ತುಳು ನಾಟಕ ಪ್ರದರ್ಶನ: ರಂಗಭೂಮಿಯ ಹಿರಿಯ ಕಲಾವಿದನಿಗೆ ಸನ್ಮಾನ

ಜಾಹೀರಾತು/Advertisment
ಜಾಹೀರಾತು/Advertisment

 ತುಳು ನಾಟಕ ಪ್ರದರ್ಶನ:  ರಂಗಭೂಮಿಯ ಹಿರಿಯ ಕಲಾವಿದನಿಗೆ ಸನ್ಮಾನ



ಮೂಡುಬಿದಿರೆ: ರೋಟರಿ ಕ್ಲಬ್ ಮೂಡುಬಿದಿರೆ ಮಿಡ್ ಟೌನ್ ಇದರ ವತಿಯಿಂದ  ಬಹುಮುಖ ಪ್ರತಿಭೆ, ಹಿರಿಯ ರಂಗ ಕಲಾವಿದ ಗಂಗಾಧರ ಶೆಟ್ಟಿ ಕಲ್ಲಮುಂಡ್ಯೂರು ಅವರನ್ನು ಬುಧವಾರ ಸಂಜೆ ಸಮಾಜ ಮಂದಿರ ಬಯಲು ರಂಗಮಂದಿರದಲ್ಲಿ ಸನ್ಮಾನಿಸಲಾಯಿತು. 

ರೋಟರಿ ಕ್ಲಬ್ ಮೂಡುಬಿದಿರೆ ಟೌನ್ ಅಧ್ಯಕ್ಷ ಮಹೇಂದ್ರ ಕುಮಾ‌ರ್ ಜೈನ್ ಅಧ್ಯಕ್ಷತೆಯಲ್ಲಿ ನಡೆದ  ಸಭಾ ಕಾರ್ಯಕ್ರಮದಲ್ಲಿ ಸಮಾಜ ಮಂದಿರ ಸಭಾದ ಅಧ್ಯಕ್ಷ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಕ.ಸಾ.ಪ. ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಯುಗ ಪುರುಷದ ಕೆ. ಭುವನಾಭಿರಾಮ ಉಡುಪ, ದ.ಕ. ಹಾಲು ಒಕ್ಕೂಟದ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ, ರೋಟರಿ 'ವಲಯ Iರ ಉಪರಾಜ್ಯಪಾಲ ರೊ. ಪ್ರತಾಪ್ ಕುಮಾ‌ರ್,ಕ್ಲಬ್ ಕಾರ್ಯದರ್ಶಿ ರೊ. ಸಂತೋಷ್ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ರೊ. ಪುಷ್ಪರಾಜ್ ಜೈನ್, ಪಿಡಿಒ ಸಾಯೀಶ್ ಚೌಟ, ಸಂದೀಪ್ ಶೆಟ್ಟಿ ಸಚ್ಚರಿಪೇಟೆ, ಪುರಸಭಾ ಸದಸ್ಯರುಗಳಾದ ಪುರಂದರ ದೇವಾಡಿಗ, ರಾಜೇಶ್ ನಾಯ್ಕ, ವಿಜಯಾ ಕಲಾವಿದೆರ್ ತಂಡದ ಮುಖ್ಯಸ್ಥ ರೊ. ಶರತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ನಂತರ ರೋಟರಿ ಕ್ಲಬ್ ನ ನೇತೃತ್ವದಲ್ಲಿ ಕಿನ್ನಿಗೋಳಿಯ ವಿಜಯಾ  ವಿಜಯಾ ಕಲಾವಿದರು ಅಭಿನಯದ ವಿನೂತನ ಶೈಲಿಯ ತುಳು ನಾಟಕ "ಪಿರಾವುಡು ಒರಿ ಉಲ್ಲೆ" ಪ್ರದರ್ಶನಗೊಂಡಿತು. ಮಿಡ್ ಟೌನ್ ರೋಟರಿ ಸ್ಥಾಪಕ ಅಧ್ಯಕ್ಷ ರೊ. ಮಹಮ್ಮದ್ ಅಸ್ಲಂ ಕಾರ್ಯಕ್ರಮ ಸಂಯೋಜಿಸಿದ್ದರು.  ರೊ. ಪ್ರಶಾಂತ್ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments