ಮೂಡುಬಿದಿರೆ: ಶ್ರೀ ಆದಿಶಕ್ತಿ ಮಹಾಕಾಳಿ ದೇವಸ್ಥಾನ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ: ಶ್ರೀ ಆದಿಶಕ್ತಿ ಮಹಾಕಾಳಿ ದೇವಸ್ಥಾನ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ



ಮೂಡುಬಿದಿರೆ: ಇಲ್ಲಿನ ಶ್ರೀ ಆದಿಶಕ್ತಿ ಮಹಾಕಾಳಿ ದೇವಸ್ಥಾನದಲ್ಲಿ ಫೆಬ್ರವರಿ 11ರಂದು ನಡೆಯುವ ಸಾನಿಧ್ಯ ಬ್ರಹ್ಮಕಲಶೋತ್ಸವ ಪ್ರಯುಕ್ತ ಕಚೇರಿ ಉದ್ಘಾಟನೆ ಮತ್ತು ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಗುರುವಾರ ದೇವಸ್ಥಾನದ ಆವರಣದಲ್ಲಿ ನಡೆಯಿತು.

ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಧ್ಯಕ್ಷತೆ ವಹಿಸಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಅವರು ಮೂಡುಬಿದಿರೆ ಸುತ್ತಮುತ್ತಲಿನ 18 ಗ್ರಾಮಗಳಿಗೆ ಸಂಬಂಧಿಸಿದ ಈ ದೇವಸ್ಥಾನ  ಕೇವಲ ಧಾರ್ಮಿಕ ಚಿಂತನೆಯನ್ನು ಮೂಡಿಸುವ  ಪೂಜಾ ಕೇಂದ್ರವಾಗಿರದೆ ಶಾಸ್ತ್ರೀಯ ಚೌಕಟ್ಟಿನೊಂದಿಗೆ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿವೆ. ಕೀರ್ತಿಶೇಷರಾದ ಮುಂಡ್ರುದೆಗುತ್ತು ರಾಮ್ ಮೋಹನ್ ರೈ, ಅಮರನಾಥ ಶೆಟ್ಟಿ ಮತ್ತು ಪುತ್ತಿಗೆ ಗುತ್ತು ವಸಂತ ಶೆಟ್ಟಿ ಮತ್ತಿತರ ಪ್ರಮುಖರು   ಈ ದೇವಸ್ಥಾನಕ್ಕೆ ನೀಡಿದ ಕೊಡುಗೆ  ಅವಿಸ್ಮರಣೀಯ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬ್ರಹ್ಮಕಲಶೋತ್ಸವವನ್ನು ನಡೆಸಿ ದೇವಸ್ಥಾನದ ಹಿರಿಮೆಯನ್ನು ಮುಂದುವರಿಸೋಣ ಎಂದರು. 

 ಮಾಜಿ ಸಚಿವ, ಬ್ರಹ್ಮಕಲಶೋತ್ಸವ ಸಮಿತಿ ಗೌರವ ಅಧ್ಯಕ್ಷ ಅಭಯಚಂದ್ರ ಜೈನ್ ಮಾತನಾಡಿ ಆದಿಶಕ್ತಿ ಮಹಾಕಾಳಿ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ  ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಂಡು ಯಶಸ್ವಿಗೊಳಿಸಬೇಕೆಂದು ವಿನಂತಿಸಿದರು. 

ಬ್ರಹ್ಮಕಲಶೋತ್ಸವ ಸಮಿತಿ ಗೌರವ ಅಧ್ಯಕ್ಷ ಕೆ.ಶ್ರೀಪತಿ ಭಟ್,ಸಮಿತಿ ಪ್ರಮುಖರಾದ ನಾರಾಯಣ ಪಿ.ಎಂ, ಸುದರ್ಶನ್ ಎಂ., ಚಂದ್ರಶೇಖರ್ ಎಂ, ಮೂಡುಬರ್ಕೆ ಗೀತಾ ಅಂಚನ್ ಮತ್ತಿತರರು ಉಪಸ್ಥಿತರಿದ್ದರು. ಸಮಿತಿ ಪ್ರಧಾನ ಕಾರ್ಯದರ್ಶಿ ತೋಡಾರು ದಿವಾಕರ  ಶೆಟ್ಟಿ ನಿರೂಪಿಸಿದರು.

Post a Comment

0 Comments