ಮೂಡುಬಿದಿರೆ: ರಾಮೋತ್ಸವ ಚಿತ್ರ ಸ್ಪರ್ಧೆ ಬಾಲ ರಾಮರಿಗೆ ಬಹುಮಾನ ವಿತರಣೆ
ಮೂಡುಬಿದಿರೆ: ದ.ಕ ಜಿಲ್ಲಾ ಕಾರ್ಯನಿರತ ಫೋಟೋಗ್ರಾಫರ್ಸ್ ಮತ್ತು ವೀಡಿಯೋ ಗ್ರಾಫರ್ಸ್ ಅಸೋಸಿಯೇಶನ್ (ರಿ)ವತಿಯಿಂದ ಶ್ರೀ ರಾಮ ಮಿತ್ರ ಮಂಡಳಿ ಸಿದ್ಧಕಟ್ಟೆ ಇವರ ಸಹಯೋಗದಲ್ಲಿ ರಾಮೋತ್ಸವ ಪ್ರಯುಕ್ತ 1ರಿಂದ 6 ವರ್ಷದೊಳಗಿನ ಮಕ್ಕಳಿಗೆ ನಡೆದಿದ್ದ ಶ್ರೀ ರಾಮ ವೇಷ ಫೋಟೋ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಶನಿವಾರ ಸಮಾಜ ಮಂದಿರ ಮೀಟಿಂಗ್ ಹಾಲ್ ನಲ್ಲಿ ನಡೆಯಿತು.
ಪ್ರಭಾತ್ ಸಿಲ್ಕ್ ನ ಪ್ರಭಾತ್ ಚಂದ್ರ ಜೈನ್, ತುಳಸೀ ಕೋಚಿಂಗ್ ಸೆಂಟರ್ ನ ಮಮತಾ ಮೋಹನ್, ಸಂಘದ ಸ್ಥಾಪಕಾಧ್ಯಕ್ಷ ಗಣೇಶ್ ಹೊಳ್ಳ, ಸ್ಥಾಪಕ ಸಂಚಾಲಕ ಥೋಮಸ್ ಡಿ ಕೋಸ್ತಾ ಬಂಟ್ವಾಳ, ಶ್ರೀ ರಾಮ ಮಿತ್ರ ಮಂಡಳಿಯ ನೀಲಕಂಠ ಪರಾಡ್ಕರ್ ಅತಿಥಿಗಳಾಗಿ ಪಾಲ್ಗೊಂಡು ಬಹುಮಾನಗಳನ್ನು ವಿತರಿಸಿದರು.
ವಿಜೇತರು: ಪ್ರಥಮ : ಕು. ಶಿರಾಲಿ ಪೂಜಾರಿ, ದ್ವಿತೀಯ: ಲಕ್ಷ ವಿ. ಕೋಟ್ಯಾನ್ ತೃತೀಯ: ಕು. ಋತ್ವಿಕಾ ಎ. ಮಂಗಳೂರು
ಪ್ರೋತ್ಸಾಹಕ: ಸಾನಿಧ್ಯಾ ಡಿ.ರಾವ್, ಗ್ಯಾನ್ ಎ, ಅಹನಾ ಭಟ್, ಸುಕನ್ಯಾ ಕಾಮತ್, ಸುಧನ್ಯ ಭಟ್, ಜಿಯ ಕೋಟ್ಯಾನ್, ಅಥರ್ವ ಕಿಣಿ ಮೂಡುಬಿದಿರೆ.
ಸಂಘದ ಅಧ್ಯಕ್ಷ ರಾಜೇಶ್ ಶ್ಯಾನುಭಾಗ್ ಸ್ವಾಗತಿಸಿದರು. ಕಾರ್ಯದರ್ಶಿ ಯಶೋಧರ್ ರಾವ್ ವಂದಿಸಿದರು .
0 Comments