ಮೂಡುಬಿದಿರೆ : ಇತ್ತಿಚೇಗೆ ನಡೆದ ಕಲ್ಲಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ &ಉಪಾಧ್ಯಕ್ಷ ಚುನಾವಣೆಯ ಸಂದಭ೯ ಪಕ್ಷ ವಿರೋಧಿ ಚಟುವಟಿಕೆ ಮಾಡಿರುವ ಭಾರತೀಯ ಜನತಾ ಪಾರ್ಟಿ ಮೂಡುಬಿದಿರೆ ಮಂಡಲದ ಕಾರ್ಯಕಾರಣಿ ಸದಸ್ಯ ಕೇಶವ ಪಂಜಾಡಿ ಅವರನ್ನು ಪಕ್ಷದ ಎಲ್ಲಾ ಜವಾಬ್ದಾರಿಗಳಿಂದ ಮುಕ್ತಗೊಳಿಸಿ ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಮಂಡಲ ಅಧ್ಯಕ್ಷ ದಿನೇಶ್ ಪುತ್ರನ್ ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕಲ್ಲಮುಂಡ್ಕೂರು ವ್ಯ.ಸೇ.ಸ.ಸಂಘದ ಚುನಾವಣೆಯು ಇತ್ತೀಚೆಗೆ ನಡೆದಿದ್ದು ಅದರಲ್ಲಿ ಬಿಜೆಪಿ ಬೆಂಬಲಿತ 10 ಮಂದಿ ಹಾಗೂ ಕಾಂಗ್ರೆಸ್ ಬೆಂಬಲಿತ ಇಬ್ಬರು ಆಯ್ಕೆಯಾಗಿದ್ದರು.
ಬಿಜೆಪಿ ಬೆಂಬಲಿತ ಸದಸ್ಯ, ಯುವ ನಾಯಕ ವಿದ್ಯಾನಂದ ಶೆಟ್ಟಿ ಅವರು ಬಿಜೆಪಿ ಮುಖಂಡರ ಅಭ್ಯಥಿ೯ಯಾಗಿದ್ದರು.
ಇದೇ ಸಂದಭ೯ದಲ್ಲಿ ತಾನೂ ಕೂಡಾ ಅಧ್ಯಕ್ಷಗಾಧಿಗೆ ಆಕಾಂಕ್ಷಿ ಎಂದು ಕೇಶವ ಪಂಜಾಡಿ ಅವರು ಹೇಳಿ ನಾಮಪತ್ರ ಸಲ್ಲಿಸಿದ್ದರು.
ಇದರಿಂದಾಗಿ ಅಧ್ಯಕ್ಷರ ಹುದ್ದೆಗೆ ಬಿಜೆಪಿ ಬೆಂಬಲಿತರ ಮಧ್ಯೆಯೇ ಸ್ಪಧೆ೯ ಏಪ೯ಟ್ಟಿದ್ದು. ಗುಪ್ತ ಮತದಾನದಲ್ಲಿ ಕೇಶವ ಪೂಜಾರಿ ಅವರಿಗೆ ಅತೀ ಹೆಚ್ಚು ಮತಗಳು ಬಿದ್ದಿದ್ದರಿಂದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಹಾಗೂ ಉಪಾಧ್ಯಕ್ಷರಾಗಿ ಸುಧಾಕರ ಪೂಜಾರಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು.
ಇದರಿಂದಾಗಿ ವಿದ್ಯಾನಂದ ಶೆಟ್ಟಿ ಅವರು ನಿರಾಶೆ ಹೊಂದಿದ್ದರು ಮತ್ತು ಅವರ ಬೆಂಬಲಿಗರು ಫೇಸ್ ಬುಕ್, ವಾಟ್ಸಪ್ ಗ್ರೂಫ್ ಗಳಲ್ಲಿ ವಿದ್ಯಾನಂದರಿಗೆ ಅನ್ಯಾಯವಾಗಿದೆ, ಬಡಗಮಿಜಾರಿನಲ್ಲಿ ಇನ್ನು ಮುಂದೆ ಬಿಜೆಪಿಗೆ ಮತಗಳಿಲ್ಲ ಎಂದು ಆಕ್ರೋಶಿತರಾಗಿ ಬರೆದು ಹಾಕಿದ್ದರು.
ಈ ಎಲ್ಲಾ ಬೆಳವಣಿಗೆಯ ನಂತರ ಇದೀಗ ಕೇಶವ ಪಂಜಾಡಿ ಅವರನ್ನು ತಕ್ಷಣಕ್ಕೆ ಜಾರಿಯಾಗುವಂತೆ ಬಿಜೆಪಿ ಪಕ್ಷದ ಎಲ್ಲಾ ಜವಾಬ್ದಾರಿಗಳಿಂದ ಉಚ್ಛಾಟಿಸಲಾಗಿದೆ.


0 Comments