ಇರುವೈಲು ಭಜನಾ ಮಂಗಲೋತ್ಸವ ಸಂಪನ್ನ

ಜಾಹೀರಾತು/Advertisment
ಜಾಹೀರಾತು/Advertisment

 ಇರುವೈಲು ಭಜನಾ ಮಂಗಲೋತ್ಸವ ಸಂಪನ್ನ 



ಮೂಡುಬಿದಿರೆ : ಇರುವೈಲು ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂಡಳಿಯ 74 ನೇ ವರ್ಷದ ಭಜನಾ ಮಂಗಲೋತ್ಸವವು ಶ್ರೀದುರ್ಗಾಪರಮೇಶ್ವರೀ ಅಮ್ಮನವರ ಸನ್ನಿಧಿಯಲ್ಲಿ  ಭಾನುವಾರ ಸೂರ್ಯಾಸ್ತಕ್ಕೆ ಪ್ರಾರಂಭಗೊಂಡು ಸೋಮವಾರ ಸೂರ್ಯೋದಯದಲ್ಲಿ ಸಂಪನ್ನಗೊಂಡಿತು. 

ಸ್ಥಳೀಯ ಹಾಗೂ ವಿವಿದೆಡೆಯ ಭಜನಾ ಮಂಡಳಿಗಳು ಮತ್ತು ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ ನಡೆಯಿತು.


  ಭಾನುವಾರ ಬೆಳಿಗ್ಗೆ 7 ಗಂಟೆಗೆ ಗಣಹೋಮ, ಅಪ್ಪದ ಪೂಜೆ, ಶ್ರೀ ದೇವಿ ಅಮ್ಮನವರಿಗೆ ನವಕ, ಸರ್ವಾಲಂಕಾರ ಪೂಜೆ, ಮಹಾಪೂಜೆ, ಹಾಗೂ ಶ್ರೀ ನಾಗದೇವರಿಗೆ, ನಾಗಬ್ರಹ್ಮ, ಮಾಡ್ಲಾಯಿ ಹೊಸಮರಾಯ ದೈವಗಳಿಗೆ ತಂಬಿಲ ಸೇವೆ, ಮಧ್ಯಾಹ್ನ “ಅಪ್ಪದ ಪೂಜೆ" ಬಳಿಕ ಮಧ್ಯಾಹ್ನ ಮತ್ತು ರಾತ್ರಿ ಸಾರ್ವಜನಿಕ "ಅನ್ನಸಂತರ್ಪಣೆ" ನಡೆಯಿತು. ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಐ. ಕುಮಾರ್ ಶೆಟ್ಟಿ, ಸಮಿತಿಯ ಸರ್ವ ಸದಸ್ಯರು, ಪ್ರಧಾನ ಅರ್ಚಕ ಐ.ರಾಘವೇಂದ್ರ ಭಟ್, ಭಜನಾ ಮಂಡಳಿಯ ಅಧ್ಯಕ್ಷ ಬಾಲಚಂದ್ರ ಶೆಟ್ಟಿ, ಮಂಡಳಿಯ ಪದಾಧಿಕಾರಿಗಳು, ಸದಸ್ಯರು, ದೇವಸ್ಥಾನಕ್ಕೆ ಸಂಭಂದಪಟ್ಟ ಗುತ್ತುಬಾಳಿಕೆಗಳ ಪ್ರಮುಖರು,ದೇವಸ್ಥಾನದ ಸಿಬ್ಬಂದಿವರ್ಗ, ಭಕ್ತರು ಪಾಲ್ಗೊಂಡಿದ್ದರು. 

Post a Comment

0 Comments