ಧಾರ್ಮಿಕ ಶ್ರದ್ಧಾ ಕೇಂದ್ರಗಳು ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಬೇಕು

ಜಾಹೀರಾತು/Advertisment
ಜಾಹೀರಾತು/Advertisment

 ಧಾರ್ಮಿಕ ಶ್ರದ್ಧಾ ಕೇಂದ್ರಗಳು ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು  ಬೆಳೆಸಬೇಕು 


ಮೂಡುಬಿದಿರೆ: ಧಾರ್ಮಿಕ ಕೇಂದ್ರಗಳು ಹಿಂದೂ ಸಂಸ್ಕೃತಿ, ಸಂಸ್ಕಾರಗಳನ್ನು ಕಲಿಸುವ ಮೂಲಕ ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಬೇಕು ಎಂದು ಯಕ್ಷಗಾನ ಅರ್ಥಧಾರಿ, ಉಪನ್ಯಾಸಕ ಡಾ. ವಿನಾಯಕ ಭಟ್ ಗಾಳಿ ಮನೆ ಹೇಳಿದರು. ಶ್ರೀ ಕಾಳಿಕಾಂಬಾ ಮಹಿಳಾ ಸಮಿತಿಯ ವತಿಯಿಂದ ಮಕರ ಸಂಕ್ರಮಣದ ಅಂಗವಾಗಿ ಗುರುಮಠ ಕಾಳಿಕಾಂಬಾ ದೇವಸ್ಥಾನದಲ್ಲಿ ಏರ್ಪಡಿಸಲಾದ ವಿಶೇಷೋಪನ್ಯಾಸ `ಬದಲಾಗುತ್ತಿರುವ ಕಾಲಘಟ್ಟದಲ್ಲಿ ಹಿಂದೂ ಸಂಸ್ಕಾರಗಳು' ವಿಷಯದ ಕುರಿತು ಅವರು ಮಾತನಾಡಿದರು. 


ಹಿಂದೆ ಪಠ್ಯಗಳಲ್ಲಿ ನೈತಿಕ ಮೌಲ್ಯಗಳನ್ನು ಬೋಧಿಸಲಾಗುತ್ತಿತ್ತು. ಆದರೆ ಈಗ ಜಾತ್ಯಾತೀತತೆಯ ಹೆಸರಲ್ಲಿ ಅವುಗಳನ್ನು ಬದಲಾಯಿಸಲಾಗಿದೆ. 

ಬದಲಾವಣೆಯೆಂಬುದು ಬದುಕಿಗೆ ಬರಸಿಡಿಲಾಗಬಾರದು. ತಂಗಾಳಿಯಾಗಬೇಕು. ಬೆಳದಿಂಗಳಾಗಬೇಕು. ಪಠ್ಯಗಳಲ್ಲಿ ಅನ್ಯಮತಗಳನ್ನು ವೈಭವೀಕರಿಸಲಾಗುತ್ತಿದೆ. ಜೊತೆಗೆ ಹಿಂದೂ ಶ್ರದ್ಧಾಕೇಂದ್ರಗಳನ್ನು ಶಿಥಿಲಗೊಳಿಸುವ ಕಾರ‍್ಯವೂ ಸದ್ದಿಲ್ಲದೆ ನಡೆಯುತ್ತಿದೆ. ಹಿಂದೂಗಳಲ್ಲಿರುವ ಬಡತನ ಮತ್ತಿತರ ದೌರ್ಬಲ್ಯಗಳನ್ನು ಬಂಡವಾಳವನ್ನಾಗಿಸಿಕೊಂಡು ಮತಾಂತರಗೊಳಿಸುವ ಮೂಲಕ ಹಿಂದೂಗಳನ್ನು ದುರ್ಬಲಗೊಳಿಸುವ ಷಡ್ಯಂತ್ರವೂ ನಡೆಯುತ್ತಿದೆ. ಇದನ್ನು ತಡೆಯಬೇಕಾದರೆ ಪ್ರತೀ ಮನೆಗಳಲ್ಲಿ ಹಬ್ಬಗಳನ್ನು ಮಕ್ಕಳೆದುರು ಆಚರಿಸಬೇಕು, ಅದರ ಮಹತ್ವ ತಿಳಿಸಬೇಕು. ಭಾರತೀಯ ಉಡುಗೆ ತೊಡುಗೆಗಳನ್ನು ತೊಡಲು ಪ್ರೇರೇಪಿಸಬೇಕು ಎಂದರು.

ಕ್ಷೇತ್ರದ ಆಡಳಿತ ಮೊಕ್ತೇಸರ ಜಯಕರ ಆಚಾರ್ಯ ಕಾರ್ಯಕ್ರಮವನ್ನು  ಉದ್ಘಾಟಿಸಿದರು. ಮಹಿಳಾ ಸಮಿತಿ ಅಧ್ಯಕ್ಷೆ ಶಾಂತಲಾ ಸೀತಾರಾಮ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಮೊಕ್ತೇಸರರಾದ ಬಾಲಕೃಷ್ಣ ಆಚಾರ್ಯ, ಶಿವರಾಮ ಆಚಾರ್ಯ, ಕಾಳಿಕಾಂಬಾ ಸೇವಾ ಸಮಿತಿಯ ಅಧ್ಯಕ್ಷ ಶ್ರೀನಾಥ್ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.  ದೀಪಾ ರಾಜೇಶ್ ಆಚಾರ್ಯ ಅತಿಥಿಗಳನ್ನು ಪರಿಚಯಿಸಿದರು. ರಶ್ಮಿತಾ ಅರವಿಂದ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ಮಕರ ಸಂಕ್ರಮಣದ ಅಂಗವಾಗಿ ಉದಯರಾಗ ನಡೆಯಿತು ಹಾಗೂ ಭಕ್ತರಿಗೆ ಎಳ್ಳುಬೆಲ್ಲ ಹಂಚಲಾಯಿತು.

Post a Comment

0 Comments