ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿರಿ: ಡಾ. ಪಿ.ವಿ ಭಂಡಾರಿ
ಮೂಡುಬಿದಿರೆ : ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿರಿ ಎಂದು ಉಡುಪಿಯ ಎವಿ ಬಾಳಿಗಾ ಸ್ಮಾರಕ ಆಸ್ಪತ್ರೆ ದೊಡ್ಡನಗುಡ್ಡೆ ಇದರ ಮ್ಯಾನೇಜಿಂಗ್ ಡೈರೆಕ್ಟರ್ ಡಾ ಪಿ.ವಿ ಭಂಡಾರಿ ಸಲಹೆ ನೀಡಿದರು.
ಅವರು ಇಲ್ಲಿನ ಜೈನ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ವಿಧಾನಗಳ ಬಗ್ಗೆ ಬುಧವಾರ ಕಾಲೇಜಿನ ಸಭಾಭವನದಲ್ಲಿ ಮಾಹಿತಿ ನೀಡಿದರು.
ಕೇವಲ ವಿದ್ಯಾಭ್ಯಾಸ ಮಾತ್ರವಲ್ಲದೆ ಹಿರಿಯರು ಕೊಡುವ ಸಂಸ್ಕಾರವನ್ನು ಮೈಗೂಡಿಸಿಕೊಂಡು ಮುನ್ನಡೆದಾಗ ಮಾತ್ರ ಉತ್ತಮ ಭವಿಷ್ಯವನ್ನು ಕಾಣಬಹುದು. ಹೆತ್ತವರು ಹಾಗೂ ಪೋಷಕರು ಮಕ್ಕಳಲ್ಲಿ ಸದಾ ಸಕಾರಾತ್ಮಕತೆ ಪ್ರೇರಣೆ ತುಂಬುವಂತಹ ಮಾತುಗಳ ಮೂಲಕ ಅವರನ್ನು ಪ್ರೋತ್ಸಾಹಿಸಬೇಕು, ಸೋತಾಗ ಮತ್ತೆ ಎದ್ದು ಬರಲು ಪ್ರಯತ್ನ, ವಿಫಲವಾದಾಗ ನಿರಾಸೆಯಾಗದೆ ಮತ್ತೆ ಪ್ರಯತ್ನಿಸಲು, ಗೆದ್ದಾಗ ಅತಿಯಾಗಿ ಬೀಗದೆ ಸದಾ ಆತ್ಮವಿಶ್ವಾಸದಿಂದ ಇರಲು, ಹೊಸತನ್ನು ಪ್ರಯತ್ನಿಸಲು ಅವರನ್ನು ಪ್ರೇರೇಪಿಸಬೇಕು. ಇದಕ್ಕಾಗಿ ನಾವು ಮಕ್ಕಳನ್ನು ಸದಾ ಗಮನಿಸುತ್ತಿರಬೇಕು ಅವರಿಗೆ ಅವಶ್ಯವಾದಾಗ ಪ್ರೇರಣಾತ್ಮಕ ಮಾತುಗಳ ಮೂಲಕ ಹುರಿದುಂಬಿಸಬೇಕು ಎಂದು ಹೇಳಿದರು.
ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಕೆ ಹೇಮರಾಜ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಕಳೆದ ಒಂದು ದಶಕದಿಂದ ಕಾಲೇಜಿನ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಪಿ ವಿ ಭಂಡಾರಿ ಅವರನ್ನು ಅಭಿನಂದಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ/ ಪ್ರಭಾತ್ ಬಲ್ನಾಡು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಉಪನ್ಯಾಸಕ ಮಹಾವೀರ ಜೈನ ಸ್ವಾಗತಿಸಿದರು. ಅಪೂರ್ವ ಆಳ್ವ ಅತಿಥಿಗಳನ್ನು ಪರಿಚಯಿಸಿದರು. ಶ್ರೀರಾಮಚಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು. ವನಿತಾ ಕೆಂಬಾರೆ ವoದಿಸಿದರು.
0 Comments