ಮೂಡುಬಿದಿರೆ : ನಾಲ್ಕನೇ ಮಹಡಿಯಿಂದ ಕೆಳಗೆ ಬಿದ್ದು ಯುವಕ ಸಾವು
ಮೂಡುಬಿದಿರೆ: ಕಟ್ಟಡದ ನಾಲ್ಕನೇ ಮಹಡಿಗೆ ಶೀಟು ಹಾಕುತ್ತಿದ್ದ ಯುವಕನೋವ೯ ಮಹಡಿಯಿಂದ ಕೆಳಗೆ ಬಿದ್ದು ಮೃತಪಟ್ಟ ಘಟನೆ ಮೂಡುಬಿದಿರೆಯ ಕಡೆಪಲ್ಲದಲ್ಲಿ ಗುರುವಾರ ನಡೆದಿದೆ.
ಮಾರ್ಪಾಡಿ ಗ್ರಾಮದ ಪಾದೆಮನೆ ನಿವಾಸಿ ಸಂತೋಷ್ ಆಚಾಯ೯ ಅವರ ಪುತ್ರ ಶೌರ್ಯ ಎಸ್.ಆಚಾರ್ಯ ( 17) ಮೃತಪಟ್ಟ ದುದೈ೯ವಿ
ಯುವಕ.
ಶೌಯ೯ ದ್ವಿತೀಯ ಪಿಯುಸಿಯ ವಿದ್ಯಾಥಿ೯ಯಾಗಿದ್ದು ರಜೆಯಲ್ಲಿ ಕಾಮಿ೯ಕನಾಗಿ ದುಡಿಯುತ್ತಿದ್ದರೆನ್ನಲಾಗಿದೆ. ಗುರುವಾರ ಕಡಪಲ್ಲ ಗಾಂಧಿನಗರದಲ್ಲಿರುವ ರಾಯಲ್ ಪ್ಯಾರಡೈಸ್ ಕಟ್ಟಡದ ಮಹಡಿಗೆ ಶೀಟು ಹಾಕುವ ಕೆಲಸಕ್ಕೆ ಹೋಗಿದ್ದು ಅಲ್ಲಿ ನಾಲ್ಕನೇ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದ ಸಂದಭ೯ದಲ್ಲಿ ಆಯ ತಪ್ಪಿ ಕೆಳಗೆ ಬಿದ್ದಿದ್ದು ತಕ್ಷಣ ಆಳ್ವಾಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಕಟ್ಟಡದ ಗುತ್ತಿಗೆದಾರ ಪ್ರವೀಣ್ ಹಾಗೂ ಮಾಲಕರಾದ ನೋರ್ಟ್ ಶಾಬಾ ರೇಗೋ ಅವರು ಕೆಲಸ ಮಾಡುವಾಗ ಸರಿಯಾದ ಸುರಕ್ಷತಾ ಸಾಮಾಗ್ರಿಗಳನ್ನು ನೀಡದಿರುವುದೇ ಈ ದುರಂತಕ್ಕೆ ಕಾರಣವೆನ್ನಲಾಗಿದ್ದು ಈ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



0 Comments