ಗ್ರಾಮಾಭಿವೃದ್ಧಿ ಯೋಜನೆಯಿಂದ ಅಧ್ಯಯನ ಪ್ರವಾಸ
ಮೂಡುಬಿದಿರೆ: ಶ್ರೀ.ಕ್ಷೇ.ಧ.ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ) ಮೂಡುಬಿದಿರೆ ತಾಲೂಕು ಇದರ ಆಲಂಗಾರು ವಲಯದ ವತಿಯಿಂದ ಶುಕ್ರವಾರ ಅಧ್ಯಯನ ಪ್ರವಾಸವನ್ನು ಕೈಗೊಳ್ಳಲಾಯಿತು.
ಬಂಟ್ವಾಳ ತಾಲೂಕಿನ ಕುರಿಯಾಳ ಪಡುಮನೆಯ ಉದಯ ಶೆಟ್ಟಿ ಅವರು ಎರಡು ಎಕ್ರೆ ಜಾಗದಲ್ಲಿ ಬೆಳೆಸಿರುವ ಡ್ರಾಗನ್ ಫ್ರೂಟ್ಸ್ ಕೃಷಿಯ ಬಗ್ಗೆ ಯೋಜನೆಯ ಸದಸ್ಯರು ಮಾಹಿತಿಯನ್ನು ಪಡೆದುಕೊಂಡರು.
ನಂತರ ನೀರುಡೆಯಲ್ಲಿರುವ ಸುರಭಿವನ ಗೋಶಾಲೆಗೆ ಭೇಟಿ ನೀಡಿ ಹೈನುಗಾರಿಕೆಯ ಬಗ್ಗೆ, ಮುಚ್ಚೂರಿನಲ್ಲಿರುವ ಮಂಜುನಾಥ ತಿಂಡಿ ತಯಾರಿಕಾ ಕೇಂದ್ರಕ್ಕೆ ಹಾಗೂ ನೀರುಡೆಯ ಐವನ್ ಡಿ'ಸೋಜ ಅವರ ಮನೆಗೆ ಭೇಟಿ ನೀಡಿ ಸುಮಾರು 7 ಎಕ್ರೆ ಜಾಗದಲ್ಲಿ ಮಾಡಿರುವ ವಿವಿಧ ರೀತಿಯ ಕೃಷಿ, ಹೈನುಗಾರಿಕೆ, ಮೀನು ಕೃಷಿ ಹಾಗೂ ತರಕಾರಿ ಕೃಷಿಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.
ಕೃಷಿ ಅಧಿಕಾರಿ ಲೋಕೇಶ್, ಸೇವಾ ಪ್ರತಿನಿಧಿ ಮಮತಾ ಈ ಸಂದರ್ಭದಲ್ಲಿದ್ದರು.
ಯೋಜನೆಯ 48 ಮಂದಿ ಸದಸ್ಯರು ಅಧ್ಯಯನ ಪ್ರವಾಸದಲ್ಲಿ ಭಾಗವಹಿಸಿದ್ದರು.
0 Comments