ಶ್ರೀ ಕ್ಷೇತ್ರ ಅರ್ಜುನಪುರಕ್ಕೆ ವಿದ್ಯಾಧೀಶ ತೀರ್ಥ ಶ್ರೀಪಾದರು ಭೇಟಿ

ಜಾಹೀರಾತು/Advertisment
ಜಾಹೀರಾತು/Advertisment

 ಶ್ರೀ ಕ್ಷೇತ್ರ ಅರ್ಜುನಪುರಕ್ಕೆ ವಿದ್ಯಾಧೀಶ ತೀರ್ಥ ಶ್ರೀಪಾದರು ಭೇಟಿ

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಶ್ರೀ ಕ್ಷೇತ್ರ ಅರ್ಜುನಾಪುರ ಶಿರ್ತಾಡಿ-ವಾಲ್ಪಾಡಿ ಇಲ್ಲಿಯ ನವೀಕೃತ ದೇವಾಲಯದಲ್ಲಿ ನಡೆಯುತ್ತಿರುವ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಪೂರ್ವಭಾವಿಯಾಗಿ ನಡೆಯುವ ಧಾರ್ಮಿಕ ಕಾರ್ಯ ಕ್ರಮಗಳಲ್ಲಿ ಉಡುಪಿ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಭೇಟಿ ನೀಡಿ ಆಶೀರ್ವಚನಗೈದರು. ಹಳೆಯ ದೇವಸ್ಥಾನದ ಜೀರ್ಣೋದ್ಧಾರ ಮಂಗಳಕರವಾಡುದು. ದೇವರು ಭಕ್ತರ ಕೋರಿಕೆ ಈಡೇರಿಸಲು ಉತ್ಸುಕರಾಗಿದ್ದಾರೆ. ಹಳೆ ದೇವಸ್ಥಾನದಲ್ಲಿ ದೇವರು ಗಟ್ಟಿಯಾಗಿ ನೆಲೆಸಿರುತ್ತಾನೆ ಎಂದರು. ವೇದಮೂರ್ತಿ ಉಮಾಶಂಕರ ಭಟ್, ವೇ.ಮೂ.ಉಮೇಶ್ ಭಟ್, ವ್ಯವಸ್ಥಾ ಪನ ಸಮಿತಿ ಅಧ್ಯಕ್ಷ ಕೆ. ನಾರಾಯಣ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅಶೋಕ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪದ್ಮನಾಭ ಕೋಟ್ಯಾನ್,  ಸೇವಾ ಸಮಿತಿ ಅಧ್ಯಕ್ಷ ಬಲರಾಮ ಪ್ರಸಾದ್ ಭಟ್, ವ್ಯವಸ್ಥಾ ಪನ ಸಮಿತಿ ಸದಸ್ಯರು, ವಿವಿಧ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಇಂದು



ದುರ್ಗಾ, ಗಣಪತಿ ದೇವರುಗಳ ಬಿಂಬ ಶುದ್ಧಿ, ಅಘೋರಾಸ್ತ್ರ ಹೋಮ, ರಾತ್ರಿ ತುಳು ನಾಟಕ  ಕದಂಬ ನಡೆಯಿತು. ನಾಳೆ ಮಹಾಮೃತ್ಯುಂಜಯ ಯಾಗ, ಭಜನೆ, ದುರ್ಗಾ ನಮಸ್ಕಾರ ಪೂಜೆ, ಸುದರ್ಶನ ಯಾಗ, ಪಾಶುಪತಾಸ್ತ್ರ ಹೋಮ, ತುಳು ನಾಟಕ ನಡೆಯಲಿದೆ.

Post a Comment

0 Comments