ಸ್ಪೆಶಲ್ ಒಲಿಂಪಿಕ್ಸ್- ವಲಯ ಮಟ್ಟದ ಕಾರ್ಯಾಗಾರ
ಮೂಡುಬಿದಿರೆ: ರಾಜ್ಯದ ಗ್ರಾಮಾಂತರ ಪ್ರದೇಶದಲ್ಲಿ ವಿಶೇಷ ಮಕ್ಕಳ ಬಗ್ಗೆ ಗಂಭೀರವಾಗಿ ಚಿಂತನೆ ನಡೆಯುತ್ತಿಲ್ಲ. ಶಿಕ್ಷಣ, ಕ್ರೀಡೆ ಸಹಿತ ಗ್ರಾಮಾಂತರ ಪ್ರದೇಶದಲ್ಲಿರುವ ವಿಶೇಷ ಮಕ್ಕಳಿಗೂ ಗರಿಷ್ಠ ಪ್ರಮಾಣದ ಅವಕಾಶ ಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನವಾಗಬೇಕಾಗಿದೆ ಎಂದು ಸ್ಪೆಷಲ್ ಒಲಿಂಪಿಕ್ಸ್ ಭಾರತ್ ಕರ್ನಾಟಕ ರಾಜ್ಯಾಧ್ಯಕ್ಷೆ, ಶಾಸಕಿ ಶಶಿಕಲಾ ಜೊಲ್ಲೆ ತಿಳಿಸಿದರು.
ಮೂಡುಬಿದಿರೆ ಅರಮನೆ ಬಾಗಿಲು ರಸ್ತೆಯಲ್ಲಿರುವ ಸ್ಫೂರ್ತಿ ವಿಶೇಷ ಮಕ್ಕಳ ಶಾಲೆಯಲ್ಲಿ ಸೋಮವಾರ ನಡೆದ ದ.ಕ., ಉಡುಪಿ, ಉತ್ತರ ಕನ್ನಡ, ಕೊಡಗು ಜಿಲ್ಲೆಗಳ ವ್ಯಾಪ್ತಿಯ ಉಡುಪಿ ವಲಯ ಮಟ್ಟದ ಸ್ಪೆಷಲ್ ಒಲಿಂಪಿಕ್ಸ್ ಭಾರತ್ ಕರ್ನಾಟಕ ವಿಶೇಷ ಶಿಕ್ಷಕರ ತರಬೇತಿ ಕಾರ್ಯಾಗಾರ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸ್ಪೆಷಲ್ ಒಲಿಂಪಿಕ್ಸ್ ದ.ಕ. ಜಿಲ್ಲಾ ಸಮಿತಿ ಅಧ್ಯಕ್ಷ, ಸ್ಫೂರ್ತಿ ವಿಶೇಷ ಮಕ್ಕಳ ಶಾಲೆಯ ಸಂಸ್ಥಾಪಕ ಪ್ರಕಾಶ್ ಜೆ. ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಮಾನ್ಯ ಶಾಲೆಗಳಲ್ಲಿ ಓದುತ್ತಿರುವ ವಿಶೇಷ ಮಕ್ಕಳಿಗಾಗಿ ನಡೆಸಲಾಗುವ ವಿಶೇಷ ಕ್ರೀಡಾಕೂಟದಲ್ಲಿ ವಿಶೇಷ ಶಾಲಾ ಮಕ್ಕಳಿಗೆ ಅವಕಾಶ ಕೊಡುತ್ತಿಲ್ಲದಿರುವುದನ್ನು ರಾಜ್ಯಾಧ್ಯಕ್ಷರ ಗಮನಕ್ಕೆ ತಂದು ಎಲ್ಲ ವಿಶೇಷ ಮಕ್ಕಳಿಗೂ ಸಮಾನ ಅವಕಾಶ ಕಲ್ಪಿಸಿಕೊಡಬೇಕಾಗಿದೆ ಎಂದು ಮನವಿ ಮಾಡಿದರು.
ಶಿಕ್ಷಕರು, ಹೆತ್ತವರು, ಪ್ರತಿನಿಧಿಗಳ ಜತೆಗೂಡಿ ಉದ್ಘಾಟಿಸಿದರು.
ಉಪಾಧ್ಯಕ್ಷೆ ರೂಪ್ ಸಿಂಗ್, ಕಾರ್ಯದರ್ಶಿ, ಅಮರೇ0ದ್ರ ಎ, ಜಿಲ್ಲಾ ಕೋಶಾಧಿಕಾರಿ ಶ್ರುತಿ, ಮೂಡುಬಿದಿರೆ ರೋಟರಿ ಕ್ಲಬ್ ಅಧ್ಯಕ್ಷ ನಾಗರಾಜ್ ಬಿ., ಹಿರಿಯ ಸಲಹೆಗಾರ ಪ್ರೇಮನಾಥ ಉಳ್ಳಾಲ ಉಪಸ್ಥಿತರಿದ್ದರು.
ಸ್ಪೆಷಲ್ ಒಲಿಂಪಿಕ್ಸ್ ನ ಜಿಲ್ಲಾ ಕ್ರೀಡಾ ನಿರ್ದೇಶಕ ಮಹಮದ್ ತುಂಬೆ ಸ್ವಾಗತಿಸಿದರು.
ರಾಜ್ಯ ಕ್ರೀಡಾ ನಿರ್ದೇಶಕ ನಾರಾಯಣ ಶೇರಿಗಾರ್ ಕಾರ್ಯಕ್ರಮ ನಿರೂಪಿಸಿ ಜಿಲ್ಲಾ ಉಪಾಧ್ಯಕ್ಷೆ ಪ್ರೇಮಾ ಗಣೇಶ್ ವಂದಿಸಿದರು.
ನಾಲ್ಕು ಜಿಲ್ಲೆಗಳಿಂದ ೮೫ ಮಂದಿ ತರಬೇತಿಯಲ್ಲಿ ಪಾಲ್ಗೊಂಡಿದ್ದರು. ಮುಂದೆಯೂ ಈ ತರಬೇತಿಯ ಮುಂದುವರಿದ ಕಾರ್ಯಾಗಾರಗಳು ನಡೆಯಲಿದ್ದು ರಾಜ್ಯ, ರಾಷ್ಟ್ರಾಂತಾರಾಷ್ಟ್ರೀಯ ಮಟ್ಟದ ಕೋಚ್‌ಗಳಾಗುವ ಅವಕಾಶವಿದೆ ಎಂದು ತಿಳಿಸಲಾಯಿತು.
0 Comments