ಕಾರು ಡಿಕ್ಕಿ ಹೊಡೆದು ಕಾಲು ಕಳೆದುಕೊಂಡ ವ್ಯಕ್ತಿಗೆ ಸ್ಕೂಟರ್ ನೀಡಿದ ಕೋಟ

ಜಾಹೀರಾತು/Advertisment
ಜಾಹೀರಾತು/Advertisment

 ಕಾರು ಡಿಕ್ಕಿ ಹೊಡೆದು ಕಾಲು ಕಳೆದುಕೊಂಡ ವ್ಯಕ್ತಿಗೆ ಸ್ಕೂಟರ್ ನೀಡಿದ ಕೋಟ

ಕುಂದಾಪುರ ವಿಧಾನಸಭಾ ಕ್ಷೇತ್ರದ ಸಿರಿಯಾರ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಸುಬ್ರಹ್ಮಣ್ಯ ಕುಲಾಲ್ ಎಂಬವರು ರಸ್ತೆ ಬದಿಯಲ್ಲಿ ಮಾತನಾಡುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದ ರಭಸದಲ್ಲಿ ಕಾಲು ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದ್ದು ಬಡ ಕುಟುಂಬದ ಸುಬ್ರಹ್ಮಣ್ಯರ ಜೀವನಕ್ಕೆ ತೊಂದರೆಯಾಗಿತ್ತು.


ದೈನಂದಿನ ದುಡಿಮೆಯಿಂದ ಜೀವನ ಸಾಗಿಸುತ್ತಿದ್ದ ಅಂತಹ ಕುಟುಂಬಕ್ಕೆ ಅದು ದೊಡ್ಡ ಹೊಡೆತವೆ. ಈ ವಿಷಯ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಕೋಟ ಶ್ರೀನಿವಾಸ ಪೂಜಾರಿಯವರ ಗಮನಕ್ಕೆ ಬಂದ ಕೂಡಲೇ ತನ್ನ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಡಿ ಒಂದು ಸ್ಕೂಟರ್‌ನ್ನು ಮಂಜೂರುಗೊಳಿಸಿದ್ದಾರೆ. ತಮ್ಮ ಕೋಟದ ಮನೆಯಲ್ಲಿ ಈ ಸ್ಕೂಟರ್‌ನ್ನು ಸುಬ್ರಹ್ಮಣ್ಯ ರವರ ಕುಟುಂಬದ ಸದಸ್ಯರ‌ ಸಮ್ಮುಖದಲ್ಲಿ ಹಸ್ತಾಂತರ ಮಾಡಿದರು. ಮೂರು ಚಕ್ರದ ವ್ಯವಸ್ಥೆ ಮಾಡಿ ವಾಹನ ಚಲಾಯಿಸಲು ಸರಳವಾಗುವಂತೆ ವ್ಯವಸ್ಥೆ ಮಾಡಲಾಗಿದೆ.

Post a Comment

0 Comments