ಮೂಡುಬಿದಿರೆ : ಫೆ 11- 17ರವರೆಗೆ ಆದಿಶಕ್ತಿ ದೇವಸ್ಥಾನದಲ್ಲಿ ಬ್ರಹ್ಮಕಲಶಾಭಿಷೇಕ
ಮೂಡುಬಿದಿರೆ : ಇಲ್ಲಿನ ಸ್ವರಾಜ್ಯ ಮೈದಾನದ ಬಳಿಯಿರುವ ಪುರಾತನ ಆದಿಶಕ್ತಿ ಮಹಾಕಾಳಿ ದೇವಸ್ಥಾನದಲ್ಲಿ ಫೆ ೧೧ರಿಂದ ೧೭ರವರೆಗೆ ಬ್ರಹ್ಮಕಲಶಾಭಿಷೇಕ ನಡೆಯಲಿದ್ದು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್‍ಯಕ್ರಮಗಳು ನಡೆಯಲಿದೆ.
ಸಮಿತಿಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ಕುರಿತು ಮಾಹಿತಿ ನೀಡಿದ ಅವರು ಸುಮಾರು ೬೦೦ ವರ್ಷಗಳಷ್ಟು ಪುರಾತನವಾಗಿರುವ ಈ ಕ್ಷೇತ್ರವನ್ನು ೧೪ ವರ್ಷಗಳ ಹಿಂದೆ ಜೀರ್ಣೋದ್ಧಾರಗೊಳಿಸಿ ಬ್ರಹ್ಮಕಲಶಾಭಿಷೇಕ ನಡೆಸಲಾಗಿತ್ತು. ಬ್ರಹ್ಮಕಲಶೋತ್ಸವಕ್ಕಾಗಿ ಸುಮಾರು ೫೦ ಲಕ್ಷ ರೂ. ಯೋಜನೆ ರೂಪಿಸಿದ್ದು ಕಾರ್ಯಕ್ರಮದ ಯಶಸ್ಸಿಗಾಗಿ ೨೦ ಸಮಿತಿಗಳನ್ನು ರಚಿಸಲಾಗಿದೆ. ಫೆ. ೮ರಂದು ಸಂಜೆ ೩ ಗಂಟೆಗೆ ವೆಂಕಟರಮಣ ದೇವಸ್ಥಾನದ ಬಳಿಯಿಂದ ಭವ್ಯ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ.
ಇದರ ವ್ಯಾಪ್ತಿಯಲ್ಲಿರುವ ಗ್ರಾಮಗಳ ಭಕ್ತರೂ ಸೇರಿದಂತೆ ಒಂದು ಸಾವಿರ ಮಂದಿ ಈ ಹೊರೆಕಾಣಿಕೆಯಲ್ಲಿ ಭಾಗವಹಿಸಲಿದ್ದಾರೆ.
ಫೆ. ೧೧ರಂದು ಬ್ರಹ್ಮಕಲಶಾಭಿಷೇಕ, ಫೆ ೧೬ರಂದು ವಾರ್ಷಿಕ ರಾಶಿಪೂಜೆ ಮಹೋತ್ಸವ ನಡೆಯಲಿದೆ. ಬೆಳ್ಳಿಕಲಶ, ತಾಮ್ರದ ಕಲಶದ ಸೇವೆ ಸಲ್ಲಿಸಲು ಅವಕಾಶವಿದೆ. ತೋಡಾರು ದಿವಾಕರ ಶೆಟ್ಟಿ, ರಾಜಾರಾಮ ನಾಗರಕಟ್ಟೆ ಪೂರಕ ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮೊಕ್ತೇಸರ ರಾಜ್‌ಮೋಹನ ಶೆಟ್ಟಿ, ಕೃಷ್ಣ, ಭರತ್ ಮತ್ತಿತರರು ಉಪಸ್ಥಿತರಿದ್ದರು.
0 Comments