ರಿಯಲ್ ಎಸ್ಟೇಟ್ ಉದ್ಯಮಿಯಿಂದ ಕರಿಂಜೆ ದೈವಸ್ಥಾನದ ಕಟ್ಟಡಕ್ಕೆ ಹಾನಿ
ಮೂಡುಬಿದಿರೆ : ರಿಯಲ್ ಎಸ್ಟೇಟ್ ಉದ್ಯಮಿಯೋರ್ವರು ಜೆಸಿಬಿ ಮೂಲಕ ಜಾಗ ಸಮತಟ್ಟು ಮಾಡಿಸುವ ವೇಳೆ ಕರಿಂಜೆಯ ಪುರಾತನ ಉಳ್ಳಾಲ್ದ ಕೋಟೆ ದೈವಸ್ಥಾನ ಕಟ್ಟಡದ ಬದಿಯವರೆಗೂ ಮಣ್ಣುನ್ನು ತೆರವುಗೊಳಿಸಿದರಿಂದ ದೈವಸ್ಥಾನದ ಕಟ್ಟಡಕ್ಕೆ ಹಾನಿ ಉಂಟು ಮಾಡಿದಲ್ಲದೆ; ಭಕ್ತರ ಜತೆ ಉಡಾಫೆಯಾಗಿ ವರ್ತಿಸಿ ಭಾವನೆಗಳಿಗೆ ಘಾಸಿಗೊಳಿಸಿದ ಘಟನೆ ನಡೆದಿದ್ದು ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಸುಮಾರು ೮೦೦ ವರ್ಷಗಳ ಇತಿಹಾಸ ಇವರು ಈ ದೈವಸ್ಥಾನದಲ್ಲಿ ಕೊಡಮಣಿತ್ತಾಯ, ಬ್ರಹ್ಮ ಬೈರ್ದಕಳ, ಮಾಹಿಂದಳೆ ದೇವಿಯನ್ನು ಇಲ್ಲಿನ ಗ್ರಾಮಸ್ಥರು ನೂರಾರು ವರ್ಷಗಳಿಂದ ಆರಾಧಿ ಸಿಕೊಂಡು ಬರುತ್ತಿದ್ದಾರೆ. ಇದಕ್ಕೆ ಹತ್ತಿರದಲ್ಲೇ ಹೊಸಂಗಡಿ ಅರಮನೆಗೆ ಸೇರಿದ ಜಾಗವಿದ್ದು ಒಂದು ಕಾಲದಲ್ಲಿ ಕೃಷಿ ಭೂಮಿಯಾಗಿದ್ದ ಈ ಜಾಗವನ್ನು ಇತ್ತೀಚೆಗೆ ಖಾಸಗಿ ವ್ಯಕ್ತಿಯೊಬ್ಬರು ವಾಣಿಜ್ಯ ಉದ್ದೇಶಕ್ಕಾಗಿ ಜೆಸಿಬಿ ಮೂಲಕ ಜಾಗವನ್ನು ಸಮತಟ್ಟುಗೊಳಿಸುತ್ತಿದ್ದರು.ಈ ಸಂದರ್ಭ ದೈವಸ್ಥಾನದ ಕಟ್ಟಡದ ಬದಿವರೆಗೂ ಬಂದು ಜೆಸಿಬಿಯಿಂದ ಮಣ್ಣನ್ನು ತೆಗೆಯುತ್ತಿರುವಾಗ ಆವರಣ ಗೋಡೆಗೆ ಹಾನಿಯಾಗಿದ್ದು ದೈವಸ್ಥಾನದ ಕಟ್ಟಡವು ಕುಸಿದು ಬೀಳುವ ಪರಿಸ್ಥಿತಿಯಲ್ಲಿತ್ತು ಈ ಘಟನೆಯ ಸುದ್ದಿ ತಿಳಿಯುತ್ತಿದಂತೆ ಗ್ರಾಮಸ್ಥರು ದೈವಸ್ಥಾನದಲ್ಲಿ ಸೇರಿ ಜೆಸಿಬಿ ಕೆಲಸಕ್ಕೆ ತಡೆ ಮಾಡಿದರು ಈ ವೇಳೆ ಉದ್ಯಮಿ ಕಾರ್ತಿಕ್ ಮತ್ತು ಗ್ರಾಮಸ್ಥರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಉಳ್ಳಾಲ್ದ ಕೋಟೆ ಜಾಗವು ಅರಮನೆಗೆ ಸೇರಿದೆಂದು ರೀಯಲ್ ಎಸ್ಟೇತ್ ಉದ್ಯಮಿ ವಾಧಿಸಿ ಗ್ರಾಮಸ್ಥರೊಂದಿಗೆ ತಕರಾರು ಎತ್ತಿದ್ದಲ್ಲದೆ ಹಿರಿಯರ ಜತೆ ಅಗೌರವದಿಂದ ವರ್ತಿಸಿದ್ದಾರೆನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಎರಡು ಕಡೆಗಳಿಂದ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಸದ್ಯ ಪೊಲೀಸರು ಜೆಸಿಬಿ ಕೆಲಸವನ್ನು ನಿಲ್ಲಿಸಿದ್ದಾರೆ.
------
21 ಕ್ಕೆ ಗ್ರಾಮಸ್ಥರ ಸಭೆ
ರೀಯಲ್ ಎಸ್ಟೇಟ್ ಉದ್ಯಮದ ಹೆಸರಿನಲ್ಲಿ ಪುರಾತನ ಉಳ್ಳಾಲ ಕೋಟಿ ಜಾಗವನ್ನು ಕಬಳಿಸಲು ಹುನ್ನಾರ ನಡೆಯುತ್ತಿದ್ದು, ಪುರಾತನ ಈ ದೈವಸ್ಥಾನವನ್ನು ಉಳಿಸುವ ನಿಟ್ಟಿನಲ್ಲಿ ಇದೇ ೨೧ ರಂದು ಬೆಳಗ್ಗೆ ೧೦ ಗಂಟೆಗೆ ದೈವಸ್ಥಾನದಲ್ಲಿ ಗ್ರಾಮಸ್ಥರ ಸಭೆಯನ್ನು ಕರೆಯಲಾಗಿದ್ದು ಅಲ್ಲಿ ಮುಂದಿನ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ದೈವಸ್ಥಾನದ ಆಡಳಿತದಾರ ಕರಿಂಜೆ ಗುತ್ತು ಕೃಷ್ಣರಾಜ್ ಹೆಗ್ಡೆ ಮಾಧ್ಯಮಕ್ಕೆ ತಿಳಿಸಿದ್ದಾರೆ.
0 Comments