ಫೆ.10-16: ಮೂಡುಬಿದಿರೆ ಹಿರೇ ಅಮ್ಮನವರ ಬಸದಿಯಲ್ಲಿ‌ ಧಾಮ ಸಂಪ್ರೋಕ್ಷಣೆ, ಪ್ರತಿಷ್ಠಾ ಮಹೋತ್ಸವ

ಜಾಹೀರಾತು/Advertisment
ಜಾಹೀರಾತು/Advertisment

 ಫೆ.10-16: ಮೂಡುಬಿದಿರೆ ಹಿರೇ ಅಮ್ಮನವರ ಬಸದಿಯಲ್ಲಿ‌ ಧಾಮ ಸಂಪ್ರೋಕ್ಷಣೆ, ಪ್ರತಿಷ್ಠಾ ಮಹೋತ್ಸವ


 * ಭರದಿಂದ ಸಾಗುತ್ತಿದೆ ವಿವಿಧ ಅಭಿವೃದ್ಧಿ ಕಾಮಗಾರಿಗಳು

ಮೂಡುಬಿದಿರೆ: ಇಲ್ಲಿನ  ಅತ್ಯಂತ ಪ್ರಾಚೀನ ಬಸದಿಗಳಲ್ಲಿ ಒಂದಾಗಿರುವ ಶ್ರೀ ಶಾಂತಿನಾಥ ಸ್ವಾಮಿಯ ಹಿರೇಅಮ್ಮನವರ ಬಸದಿಯ ಧಾಮ ಸಂಪ್ರೋಕ್ಷಣೆ ಮತ್ತು ಪ್ರತಿಷ್ಠಾ ಮಹೋತ್ಸವ 2024ರ ಫೆ.10ರಿಂದ 16ರವರೆಗೆ ಜರಗಲಿದೆ ಎಂದು ಬಸದಿಯ ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ , ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಬಸದಿಯ ನೂತನ ಧ್ವಜ ಸ್ಥಂಭ ಸ್ಥಾಪನೆ, ಗ್ರಾನೈಟ್ ಟೈಲ್ಸ್ ಅಳವಡಿಕೆ, ಗಾರೆ ಕೆಲಸಗಳು, ಮರದ ಕೆತ್ತನೆ ಕಾರ್ಯ ಮೊದಲಾದ ಕೆಲಸಗಳು ಸುಮಾರು ರೂ.75 ಲಕ್ಷ ವೆಚ್ಚದಲ್ಲಿ ನಡೆದಿದ್ದು, ಇನ್ನುಳಿದ ಕೆಲಸ ಕಾರ್ಯಗಳಿಗೆ ಸುಮಾರು ರೂ.25 ಲಕ್ಷ ಬೇಕಾಗಬಹುದೆಂದು ಅಂದಾಜಿಸಲಾಗಿದೆ ಎಂದರು.

೧೦೮ ಯುಗಲ ಮುನಿ ಮಹಾರಾಜರ ಸಾನಿಧ್ಯದಲ್ಲಿ , ಮೂಡುಬಿದಿರೆ  ಭಟ್ಟಾರಕ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಡೆಯುವ ಧಾಮ ಸಂಪ್ರೋಕ್ಷಣ, ಪ್ರತಿಷ್ಠೆ ಮಹೋತ್ಸವದಲ್ಲಿ ಶ್ರವಣಬೆಳಗೊಳ, ಕಾರ್ಕಳ, ಎನ್.ಆರ್.ಪುರ, ಕಂಬದಳ್ಳಿ, ಹೊಸಕೋಟೆ ಕ್ಷೇತ್ರಗಳ ಸ್ವಾಮೀಜಿಯವರು, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ, ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸಹಿತ ಗಣ್ಯರು ಪಾಲ್ಗೊಳ್ಳಲಿದ್ದಾರೆ. 

ನಿರಂತರ ೭ ದಿನಗಳಲ್ಲಿ ಭಜನೆ, ಸಾಂಸ್ಕೃತಿಕ ಕಲಾಪಗಳು ನಡೆಯಲಿದ್ದು ವಿಶೇಷವಾಗಿ  24 ತೀರ್ಥಂಕರರ ಬಿಂಬಗಳನ್ನು ಸಾಲಂಕೃತ ಮಂಟಪಗಳಲ್ಲಿರಿಸಿ ಭವ್ಯ. ಮೆರವಣಿಗೆ ಮಾಡಲಾಗುವುದು, ಪೆ.15ರಂದು ಮಹಾರಥೋತ್ಸವ ಜರಗಲಿದೆ ಎಂದವರು ವಿವರಿಸಿದರು.

ಆಡಳಿತೆದಾರ ಭಸ್ಕಾರ್ ಎಸ್. ಕಟ್ಟೇಮಾರು, ಅವರ ಪುತ್ರ ಅನಂತಕೇಸರಿ ಕಟ್ಟೇಮಾರು, ಜೀರ್ಣೋದ್ಧಾರ ಸಮಿತಿ ಪ್ರಧಾನ‌ ಕಾರ್ಯದರ್ಶಿ ರಾಜವರ್ಮ ಬೈಲಂಗಡಿ, ಸದಸ್ಯರಾದ ಸುಧೇಶ್ ಕುಮಾರ್ ಆನಡ್ಕ, ದಿನೇಶ್ ಕುಮಾರ್ ಆನಡ್ಕ, ಪುಷ್ಪರಾಜ ಜೈನ್, ಇಂಜಿನಿಯರ್ ಪಾರ್ಶ್ವನಾಥ, ಸಂಪತ್‌ಕುಮಾರ್, ಸ್ವಾಮಿ ಪ್ರಸಾದ್, ಸೂರಜ್ ಆರಿಗಾ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Post a Comment

0 Comments