ಪುಟಾಣಿ ಬಾಲರಾಮರನ್ನು ಕಾಣುವುದೇ ಮನಸ್ಸಿಗೆ ಆನಂದ

ಜಾಹೀರಾತು/Advertisment
ಜಾಹೀರಾತು/Advertisment

 ಪುಟಾಣಿ ಬಾಲರಾಮರನ್ನು ಕಾಣುವುದೇ ಮನಸ್ಸಿಗೆ ಆನಂದ



ಮಂಗಳೂರು:ಅಯೋಧ್ಯೆಯ ರಾಮ ಮಂದಿರ ಹಿಂದು ಬಾಂಧವರ ಸಾವಿರಾರು ವರ್ಷಗಳ ಕನಸೆಂದರೆ ತಪ್ಪಾಗಲಾರದು. ಆ ಕನಸೊಂದು ಇದೀಗ ನನಸಾಗಿದೆ.1528ರಲ್ಲಿ ಮೊಘಲರು ಕೆಡವಿ ಬಾಬರಿ ಮಸೀದಿಯನ್ನು ನಿರ್ಮಿಸಿದರು. ತದ ನಂತರದ ದಿನಗಳಲ್ಲಿ ಹಲವಾರು ವಿವಾದಗಳು ನಡೆದವು. ಈ ವಿವಾದಗಳ ನಡುವೆ 1992 ರಲ್ಲಿ ಕರಸೇವಕರ ಗುಂಪೊಂದು ಮಸೀದಿಯನ್ನು ಧ್ವಂಸಗೊಳಿಸಿದವು.

 ಮುಂದಿನ ಅವಧಿಯಲ್ಲಿ ಭಾರತದ ನೆಲದಲ್ಲಿ ಹಿಂದೂ-ಮುಸ್ಲಿಂ ಸಮುದಾಯಗಳ ನಡುವೆ ಹಲವಾರು ತಿಂಗಳುಗಳ ಕಾಲ ಗಲಭೆಗಳು ನಡೆದು ಹಲವಾರು ರಾಮಭಕ್ತರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟ ದಿನಗಳಾವು.ಸಾವಿರಾರು ವರ್ಷಗಳ ತಪಸ್ಸಿನ ಫಲವಾಗಿಯೋ ಏನೋ 2019 ನವಂಬರ್ 9 ರಂದು ಸುಪ್ರೀಂ ಕೋರ್ಟ್ ವಿವಾದಿತ ರಾಮ ಭೂಮಿಯನ್ನು ಸರ್ಕಾರ ರಚಿಸಿದ ಶ್ರೀ ರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಗೆ ಹಸ್ತಾಂತರಿಸಲು ನಿರ್ಧರಿಸಿತು.  ಈ ನಿರ್ಧಾರದನ್ವಯ 2020 ಫೆಬ್ರವರಿ 5 ರಂದು ಈ ಪ್ರದೇಶದಲ್ಲಿ ರಾಮಮಂದಿರವನ್ನು ಕಟ್ಟುವ ಕಾರ್ಯಕ್ಕೆ  ತೀರ್ಪು ನೀಡಿತು. ಅದರಂತೆ ಸಾವಿರಾರು ವರ್ಷಗಳ ಕನಸಿನ  ರಾಮಮಂದಿರ ಕೊನೆಗೂ ಇಂದು ಲೋಕಾರ್ಪಣೆಗೊಂಡಿದೆ. ಇದರ ಸಂಭ್ರಮವವು ನಾಡಿನ ಎಲ್ಲೆಡೆ ಮನೆ ಮಾತಾಗಿಸಿದೆ ನಾಡಿನ ಪ್ರತಿ ಮನೆಯಲ್ಲೂ ಹಬ್ಬದ ವಾತಾವರಣವನ್ನೇ ಸೃಷ್ಟಿಸುವಂತೆ ಮಾಡಿದ ಸುಂದರ ಕ್ಷಣ.

 ಈ ನೆನಪಿನ ದಿನವನ್ನು ಪೋಷಕರು, ರಾಮಭಕ್ತರು ತಮ್ಮ ಮಕ್ಕಳಿಗೆ ರಾಮ-ಲಕ್ಷ್ಮಣ, ಸೀತೆ, ಹನುಮಂತರ ವೇಷಭೂಷಣವನ್ನು ಧರಿಸಿ ಮರ್ಯಾದಾಪುರುಷೋತ್ತಮ ಶ್ರೀರಾಮಚಂದ್ರ ತನ್ನ ಅಯೋಧ್ಯೆಯಲ್ಲಿ ಹೇಗೆ ಕಂಗೊಳಿಸುತ್ತಿರುವನೆಂಬ ಊಹೆಯನ್ನು ಮಾಡಿಕೊಂಡು ಅದರಂತೆ ತಮ್ಮ ಮಕ್ಕಳನ್ನು ಸಿದ್ದ ಗೊಳಿಸಿ ಮನೆಯಲ್ಲೇ ರಾಮನನ್ನು ಕಂಡು ಸಂತೋಷ ಪಟ್ಟಿದ್ದಾರೆ. 

ಎಲ್ಲಿ ನೋಡಿದರೂ ಪ್ರಭು ಶ್ರೀರಾಮ-ಲಕ್ಷ್ಮಣ, ಸೀತೆ, ಹನುಮಂತರನ್ನು ಹೋಲುವ ಮಕ್ಕಳ ಮುದ್ದಾದ ಭಾವಚಿತ್ರಗಳನ್ನು ಕಾಣುವುದೇ ಕಣ್ಣಿಗೆ ಹಬ್ಬ. ಹೀಗೆ ನಾಡಿನಾದ್ಯಂತ ಎಲ್ಲಾ ರಾಮಭಕ್ತರು ತಮ್ಮ ತಮ್ಮ ಮನೆಯಲ್ಲಿಯೇ ಅಯೋಧ್ಯೆಯ ಶ್ರೀರಾಮಚಂದ್ರನನ್ನು ಕಂಡು ಭಾವುಕರಾಗಿ ತಾವುಗಳೆ ಧನ್ಯೋಸ್ಮಿಗಳೆಂದುಕೊಳ್ಳುತ್ತಿದ್ದಾರೆ. ಈ ದಿನವನ್ನು ದೀಪಾವಳಿ ಹಬ್ಬದ ದಿನದಂತೆ ಮನೆಯಂಗಳದಲ್ಲಿ ದೀಪ ಹಚ್ಚಿ ಸಂಭ್ರಮಿಸಿರುವುದು ಮತ್ತೊಂದು ತರಹದ ಹಬ್ಬ. ಅಯೋಧ್ಯಾ ಶ್ರೀ ರಾಮಮಂದಿರ ಪ್ರತಿಷ್ಠಾಪನಾ ದಿನವು ನಾಡಿನಾದ್ಯಂತ ಕೋಟ್ಯಾಂತರ ಬಾಲರಾಮರ ಮೂಲಕ ಆ ಪ್ರಭು ಶ್ರೀ ರಾಮಚಂದ್ರನನ್ನೇ ನೋಡಿದಷ್ಟು ಉತ್ಸಾಹ, ಸಂತೋಷ ಆನಂದವನ್ನುಂಟು ಮಾಡಿದೆ. ಸಾವಿರಾರು ವರ್ಷಗಳ ಹಿಂದು ಬಾಂಧವರ ಕನಸಿನ ರಾಮಮಂದಿರವನ್ನು ಕಡೆಗೂ ಕಟ್ಟಿಯೇ ಬಿಟ್ಟೆವು ಎಂಬ ಗರ್ವ ರಾಮಭಕ್ತರಲ್ಲಿ , ರಾಮನಲ್ಲಿರುವ ಭಕ್ತಿಯನ್ನು ದೃಡಗೊಳಿಸಿದೆ.

Post a Comment

0 Comments