ತೆಂಕಮಿಜಾರಿಗೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾ ರಥ
ಮೂಡುಬಿದಿರೆ: ಸಂವಿಧಾನ ಜಾಗ್ರತಿ ಜಾಥಾ ಕಾರ್ಯಕ್ರಮ ದಂಗವಾಗಿ ತೆಂಕಮಿಜಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶನಿವಾರ ಅಂಬೇಡ್ಕರ್ ಪ್ರತಿಮೆಯ ಸ್ತಬ್ದ ಚಿತ್ರವನ್ನು ಬಡಗಮಿಜಾರು ಗ್ರಾಮದ ಕೊಂಟಡ್ಕ ಪ್ರದೇಶದಲ್ಲಿ ಸ್ವಾಗತಿಸಿ ಸುಮಾರು 2 ಕಿ ಮಿ ವರೆಗೆ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಸಾರ್ವಜನಿಕರು ಸೇರಿಕೊಂಡು ಪಂಚಾಯತ್ ಕಛೇರಿವರೆಗೆ ಬೈಕ್ ಜಾಥಾ ನಡೆಸಿದರು.
ಗ್ರಾಮ ಪಂಚಾಯತ್ ಕಛೇರಿ ಮುಂಭಾಗದಲ್ಲಿ ಅಧ್ಯಕ್ಷೆ ಶಾಲಿನಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರೋಹಿಣಿ ಬಿ.ಹಾಗೂ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಪೂರ್ಣ ಕುಂಭ ಸ್ವಾಗತ ನಡೆಸಿ ಶಾಲಾ ಮಕ್ಕಳ ಬ್ಯಾಂಡ್ ಸೆಟ್ ನೊಂದಿಗೆ ಜಾಥಾವನ್ನು ಶಾಲಾ ಆವರಣದೊಳಗೆ ಬರಮಾಡಿಕೊಂಡರು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾಲಿನಿ ಕೆ ಸಾಲಿಯಾನ್ ಅಂಬೇಡ್ಕರ್ ಪುತ್ತಳಿಗೆ ಹಾರಾರ್ಪಣೆ ಮಾಡಿದರು.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಲೋಕೇಶ್ ಮಾತನಾಡಿ ಜನರಲ್ಲಿ ಸಂವಿಧಾನ ಬಗ್ಗೆ ಅರಿವು ಮೂಡಿಸುವ ಬಹಳ ಉತ್ತಮ ಕಾರ್ಯಕ್ರಮ ಇದನ್ನ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಮಾಜಿ ಸೈನಿಕ ಎಂ.ಜಿ ಮೊಹಮ್ಮದ್ , ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಡಾ. ಪ್ರತಿಮಾ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಯಮುನಾ ಕೆ ಪುಷ್ಪಾoಜಲಿ ಸಲ್ಲಿಸಿದರು.
ಶಾಲಾ ವಿದ್ಯಾರ್ಥಿಗಳು ಸಂವಿಧಾನ ಪೀಟಿಕೆ ಕಂಠಪಾಠವಾಗಿ ಹೇಳಿದರು. ನಂತರ ಜಿಲ್ಲಾಡಳಿತದ ವತಿಯಿಂದ ಸಂವಿಧಾನ ಜಾಗ್ರತಿ ಕಲಾ ತಂಡದವರು ಸಂವಿಧಾನ ಜಾಗ್ರತಿ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಿ ಕೊಟ್ಟರು.
ಸಂವಿಧಾನ ಪೀಠಿಕೆ ಕಂಠ ಪಾಠ ಸ್ಪರ್ಧೆ ಯಲ್ಲಿ ವಿಜೇತ ಮಕ್ಕಳಿಗೆ ಶಾಲಿನಿ ಬಹುಮಾನ ವಿತರಿಸಿದರು.
ಪಿಡಿಒ ರೋಹಿಣಿ ಬಿ ಸ್ವಾಗತಿಸಿ ವಂದಿಸಿದರು.
0 Comments