ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ. ‘ಆನಂದ ಸ್ವರೂಪ’ ಕಟ್ಟಡ ಉದ್ಘಾಟನೆ

ಜಾಹೀರಾತು/Advertisment
ಜಾಹೀರಾತು/Advertisment

 ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ. ‘ಆನಂದ ಸ್ವರೂಪ’ ಕಟ್ಟಡ ಉದ್ಘಾಟನೆ


ಮೂಡುಬಿದಿರೆ: ಎಲ್ಲರನ್ನೂ ತನ್ನವರೆಂದು ಪ್ರೀತಿಯಿಂದ ನೋಡಿಕೊಳ್ಳುವ ಆಳ್ವರ ವ್ಯಕ್ತಿತ್ವವೇ ಒಂದು ಮಾದರಿ. ಅವರು ಮಾದರಿ ಶಿಕ್ಷಣ ತಜ್ಞರಾಗಿದ್ದಾರೆ’ ಎಂದು‌‌ ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ‌ ನುಡಿದರು. 


ಪುತ್ತಿಗೆ ವಿವೇಕಾನಂದ ನಗರದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಪ್ರಾಥಮಿಕ ಶಾಲೆಯ ಆನಂದ ಸ್ವರೂಪ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಭಾನುವಾರ ಆಶೀರ್ವಚನ‌ ನೀಡಿದರು.ಶಿಕ್ಷಣದಲ್ಲಿ ಹಲವು ಕೋಶಗಳಿವೆ. ಆದರೆ, ಆಳ್ವರು ‘ಮನೋಮಯ’ ಹಾಗೂ ‘ಆನಂದಮಯ’ ಎಂಬ ಎರಡು ನೆಮ್ಮದಿಯ ಕೋಶಗಳನ್ನು ಸೃಜಿಸಿದ್ದಾರೆ ಎಂದರು.


ಸಂಸದ ನಳಿನ್ ಕುಮಾರ್ ಕಟೀಲ್ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ ಆಳ್ವಾಸ್’ ರಾಜ್ಯದ ಶೈಕ್ಷಣಿಕ ಕ್ಷೇತ್ರದ ಮಿನುಗು ನಕ್ಷತ್ರ. ಅದಕ್ಕೆ ‘ಆನಂದ ಸ್ವರೂಪ'ವನ್ನು ಆಳ್ವರು ನೀಡಿದ್ದಾರೆ. ಸಾಂಸ್ಕೃತಿಕ ಹಾಗೂ ಶಿಕ್ಷಣ ಕಾಶಿ ಎಂಬ ಬಿರುದನ್ನು ತಂದವರು ಡಾ.ಎಂ. ಮೋಹನ ಆಳ್ವರು. ಮೌಲ್ಯಾಧಾರಿತ, ನೈತಿಕ, ಗುಣಮಟ್ಟದ ಶಿಕ್ಷಣವನ್ನು ಮಾದರಿಯಾಗಿ ನೀಡುತ್ತಿದ್ದಾರೆ.ಕೇವಲ ಉಳ್ಳವರಿಗೆ ಮಾತ್ರವಲ್ಲ, ವಂಚಿತರಿಗೂ ಅವಕಾಶ ಕಲ್ಪಿಸುವ ಅವರ ಮನಸ್ಸು ಆಳ್ವಾಸ್ ಸಂಸ್ಥೆಯನ್ನು ಬೆಳೆಸಿದೆ. ರಾಜ್ಯ ಪ್ರವಾಸದ ಸಂದರ್ಭದಲ್ಲಿ ನನ್ನ ಬಳಿ ಹೆಚ್ಚಿನವರು ಕೇಳುವ ಹೆಸರು ‘ಆಳ್ವಾಸ್’ ಎಂದರು.


ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಪ್ರಾಸ್ತಾವಿಕವಾಗಿ‌ ಮಾತನಾಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ಭವ್ಯ ಭವನ ಇದ್ದರೂ, ಶುಲ್ಕ ಹೆಚ್ಚಳವಿಲ್ಲ. ಎಲ್ಲರೂ ಅತ್ಯುನ್ನತ ಮಟ್ಟದ ಶಿಕ್ಷಣ ಪಡೆಯಬೇಕು ಎಂಬುದು ನನ್ನ ಕನಸು. ಅದಕ್ಕಾಗಿ ‘ಆನಂದ ಸ್ವರೂಪ’.  ಶಿಶುವಿಹಾರ, ಪೂರ್ವ ಪ್ರಾಥಮಿಕ ಹಾಗೂ ಒಂದು ಮತ್ತು ಎರಡನೇ ತರಗತಿಗಳು ನಡೆಯಲಿವೆ.  ಕನಿಷ್ಠ ಶುಲ್ಕದಲ್ಲಿ ಉತ್ಕೃಷ್ಟ ಮಟ್ಟದ ಶಿಕ್ಷಣ ನೀಡುವ ಗುರಿ ನಮ್ಮದು ಎಂದರು.



ಭಾರತ ಸ್ಕೌಟ್ಸ್ ಗೈಡ್ಸ್ ಕರ್ನಾಟಕದ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ, ಶಾಸಕ ಉಮಾನಾಥ ಕೋಟ್ಯಾನ್ , ಮಾಜಿ ಸಚಿವ ಕೆ ಅಭಯಚಂದ್ರ‌ ಜೈನ್, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಧರ್ಮಗುರು ಫಾ. ಗೋಮ್ಸ್, ಸಂಪಿಗೆ ಚರ್ಚ್ ಧರ್ಮಗುರು ಫಾ. ವಿನ್ಸೆಂಟ್ ಡಿಸೋಜ, ಬದ್ರಿಯಾ ಜುಮ್ಮಾ ಮಸೀದಿ ಖತಿಬ್ ಅಬೂಬಕ್ಕರ್ ಸಿದ್ಧಿಕ್ ದಾರಿಮಿ, ಮಹಮ್ಮದ್‌ರಫಿ ಧಾರಿಮಿ, ಪುತ್ತಿಗೆ ಗ್ರಾಪಂ ಅಧ್ಯಕ್ಷೆ ರಾಧಾ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ಎಸ್. ವಿರೂಪಾಕ್ಷಪ್ಪ,  ಜಯಶ್ರೀ ಅಮರನಾಥ ಶೆಟ್ಟಿ, ಚೌಟರ ಅರಮನೆಯ ಕುಲದೀಪ್ ಎಂ., ಉದ್ಯಮಿ ಎಸ್.ಎಂ. ಮುಸ್ತಫಾ, ಶ್ರೀಪತಿ ಭಟ್, ನಾರಾಯಣ ಪಿ.ಎಂ, ತಿಮ್ಮಯ್ಯ ಶೆಟ್ಟಿ, ಮೂಡುಬಿದಿರೆ ವೆಂಕಟರಮಣ, ಹನುಮಂತ ದೇವಳದ ಆಡಳಿತ ಮೊಕ್ತೇಸರ ಉಮೇಶ್ ಪೈ, ಎಂ.ಸಿ.ಎಸ್ ಸೊಸೈಟಿ ವಿಶೇಷಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಎಂ., ಮೋಹನ ಆಳ್ವರ ಸಹೋದರಿ ಮೀನಾಕ್ಷಿ ಆಳ್ವ, ಶ್ರೀನಿವಾಸ ಆಳ್ವ ಉಪಸ್ಥಿತರಿದ್ದರು.


ಕೆ. ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. 

---


ಮುದ ನೀಡಿದ ಚಿಣ್ಣರ ಮೆರವಣಿಗೆ

ವಿದ್ಯಾಗಿರಿಯಲ್ಲಿನ ಆಳ್ವಾಸ್ ಕಾಲೇಜಿನ ಆವರಣದಿಂದ ಆಟಿಕೆ ಯಂತ್ರಗಳು, ಪ್ರಾಣಿ-ಪಕ್ಷಿಗಳ ಬೊಂಬೆಗಳು, ಕಾರ್ಟೂನ್ ಪ್ರತಿಕೃತಿ, ಪಾಂಡಾ ಬೈಕ್, ಡಬ್ಬಲ್‌ಡೆಕ್ಕರ್ ಬಸ್, ರೈಲು ಬಂಡಿ, ಎಲೆಕ್ಟ್ರಿಕಲ್ ವಾಹನಗಳ, ಎನ್‌ಸಿಸಿ, ಕದೋನಿ, ಗರ್ನಲ್, ಲಂಗದಾವಣಿ ಮಕ್ಕಳು, ಚಿತ್ರದುರ್ಗ ಬ್ಯಾಂಡ್‌ಸೆಟ್, ಆಳ್ವಾಸ್ ಗೊಂಬೆ ಬಳಗ, ಬ್ಯಾಂಡ್ ಸೆಟ್, ಕಲ್ಲಡ್ಕ ಗೊಂಬೆ, ಎನ್‌ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ಪಥಸಂಚಲನದೊಂದಿಗೆ ಪುಟಾಣಿಗಳು ಹಾಗೂ ಅತಿಥಿಗಳನ್ನು ‘ಆನಂದ ಸ್ವರೂಪ’ ಉದ್ಘಾಟನೆಗೆ ಬರಮಾಡಿಕೊಳ್ಳಲಾಯಿತು. ಇಡೀ ಕಾರ್ಯಕ್ರಮವು ಮಕ್ಕಳ ಜಾತ್ರೆಯ ಮೆರುಗು ನೀಡಿತು.

Post a Comment

0 Comments