ಕಲ್ಲಮುಂಡ್ಕೂರು: 5 ನೇ ವರ್ಷದ ಸಾಂಸ್ಕೃತಿಕ ಉತ್ಸವ
ಮೂಡುಬಿದಿರೆ : ಶಿವರಾತ್ರಿಯ ಪ್ರಯುಕ್ತ ಅಬ್ಬಗದಾರಗ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಕಲ್ಲಮುಂಡ್ಕೂರು ಇದರ ಸಾಂಸ್ಕೃತಿಕ ಕಲಾವೇದಿಕೆಯ ಪ್ರಾಯೋಜಕತ್ವದಲ್ಲಿ 5ನೇ ವರ್ಷದ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮ,ಹಾಗು ಸನ್ಮಾನ ಕಾರ್ಯಕ್ರಮ ನಡೆಯಿತು.
ಸಭಾಧ್ಯಕ್ಷತೆಯನ್ನು ಅರಣಾಕುಮಾರ ಕೊಪ್ಳು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಪಶುಪತಿ ಶಾಸ್ತ್ರಿ, ಜಯಪ್ರಕಾಶ್ ಪಡಿವಾಳ್ ,ಜಯರಾಮ್ ಅಮೀನ್ ಅರ್ದೊಟ್ಟು ಭಾಗವಹಿಸಿದ್ದರು.
ಸನ್ಮಾನ : 48 ವರ್ಷಗಳಿಂದ ಚೆನ್ನಯಪೂಜಾರಿಯಾಗಿ ಸೇವೆ ಸಲ್ಲಿಸುತ್ತಿರುವ ಮೋಹನ ಪೂಜಾರಿ ಮುರಂತ ಬೆಟ್ಟು ಇವರನ್ನು ಸನ್ಮಾನಿಸಲಾಯಿತು. ಗಾಯತ್ರಿ ಮೋಹನ್ ಚಂದ್ರ ಕುಲಾಲ್ ಸ್ವಾಗತಿಸಿದರು. ಕವಿತಾ ರಮೇಶ್ ಸನ್ಮಾನ ಪತ್ರವನ್ನು ವಾಚಿಸಿದರು. ಸಪ್ನಾ ಕುಲಾಲ್ ಬನ್ನಡ್ಕ ಕಾರ್ಯಕ್ರಮ ನಿರೂಪಿಸಿದರು.
ವಿಕಾಸ್ ಕುಲಾಲ್, ಮೋಹನ್ ಹೊಸ್ಮಾರ್ ಕಾರ್ಯಕ್ರಮ ನಿರೂಪಿಸಿದರು. ನಂತರ ಸ.ಹಿ.ಪ್ರಾ ಶಾಲೆ ಕಲ್ಲಮುಂಡ್ಕೂರು ಹಾಗು ಅಂಗನವಾಡಿ ಕೇಂದ್ರ ಕಳಸಬೈಲು ಇದರ ಪುಟಾಣಿಗಳ ನೃತ್ಯಕಾರ್ಯಕ್ರಮ ನಡೆಯಿತು.
ನಂತರ ಪಲ್ಲವಿ ಕಲಾವಿದರು ಕಾರ್ಕಳ ಇವರಿಂದ ಶಿವಭಕ್ತ ಮಾರ್ಕಂಡೆಯೆ ಎಂಬ ಭಕ್ತಿ ಪ್ರಧಾನ ತುಳು ನಾಟಕ ಪ್ರದರ್ಶಿಸಲ್ಪಟ್ಟಿತು.
0 Comments