓಡಿಸಿದವರು: ಕಕ್ಕೆಪದವು ಗೌತಮ್ ಗೌಡ


ದ್ವಿತೀಯ: ನಲ್ಲೂರು ಬಜಗೋಳಿ ಶಿವಪ್ರಸಾದ್ ನಿಲಯ ದಿನೀಶ್ ಭಂಡಾರಿ

ಓಡಿಸಿದವರು: ಮಾಳ ಆಧೀಶ್ ಪೂಜಾರಿ

•••••••••••••••••••

ನೇಗಿಲು ಸಬ್ ಜೂನಿಯರ್:


ಪ್ರಥಮ: ಕನಡ್ತ್ಯಾರು ಕೃಷ್ಣ ಶೆಟ್ಟಿ

ಓಡಿಸಿದವರು: ಕಕ್ಕೆಪದವು ಗೌತಮ್ ಗೌಡ


ದ್ವಿತೀಯ: ಪಡು ಸಾಂತೂರು ಕಲ್ಯಾಣಿ ನಿವಾಸ ರಾಮ ದೇಜು ಪೂಜಾರಿ

ಓಡಿಸಿದವರು: ಪಡು ಸಾಂತೂರು ಸುಕೇಶ್ ಪೂಜಾರಿ.


ಬಹುಮಾನ ವಿತರಣಾ ಸಮಾರಂಭದಲ್ಲಿ ಸ್ಥಳದಾನಿ ಸುಧೀರ್ ಶೆಟ್ಟಿ ಹೊಕ್ಕಾಡಿಗೋಳಿ, ಜಿಲ್ಲಾ ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಗುಣಪಾಲ  ಕಡಂಬ ಅವರನ್ನು ಗೌರವಿಸಲಾಯಿತು. 

 ತೀರ್ಪುಗಾರರನ್ನು, ಉದ್ಘೋಷಕರನ್ನು, ಕೋಣಗಳನ್ನು ಬಿಡುವಲ್ಲಿ ಸಹಕರಿಸಿರುವವರನ್ನು, ಚಿನ್ನದ ರೂಪದಲ್ಲಿ ಸಹಕರಿಸಿರುವವರನ್ನು ಗೌರವಿಸಲಾಯಿತು.


ಸಮಿತಿಯ ಪದಾಧಿಕಾರಿಗಳು, ಊರಿನ ಮುಖಂಡರುಗಳು, ಹಿರಿಯರು ಭಾಗವಹಿಸಿ ಬಹುಮಾನವನ್ನು ವಿತರಿಸಿದರು.

    ಹೊಕ್ಕಾಡಿಗೋಳಿ ಕಂಬಳ ಸಮಿತಿಯ ಅಧ್ಯಕ್ಷ ರಶ್ಮಿತ್ ಶೆಟ್ಟಿ ನೋಣಾಲ್ ಗುತ್ತು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ದಿನೇಶ್ ಸುವರ್ಣ ರಾಯಿ ಮತ್ತು ಪ್ರಜ್ವಲ್ ಸಿದ್ಧಕಟ್ಟೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Post a Comment

0 Comments