'ಕಾಬೆಟ್ಟು ಶಿವಪ್ಪ ಹೆಗ್ಗಡೆ' ಕೃತಿ ಬಿಡುಗಡೆ
ಮುಂಬೈ ಹೆಗ್ಗಡೆ ಸೇವಾ ಸಂಘದ ವಾರ್ಷಿಕೋತ್ಸವ ಸಮಾರಂಭದಲ್ಲಿ ರವಿ ಎಸ್.ಹೆಗ್ಡೆ ಹೆರ್ಮುಂಡೆ ಅವರು ರಚಿಸಿದ "ಅಮರ ವೀರ ಕಾಬೆಟ್ಟು ಏಳ್ನಾಡುಗುತ್ತು ಶಿವಪ್ಪ ಹೆಗ್ಗಡೆ" ಕೃತಿಯನ್ನು ಮೂಡುಬಿದಿರೆಯ ಉದ್ಯಮಿ ,ವಾಲ್ಪಾಡಿ ವೈ.ವಿ.ವಿಶ್ವನಾಥ ಹೆಗ್ಡೆಯವರು ಬಿಡುಗಡೆಗೊಳಿಸಿದರು.
ಹೆಗ್ಗಡೆ ಸಂಘದ ಅಧ್ಯಕ್ಷ ಮನೋಜ್ ಹೆಗ್ಡೆ,ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ ವಿರೋಧ ಪಕ್ಷದ ನಾಯಕ ವಿಜಯ್ ಚೌಗುಲೆ,ಪತ್ರಕರ್ತ ಪ್ರಸನ್ನ ಹೆಗ್ಡೆ ಮಾರ್ಪಾಡಿ,ಹರೀಶ್ ಆರ್.ಹೆಗ್ಡೆ, ಗಣೇಶ್ ಹೆಗ್ಡೆ,ನ್ಯಾಯವಾದಿ ಪ್ರಕಾಶ್ ಹೆಗ್ಡೆ ಸಹಿತ ಸಂಘದ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
0 Comments