:ಪೊಲೀಸರ ಬಲೆಗೆ ಬಿದ್ದ ರಾಧಿಕಾ ಕಾಸರಗೋಡು: ಧರ್ಮಸ್ಥಳ ದೇವಸ್ಥಾನ ಹಾಗೂ ಹೆಗ್ಗಡೆ ಕುಟುಂಬದ ವಿರುದ್ಧ ಕೆಳಮಟ್ಟದ ಹೇಳಿಕೆ ವಿಚಾರ
ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ನಿರಂತರ ಅವಹೇಳಕಾರಿ, ಸಮುದಾಯದ ನಡುವೆ ಕಲಹ ಉಂಟುಮಾಡುವ, ಶಾಂತಿ ಕದಡುವ ಸಂದೇಶ ರಾವಾನೆ ಮಾಡುತ್ತಿದ್ದ ಆರೋಪಿ ಅನಿತಾ ಕಾಸರಗೋಡು ಅಲಿಯಾಸ್ ರಾಧಿಕಾ ಕಾಸರಗೋಡು ಎಂಬ ಮಹಿಳೆಯನ್ನು ಮೂಡಬಿದಿರೆಯ ಪೋಲೀಸರು ಬಂಧಿಸಿದ್ದಾರೆ.
ಜಿತೇಂದ್ರ ಜೈನ್ ಎಂಬುವವರು ನೀಡಿದ ದೂರಿನ ಆಧಾರದಲ್ಲಿ ಅನಿತಾ ಕಾಸರಗೋಡು ಅಲಿಯಾಸ್ ರಾಧಿಕಾ ಕಾಸರಗೋಡು ಹಾಗೂ ಅಂಬಿಕಾ ಪ್ರಭು, ಸಮರ್ ಆಳ್ವಾ ವಿರುದ್ಧ ಪ್ರಕರಣ ದಾಖಲಾಗಿತ್ತು. ಅದರೆ ಈ ಕುರಿತು ಯಾವುದೇ ಕ್ರಮ ಆಗಿಲ್ಲದ ಕಾರಣ ಬೆಂಗಳೂರಿನ ಹೈಕೋರ್ಟ್ ನಲ್ಲಿ ದಾವೆ ಹೂಡಲಾಗಿತ್ತು. ಇಂದು ಹೈಕೋರ್ಟ್ ಗೆ ಸಿದ್ದಪ್ಪ ನರವೂರ ಎಂಬ ಪೋಲೀಸ್ ಅಧಿಕಾರಿ ಹಾಜರಾಗಿ ಪೋಲೀಸ್ ಇಲಾಖೆ ಪ್ರಾಮಾಣಿಕವಾಗಿ ಮತ್ತು ಕಾನೂನು ಪ್ರಕಾರ ತನಿಖೆ ನಡೆಸುತ್ತಿದ್ದು, ಆರೋಪಿ ಅನಿತಾ ಕಾಸರಗೋಡು ಅಲಿಯಾಸ್ ರಾಧಿಕಾ ಕಾಸರಗೋಡು ಈಗಾಗಲೇ ಬಂಧಿಸಿದ್ದು, ಇನ್ನುಳಿದ ಆರೋಪಿಗಳಾದ ಅಂಬಿಕಾ ಪ್ರಭು, ಸಮರ್ ಆಳ್ವಾ ಅವರಿಗೆ ಶೋಧ ನಡೆಯುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ.
0 Comments