ಮೂಡುಬಿದಿರೆ ತಾ.ಪಂಗೆ ಅಧಿಕೃತ ಇಒ ಯಾರು?

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ ತಾ.ಪಂಗೆ ಅಧಿಕೃತ ಇಒ ಯಾರು?

ಮೂಡುಬಿದಿರೆ : ಇಲ್ಲಿನ ತಾಲೂಕು ಪಂಚಾಯತ್ ನಲ್ಲಿ ಇದೀಗ ಇಬ್ಬರು ಕಾರ್ಯನಿರ್ವಾಹಕ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದು ಅಧಿಕೃತ ಕಾರ್ಯನಿರ್ವಾಹಕ ಅಧಿಕಾರಿ ಯಾರೆಂಬುದು ಸಾರ್ವಜನಿಕರಲ್ಲಿ ಗೊಂದಲ ಮೂಡಿದೆ.

  ಶಿಕ್ಷಣ ಇಲಾಖೆಯಿಂದ ಕಳೆದ ಏಳು ತಿಂಗಳ ಹಿಂದೆ ಮೂಡುಬಿದಿರೆ ತಾ.ಪಂ.ಗೆ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕರ್ತವ್ಯಕ್ಕೆ ಹಾಜರಾಗಿದ್ದ ಲೊಕೇಶ್ ಸಿ.ಅವರನ್ನು ಚುನಾವಣಾ ಆದೇಶದ ಹಿನ್ನಲೆಯಲ್ಲಿ ವರ್ಗಾವಣೆ ಮಾಡಲಾಗಿದೆ. ಇಲ್ಲಿಗೆ ಕೋಲಾರದ ವೆಂಕಟಾಚಲಪತಿ ರಾಜ್ ಅವರು ಇಒ ಆಗಿ ವರ್ಗಾವಣೆಗೊಂಡು ಬಂದಿದ್ದಾರೆ. ಆದರೆ ಲೊಕೇಶ್ ಅವರು ಅಧಿಕಾರವನ್ನು ಹಸ್ತಾಂತರಿಸದೆ ಇರುವುದರಿಂದ ಕಛೇರಿಯಲ್ಲಿ ಸುಮ್ಮನೆ ಕುಳಿತುಕೊಳ್ಳುವಂತ್ತಾಗಿದೆ.

   ಅಲ್ಲದೆ ಲೊಕೇಶ್ ಅವರೇ ಈಗಲೂ ಕಡತಗಳನ್ನು ನೋಡಿಕೊಳ್ಳುತ್ತಿರುವುದರಿಂದ ಸಾರ್ವಜನಿಕರಿಗೆ ಈಗ ಯಾರು ಅಧಿಕೃತ ಇಒ ಎಂಬ ಗೊಂದಲ ಉಂಟಾಗಿದೆ.

  ಕೆಲವೊಂದು ದಿನಗಳಲ್ಲಿ ರಾತ್ರಿ ವೇಳೆಯೂ ತಾ.ಪಂ.ಕಛೇರಿಯ ಬಾಗಿಲು ತೆರೆದುಕೊಂಡಿದ್ದು ಲೊಕೇಶ್ ಅವರೇ ಕಡತಗಳಲ್ಲಿ ಕೈಯಾಡಿಸುತ್ತಿದ್ದಾರೆಂಬ ಆರೋಪಗಳು ಕೇಳಿ ಬರುತ್ತಿದೆ. ಅಲ್ಲದೆ ಚುನಾವಣಾ ಆದೇಶದ ಮೇರೆಗೆ ವರ್ಗಾವಣೆಗೊಂಡು ಬಂದಿರುವ ನೂತನ ಕಾರ್ಯನಿರ್ವಾಹಕ ಅಧಿಕಾರಿಗೆ ಲೊಕೇಶ್ ಅವರು ಅಧಿಕಾರವನ್ನು ಹಸ್ತಾಂತರಿಸಲು  ಹಿಂದೇಟು ಹಾಕುತ್ತಿರುವುದರ ಬಗ್ಗೆ ಕಾರಣವೇನೆಂಬುದರ ಬಗ್ಗೆಯೂ ಸಾರ್ವಜನಿಕರು ಪ್ರಶ್ನಿಸಿಕೊಳ್ಳುತ್ತಿದ್ದಾರೆ..

Post a Comment

0 Comments