ವೈಬ್ರoಟ್ ಕಾಲೇಜಿನ ಪ್ರಾಂಶುಪಾಲರು ಮತ್ತು ಕನ್ನಡ ಉಪನ್ಯಾಸಕರಿಗೆ ಕರುನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

ಜಾಹೀರಾತು/Advertisment
ಜಾಹೀರಾತು/Advertisment

 ವೈಬ್ರoಟ್ ಕಾಲೇಜಿನ ಪ್ರಾಂಶುಪಾಲರು ಮತ್ತು ಕನ್ನಡ ಉಪನ್ಯಾಸಕರಿಗೆ ಕರುನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ



ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿರುವ ನ್ಯೂ ವೈಬ್ರoಟ್ ಪದವಿ ಪೂರ್ವ ಕಾಲೇಜಿನ  ಪ್ರಾಂಶುಪಾಲರಾದ ಡಾ. ಎಸ್.ಎನ್.ವೆಂಕಟೇಶ್ ನಾಯಕ್ ಮತ್ತು ಕನ್ನಡ ವಿಭಾಗದ ಮುಖ್ಯಸ್ಥ ಪಿ.ಎಸ್.ನಿತಿನ್ ಇವರಿಗೆ ಬೆಂಗಳೂರಿನ ಕರುನಾಡ ಕನ್ನಡ ಕಲಾ ಸಿರಿ  ಬಳಗವು ಕೆಂಗೇರಿಯ ಸಂತ ಅಂಥೋಣಿ ಕಾಲೇಜಿನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಅದ್ದೂರಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ 2023ರ ಕರುನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. 


ಕನ್ನಡದ ಸೇವೆ ಮತ್ತು  ನಾಡು ನುಡಿಯ ಅಭಿವೃದ್ಧಿಗೆ ಶ್ರಮಿಸುವ ಗಣ್ಯರನ್ನು ಗುರುತಿಸಿ ಈ ಪ್ರಶಸ್ತಿಯನ್ನು  ಕರುನಾಡ ಕನ್ನಡ ಕಲಾ ಸಿರಿ ಬಳಗವು ನೀಡಿದೆ.

ಪ್ರಶಸ್ತಿಯನ್ನು ಪಡೆದ ಇವರಿಬ್ಬರನ್ನು ಕಾಲೇಜಿನ ಆಡಳಿತ ಮಂಡಳಿಯ ಟ್ರಸ್ಟಿಗಳಾದ ಚಂದ್ರಶೇಖರ ರಾಜೇ ಅರಸ್, ಯೋಗೇಶ್ ಬೇಡೆಕರ್, ಸುಭಾಷ್ ಜಾ, ಎಂ.ಮೆಹಬೂಬ ಬಾಷಾ, ಶರತ್ ಗೋರೆ ಹಾಗೂ ಕಾಲೇಜಿನ ಆಡಳಿತಾಧಿಕಾರಿ, ಸಿಬ್ಬಂದಿಗಳು ಅಭಿನಂದಿಸಿದರು.

Post a Comment

0 Comments