ಮಂಗಳೂರಿನ ಮತ್ತೊಂದು ಬೃಹತ್ ಕಾಮಗಾರಿ ಲೋಕಾರ್ಪಣೆ ಮಾಡಲಿರುವ ಪ್ರಧಾನಿ ಮೋದಿ:132 ಕೋಟಿಯ 3 ಹಾಸ್ಟೆಲ್ ಸಿದ್ಧ
ಕೇಂದ್ರ ಸರಕಾರದ CPWD (ಸೆಂಟ್ರಲ್ ಪಬ್ಲಿಕ್ ವರ್ಕ್ ಡಿಪಾರ್ಟ್‌ಮೆಂಟ್) ಮೂಲಕ ನಿರ್ಮಾಣಗೊಂಡಿರುವ ಸುರತ್ಕಲ್‌ನಲ್ಲಿರುವ NITK ಯ ಬಾಲಕಿಯರ ಮತ್ತು ಬಾಕಲರ ವಸತಿ ನಿಲುವನ್ನು ದೇಶದ ಪ್ರಧಾನಿ ನರೇಂದ್ರ ಮೋದಿಯವರು ಫೆಬ್ರವರಿ 20 ಮಧ್ಯಾಹ್ನ 12.00 ಗಂಟೆಗೆ ವರ್ಚುವಲ್ ಮೂಲಕ ಉದ್ಘಾಟಿಸಲಿದ್ದಾರೆ.
ಸಂಸದ ನಳಿನ್ ಕುಮಾರ್ ಕಟೀಲುರವರ ಮನವಿಯ ಮೇರೆಗೆ ನೂತನವಾಗಿ ನಿರ್ಮಾಣಗೊಂಡ 37.88 ಕೋಟಿ ರೂಪಾಯಿ ವೆಚ್ಚದ ಬಾಲಕಿಯರ ಹಾಸ್ಟೆಲ್, 51.14 ಕೋಟಿ ರೂಪಾಯಿ ಹಾಗೂ 43 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಬಾಲಕರ ಹಾಸ್ಟೆಲ್ ಲೋಕಾರ್ಪಣೆಗೊಳ್ಳಲಿದೆ.
0 Comments