ಕಂದಿರು: ವಾರ್ಷಿಕ ಪೂಜಾ ಮಹೋತ್ಸವ

ಜಾಹೀರಾತು/Advertisment
ಜಾಹೀರಾತು/Advertisment

 ಕಂದಿರು: ವಾರ್ಷಿಕ ಪೂಜಾ ಮಹೋತ್ಸವ


ಮೂಡುಬಿದಿರೆ: ತಾಲೂಕಿನ ಶಿರ್ತಾಡಿ ಶ್ರೀ ಕ್ಷೇತ್ರ ಕಂದೀರು ಶ್ರೀ ಆದಿಶಕ್ತಿ ದುರ್ಗಾಂಬಿಕ ದೇವಸ್ಥಾನದ ವಾರ್ಷಿಕ ಪೂಜಾ ಮಹೋತ್ಸವವು ಇತ್ತೀಚೆಗೆ ಕ್ಷೇತ್ರ ಸಂಪ್ರದಾಯದಂತೆ  ಜರಗಿತು. ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳೊಂದಿಗೆ ಸರ್ವೇಶ್ವರಿಯ ಪೂಜೆ, ಮಹಾ ಚಂಡಿಕಾಯಾಗ, ನಾಗ ತನು ತರ್ಪಣ, 108 ಸ್ತ್ರೀಯರಿಂದ ಕುಂಕುಮಾರ್ಚನೆ, ವಿವಿಧ ಭಜನಾ ಮಂಡಳಿಯವರಿಂದ ಕುಣಿತ ಭಜನಾ ಕಾರ್ಯಕ್ರಮ ನಡೆಯಿತು.

 ಅಳಿಯೂರು ನವೋದಯ ರುಕ್ಕಯ್ಯ ಪೂಜಾರಿ ಅವರು ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಕೇಳ ಕಾಶಿ ಪಟ್ಣದ ಅನಂತ ಅಸ್ರನ್ನ ಅವರು ಆಶೀರ್ವಚ ನಗೈದರು.

 ಕ್ಷೇತ್ರದ ಸ್ಥಾಪಕ ಸದಸ್ಯರುಗಳಾದ ಪಿ ಕೆ ರಾಜು ಪೂಜಾರಿ ಕಾಶಿಪಟ್ಣ,  ಶಿವಪ್ಪ ಪೂಜಾರಿ ಕೋಡಿಂಗೇರಿ, ಲಿಂಗಪ್ಪ ಪೂಜಾರಿ ಪಾದೆ ಬಡಕೋಡಿ ಇವರನ್ನು ಸನ್ಮಾನಿಸಲಾಯಿತು. 


  ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರರಾದ ಸೋಮನಾಥ ಶಾಂತಿಯವರು ಪ್ರಸ್ತಾವನೆಗೈದರು. 

ಹರೀಶ್ ಶಾಂತಿ ಪುತ್ತೂರು ರಾಜ್ಯಾಧ್ಯಕ್ಷ, ಶ್ರೀ ನಾರಾಯಣ ಗುರು ವೈದಿಕ ಸಮಿತಿ ಮಂಗಳೂರು,  ಮೋಹನ್ ಕೆ ಕುದ್ಪುಲ ಬೆಳ್ತಂಗಡಿ, ಶಿರ್ತಾಡಿ ನಾರಾಯಣ ಗುರುಸ್ವಾಮಿ ಸೇವಾ ಸಂಘದ ಅಧ್ಯಕ್ಷ   ಅಶೋಕ್ ಪೂಜಾರಿ ಮಾಂಟ್ರಾಡಿ, ಶ್ರೀ ನಾರಾಯಣ ಗುರು ಸ್ವಾಮಿ ಪ್ರಸಾದಿತ ಸೇವಾ ಸಂಘ ನಿಡ್ಡೋಡಿ ಇದರ ಅಧ್ಯಕ್ಷ ವಿನೋದರ ಸುವರ್ಣ,   ಅಳಿಯೂರು ಕೋಟಿ ಚೆನ್ನಯ್ಯ ಯುವಶಕ್ತಿ ಇದರ ಅಧ್ಯಕ್ಷ  ಅರುಣ್ ಕುಮಾರ್,   ಸುರೇಂದ್ರ ಜೆಎನ್ಎಸ್ ಕಂದೀರು, ಯುವ ವಾಹಿನಿ ಮೂಡುಬಿದಿರೆ ಘಟಕದ ಕಾರ್ಯದರ್ಶಿ ಗಿರೀಶ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು. 

ವಿಶ್ವನಾಥ್ ಹನ್ನೆರು ಸ್ವಾಗತಿಸಿದರು. ಸುಶ್ಮಿತಾ ನಿತೇಶ್ ಕಾರ್ಯಕ್ರಮ ನಿರೂಪಿಸಿದರು. ಸುನಿಲ್ ಬುಲಾಯ್ ವಂದಿಸಿದರು.

Post a Comment

0 Comments