ತೆಂಕಮಿಜಾರು: ಅಹವಾಲು ಸ್ವೀಕೃತಿ ಮತ್ತು ಸವಲತ್ತು ವಿತರಣೆ

ಜಾಹೀರಾತು/Advertisment
ಜಾಹೀರಾತು/Advertisment

 ತೆಂಕಮಿಜಾರು: ಅಹವಾಲು ಸ್ವೀಕೃತಿ ಮತ್ತು ಸವಲತ್ತು ವಿತರಣೆ



ಮೂಡುಬಿದಿರೆ: ತೆಂಕಮಿಜಾರು ಗ್ರಾಮ ಪಂಚಾಯತ್ ವತಿಯಿಂದ ಪಂಚಾಯತ್  ವ್ಯಾಪ್ತಿಯ ಬಡಗಮಿಜಾರು ಹಾಗೂ ತೆಂಕಮಿಜಾರು ಗ್ರಾಮದ ಪ.ಜಾತಿ ಮತ್ತು ಪ.ಪಂಗಡ ಕುಟುಂಬಗಳ ಅಹವಾಲು ಸ್ವೀಕೃತಿ ಹಾಗೂ ಸವಲತ್ತು ವಿತರಣಾ ಸಮಾರಂಭವು ಮಂಗಳವಾರ ಸಂತೆಕಟ್ಟೆ ವಿವಿಧೋದ್ದೇಶ ಸಭಾಂಗಣದಲ್ಲಿ  ನಡೆಯಿತು.


  ಗ್ರಾ.ಪಂಚಾಯತ್ ಅಧ್ಯಕ್ಷೆ ಶಾಲಿನಿ ಕೆ.ಸಾಲ್ಯಾನ್ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

  ಗ್ರಾ.ಪಂ.ವ್ಯಾಪ್ತಿಯ ಗುಂಡೀರು ಪ್ರದೇಶದಲ್ಲಿ ಕೊರಗ ಸಮುದಾಯದ 16 ಕುಟುಂಬಗಳು  ವಾಸಿಸುತ್ತಿದ್ದು ಅದರಲ್ಲಿ 4 ಕುಟುಂಬಗಳ ಪಡಿತರ ಚೀಟಿಯು ಸರಿಯಾಗಿಲ್ಲದಿರುವುದರಿಂದ ರೇಶನ್ ಪಡೆಯಲು ಕಷ್ಟವಾಗಿದೆ ಈ ಬಗ್ಗೆ ಸರಿ ಪಡಿಸಲು ಹಲವು ಬಾರಿ ಸಂಬಂಧಿಸಿದ ಕಛೇರಿಗಳಿಗೆ ಭೇಟಿ ನೀಡಿದಾಗ ಸರ್ವರ್ ನ  ಸಮಸ್ಯೆಯಿಂದ ಹಿಂದೆ ಬರುವಂತ್ತಾಗಿದೆ ಅಲ್ಲದೆ ಬೇರೆ ಬೇರೆ ಕಡೆಗೆ ಹೋಗಿ ಸರಿ ಪಡಿಸುವಂತೆ ಹೇಳುತ್ತಿದ್ದಾರೆ ಇದು ನಮಗೆ ಕಷ್ಟ ಸಾಧ್ಯವಾಗಿದೆ ಅಲ್ಲದೆ ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆ ತಲೆದೂರುತ್ತದೆ ನಾವು ಹಣ ಕೊಟ್ಟು ಟ್ಯಾಂಕರ್ ಮೂಲಕ ನೀರು ಖರೀದಿಸುವ ಪರಿಸ್ಥಿತಿಯಿದೆ  ಎಂದು ಕಾಪಿರ ಅವರು ಸಭೆಯ ಗಮನಕ್ಕೆ ತಂದರು.


   ನೀರಿನ ಸಮಸ್ಯೆಯನ್ನು ನೀಗಿಸುವ ನಿಟ್ಟಿನಲ್ಲಿ ಈ ಬಾರಿ ಬೋಲ್ ವೆಲ್ ಕೊರೆಯಲಾಗುವುದು ಮತ್ತು ಟ್ಯಾಂಕ್ ನಿರ್ಮಿಸಲಾಗುವುದು. ಪಡಿತರ ಚೀಟಿಯ ಸಮಸ್ಯೆಯನ್ನು ಬಗೆ ಹರಿಸುವ ನಿಟ್ಟಿನಲ್ಲಿ ಆಹಾರ ಇಲಾಖೆಯ ಡಿಟಿ ಅವರ ಗಮನಕ್ಕೆ ತರಲಾಗುವುದು ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ರೋಹಿಣಿ ಭರವಸೆ ನೀಡಿದರು.

ಗುಂಡೀರು ಪ್ರದೇಶದಲ್ಲಿರುವ ಕೆಲವರಿಗೆ ಮನೆ ಇಲ್ಲ ಎಂಬ ಬಗ್ಗೆ ಕೆಲವರು  ಸಭೆಯ ಗಮನಕ್ಕೆ ತಂದಾಗ ಸರಕಾರಿ ಜಾಗವನ್ನು ಅತಿಕ್ರಮಣ ಮಾಡಿಕೊಂಡವರಿಗೆ ಸಮಸ್ಯೆಯಾಗಿದೆ. ಕೆಲವರು ಟರ್ಪಾಲ್ ಹಾಕಿ ಕುಳಿತುಕೊಂಡವರು ಅದು ಬಿದ್ದು ಹೋದಾಗ ಅಲ್ಲಿಂದ ಬಂದು ಬೇರೆ ಮನೆಗಳಲ್ಲಿ ಕುಳಿತುಕೊಂಡವರಿಗೆ ಕಷ್ಟವಾಗಿದೆ. ಇನ್ನು ಕೆಲವರಿಗೆ ಜಾಗದ ನಕ್ಷೆಯಾಗಿದೆ, ರಿಜಿಸ್ಟ್ರೇಶನ್ ಆಗಿದೆ ಈ ಬಗ್ಗೆ ಮುಂದಿನ ದಿನಗಳಲ್ಲಿ ಸರಿಯಾಗಬಹುದು ಎಂದು ಪಿಡಿಒ ತಿಳಿಸಿದರು.

   ನಿವೇಶನಕ್ಕೆ ನಾವು ಅರ್ಜಿ ಕೊಟ್ಟರೂ ಪ್ರಯೋಜನವಾಗಿಲ್ಲ ಎಂಬ ಮಾತು ಗ್ರಾಮಸ್ಥರೋರ್ವರು ಹೇಳಿದಾಗ  ನಿಮ್ಮ ಅರ್ಜಿಗಳಿವೆ  ಈ ಬಗ್ಗೆ  ನಿಗಮದ ಪಟ್ಟಿಯಲ್ಲಿ ಸೇರ್ಪಡಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದು ಅಭಿವೃದ್ಧಿ ಅಧಿಕಾರಿ ತಿಳಿಸಿದರು.

  ಶೇ 25ರ ಅನುದಾನದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ 24 ಕುಟುಂಬದ  ಫಲಾನುಭವಿಗಳಿಗೆ  ಚೆಕ್ ನ್ನು ವಿತರಿಸಲಾಯಿತು.

   ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ  ವಲಯ ಮೇಲ್ವೀಚಾರಕಿ ಕಾತ್ಯಾಯಿನಿ ಇಲಾಖೆಯ ಮಾಹಿತಿಯನ್ನು ನೀಡಿದರು.

  ಗ್ರಾ.ಪಂ.ಉಪಾಧ್ಯಕ್ಷ ಕರುಣಾಕರ ಶೆಟ್ಟಿ, ಸದಸ್ಯರಾದ ಜಯಲಕ್ಷ್ಮೀ, ಯೋಗಿನಿ, ನಿಶಾ, ಗ್ರಾಮಕರಣಿಕೆ ದೀಪಿಕಾ,ಪ್ರಸಾದ್ ನೇತ್ರಾಲಯದ ಡಾ.ಅಹನಾ, ಆಳ್ವಾಸ್ ಹೋಮಿಯೋಪಥಿ ಆಸ್ಪತ್ರೆಯ ಸುಧಾ, ಕಲ್ಲಮುಂಡ್ಕೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಖಾದರ್ ಷಾ ಉಪಸ್ಥಿತರಿದ್ದರು.

    ಪಂಚಾಯತ್ ಸಿಬಂದಿಗಳಾದ ರಾಕೇಶ್ ಭಟ್ ಅವರು ಕಾರ್ಯಕ್ರಮ ನಿರೂಪಿಸಿದರು. ರಮೇಶ್ ಬಂಗೇರ ವಂದಿಸಿದರು.

Post a Comment

0 Comments