ಅನಧಿಕೃತ ಗ್ಯಾರೇಜ್ : ತೆರವುಗೊಳಿಸಿದ ಮೂಡುಬಿದಿರೆ ಪುರಸಭೆ
ಮೂಡುಬಿದಿರೆ: ಇಲ್ಲಿನ ಸ್ವರಾಜ್ಯ ಮೈದಾನದ ಬಳಿ ಕಳೆದೆರಡು ವರುಷಗಳಿಂದ ಅಕ್ರಮವಾಗಿ ನಡೆಯುತ್ತಿದ್ದು ಗ್ಯಾರೇಜನ್ನು ಪುರಸಭೆಯು ಶನಿವಾರ ತೆರವುಗೊಳಿಸಿದೆ.
ಗ್ಯಾರೇಜ್ ನಿಂದ ಹೊರ ಬರುತ್ತಿರುವ ಕೊಳಚೆ ನೀರಿನಿಂದ ಸಾರ್ವಜನಿಕರು ತೊಂದರೆಯನ್ನು ಅನುಭವಿಸುತ್ತಿದ್ದಾರೆ ಈ ಬಗ್ಗೆ ಪುರಸಭೆಗೆ ದೂರು ನೀಡಿದಾಗ ಕ್ರಮಕೈಗೊಂಡಿಲ್ಲ ನಂತರ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದು ಅವರು ಪುರಸಭೆಗೆ ಕ್ರಮಕೈಗೊಳ್ಳುವಂತೆ ಸೂಚಿಸಿದ್ದರೂ ಪುರಸಭೆಯು ಕ್ರಮ ಕೈಗೊಂಡಿಲ್ಲವೆಂದು ಸ್ಥಳೀಯರಾದ ಸದಾನಂದ ನಾರಾವಿ ಅವರು ಮೂಡುಬಿದಿರೆ ಆಡಳಿತ ಸೌಧದಲ್ಲಿ 10 ದಿನಗಳ ಹಿಂದೆ ನಡೆದ ಲೋಕಾಯುಕ್ತ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಲೋಕಾಯುಕ್ತಕ್ಕೆ ಲಿಖಿತ ದೂರು ನೀಡಿದ್ದರು.
ಸಮಸ್ಯೆಯ ಬಗ್ಗೆ ಆಲಿಸಿದ ಲೋಕಾಯುಕ್ತ ಅಧೀಕ್ಷಕ ಸೈಮನ್ ಸಿ.ಎ. ಅವರು ಪುರಸಭಾ ಅಧಿಕಾರಿಗಳಿಗೆ ಮಾತಿನ ಚಾಟಿ ಬೀಸಿ ಗ್ಯಾರೇಜನ್ನು ತೆರವುಗೊಳಿಸಲು ನಿಮ್ಮಿಂದ ಸಾಧ್ಯವಾಗದಿದ್ದರೆ ನಾವು ಪುರಸಭೆಯ ಮೇಲೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಈ ಹಿನ್ನೆಲೆಯಲ್ಲಿ ಪುರಸಭಾ ಮುಖ್ಯಾಧಿಕಾರಿ ಇಂದು ಎಂ.ಸಹಿತ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೂಚನೆ ನೀಡಿ ಅನಧಿಕೃತ ಗ್ಯಾರೇಜನ್ನು ತೆರವು ಗೊಳಿಸಿದ್ದಾರೆ.
0 Comments