ಪರಮಪೂಜ್ಯ ೧೦೮ ಸಂತ ಶಿರೋಮಣಿ ಆಚಾರ್ಯ ವಿದ್ಯಾ ಸಾಗರ ಶ್ರೀ ಮುನಿ ಮಹಾರಾಜ್ ಶನಿವಾರ ಮಧ್ಯರಾತ್ರಿ ಸಮಾಧಿಯಾಗಿದ್ದಾರೆ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ: ಜೈನ ಧರ್ಮದ ಪರಂಪರೆಯ ಭವ್ಯ ಹರಿಕಾರ, ಮಹಾ ತಪಸ್ವಿ ಸಾಮ್ರಾಟ ಪರಮಪೂಜ್ಯ ೧೦೮ ಸಂತ ಶಿರೋಮಣಿ ಆಚಾರ್ಯ ವಿದ್ಯಾ ಸಾಗರ ಶ್ರೀ ಮುನಿ ಮಹಾರಾಜ್ ಶನಿವಾರ ಮಧ್ಯರಾತ್ರಿ ಸಮಾಧಿಯಾಗಿದ್ದಾರೆ.

ಸಂತ ಶಿರೋಮಣಿ ಆಚಾರ್ಯ ವಿದ್ಯಾ ಸಾಗರ ಮುನಿರಾಜ್  ದಿಗಂಬರ ಸಂತರ ಪರಮೋಚ್ಚ ಗುರು.  ಮಹಾನ್ ತಪಸ್ವಿಯಾದ ಅವರು ದಾರ್ಶನಿಕ. ಭಾರತೀಯ ಶ್ರಮಣ ಸಂಸ್ಕೃತಿ ಯ ಶ್ರೇಷ್ಠ ಸಾಧಕರು. ಅದಿವಾಸಿ ಬಡ ಜನರ ಕಲ್ಯಾಣ ಕ್ಕಾಗಿ ಚರಕದಿಂದ ಹತ್ತಿ ಬಟ್ಟೆ ತಯಾರಿಸುವ ಘಟಕ  ನಿರ್ಮಿಸಲು ಹಾಗೂ ಸ್ತ್ರೀ  ಶಿಕ್ಷಣ ಸಂಸ್ಥೆ ತೆರೆಯಲು ಪ್ರೇರಕರಾಗಿದ್ದಾರೆ. ಅವರ ಸಮಾಧಿ ಪೂರ್ವಕ ಅಗಲಿದ ದಿವ್ಯ ಆತ್ಮ ಕ್ಕೆ ಉತ್ತಮ ಸದ್ಗತಿಸಿಗಲಿ ಎಂದು ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ  ಪಂಡಿತಾಚಾರ್ಯ ವರ್ಯ  ಸ್ವಾಮೀಜಿ ಅವರು ಶ್ರೀ ವೀತರಾಗ ಜಿನ ಭಗವಂತರಲ್ಲಿ ಪ್ರಾರ್ಥಿಸಿದ್ದಾರೆ.


-

Post a Comment

0 Comments