ವಿವಿಧ ಕಡೆಗಳಲ್ಲಿ ಜಾನುವಾರು ಕಳ್ಳತನ : ಇಬ್ಬರು ಪೊಲೀಸರ ವಶಕ್ಕೆ

ಜಾಹೀರಾತು/Advertisment
ಜಾಹೀರಾತು/Advertisment

 ವಿವಿಧ ಕಡೆಗಳಲ್ಲಿ ಜಾನುವಾರು ಕಳ್ಳತನ : ಇಬ್ಬರು ಪೊಲೀಸರ ವಶಕ್ಕೆ



ಮೂಡುಬಿದಿ: ಕಾರುಗಳಲ್ಲಿ ಹೋಗಿ ವಿವಿಧ ಕಡೆಗಳಿಂದ ದನಗಳನ್ನು ಕದಿಯುತ್ತಿದ್ದ ಇಬ್ಬರು ಆರೋಪಿಗಳನ್ನು ಬಜ್ಪೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಮಂಗಳೂರು ತಾಲೂಕು ಬಡಗ ಎಡಪದವು ಗ್ರಾಮದ ಕಿನ್ನಿಮಜಲು ನಿವಾಸಿ  ಚಂದನ್ ಉಪಾಧ್ಯಾಯ ಎಂಬವರು ಡಿ. 14 ರಂದು ಬೆಳಿಗ್ಗೆ ಮೇಯಲು ಬಿಟ್ಟ ದನಗಳ ಪೈಕಿ 2 ಹಸುಗಳು ಮತ್ತು 1 ಕರುವನ್ನು ಯಾರೋ ಕಳ್ಳರು ಕಳವು ಮಾಡಿರುವ ಬಗ್ಗೆ  ನೀಡಿರುವ ದೂರಿನ ಆಧಾರದಲ್ಲಿ ಬಜಪೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು‌. 


ಈ ಹಿನ್ನೆಲೆಯಲ್ಲಿ  ಬಜಪೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸಂದೀಪ್ ಅವರ  ಆದೇಶದಂತೆ ಬುಧವಾರ  ಬೆಳಗ್ಗಿನ ಜಾವ ಸುಮಾರು 03-30 ಗಂಟೆಗೆ PSI ಕುಮಾರೇಶನ್ ಅವರು ಸಿಬ್ಬಂದಿಗಳ ಜೊತೆ ಮಂಗಳೂರು ತಾಲೂಕು ತೆಂಕ ಎಡಪದವು ಗ್ರಾಮದ ದಡ್ಡಿ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭ  ಮೂಡುಬಿದಿರೆಯ ಗಂಟಲಾಕಟ್ಟೆಯ ನಿವಾಸಿ ನಾಸೀರ್ ಯಾನೆ ನಾಚಿ ಮತ್ತು ಪಡುಕೊಣಾಜೆ ಗ್ರಾಮ ನೀರಲ್ಕೆ ನಿವಾಸಿ ಇಮ್ರಾನ್ ಇಬ್ರಾಹಿಂ ಎಂಬವರಿಂದ  ದನ ಕಳವು ಮಾಡಲು ಉಪಯೋಗಿಸಿರುವ ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ನೀಲಿ ಬಣ್ಣದ KA 41 Z 5664 ನೇ ನಂಬ್ರದ ಸಿಫ್ಟ್ ಕಾರು ಮತ್ತು ಬಳಿ ಬಣ್ಣದ KA 20 Z 0010 ನೇ ನಂಬ್ರದ ರಿಡ್ಜ್ ಕಾರುಗಳನ್ನು ಹಾಗು ಇತರ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ. 


  ಈ ಪ್ರಕರಣದಲ್ಲಿ ದನ ಕಳವು ಮಾಡಿ ಹತ್ಯೆ ಮಾಡಿರುವ ತೋಡಾರು, ಹಂಡೇಲು, ಉಳಾಯಿಬೆಟ್ಟು ಮತ್ತು ಗಂಟಲ್ ಕಟ್ಟೆ ಕಡೆಯ ಪ್ರಮುಖ ಆರೋಪಿತರ ಪತ್ತೆಗೆ ಬಾಕಿಯಿದ್ದು ಇವರ ಪತ್ತೆಯ ಬಗ್ಗೆ ವಿಶೇಷ ತಂಡ ರಚನೆ ಮಾಡಲಾಗಿರುತ್ತದೆ. 

    ಈ ಪತ್ತೆ ಕಾರ್ಯವನ್ನು  ಪೊಲೀಸ್ ಆಯುಕ್ತರಾದ ಅನುಪಮ್ ಅಗರವಾಲ್ IPS ಅವರ ಮಾರ್ಗದರ್ಶನದಂತೆ, ಡಿಸಿಪಿ ಸಿದ್ದಾರ್ಥ ಗೋಯೆಲ್ (ಕಾ&ಸು) ಮತ್ತು ದಿನೇಶ್ ಕುಮಾರ್ (ಅಪರಾಧ ಮತ್ತು ಸಂಚಾರ) ರವರ ನಿರ್ದೇಶನದಂತೆ, ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ  ಮನೋಜ್ ಕುಮಾರ್ ಮತ್ತು ಪೊಲೀಸ್ ನಿರೀಕ್ಷಕ  ಸಂದೀಪ್ ಜಿ.ಎಸ್ ರವರ ನೇತೃತ್ವದಲ್ಲಿ ಪಿ.ಎಸ್.ಐ ಕುಮಾರೇಶನ್,  ಗುರಪ್ಪ ಕಾಂತಿ, ರೇವಣ ಸಿದ್ದಪ್ಪ, ಬಜಪೆ ಪೊಲೀಸ್ ಠಾಣೆಯ ಅಪರಾಧ ಪತ್ತೆ ವಿಭಾಗದ ಸಿಬಂಧಿಗಳಾದ  ಎಎಸ್ ಐ ರಾಮ ಪೂಜಾರಿ, ಸುಜನ, ರಶೀದ ಶೇಖ್, ಬಸವರಾಜ್, ಕೆಂಚನಗೌಡ, ದುರ್ಗಾಪ್ರಸಾದ, ಅನಿಲ್ ಕುಮಾರ್, ಮದು, ಪ್ರಕಾಶ್, ವಿರುಪಾಕ್ಷ, ಭರಮಪ್ಪ ಮತ್ತು ಇತರ ಸಿಬ್ಬಂದಿಗಳು  ಭಾಗವಹಿಸಿರುತ್ತಾರೆ.

Post a Comment

0 Comments