ಮೂಡುಬಿದಿರೆ : ಇಲ್ಲಿನ ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ಪ್ರೌಢಶಾಲೆಯಲ್ಲಿ ಭಾನುವಾರ ರಾಮಕೃಷ್ಣ ವಿವೇಕಾನಂದ ಭಾವ ಪ್ರಚಾರ ಪರಿಷತ್ ಕರ್ನಾಟಕ ಇವರಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿವೇಕ ವಿದ್ಯಾರ್ಥಿ-2023 ಪರೀಕ್ಷೆ ನಡೆಯಿತು. ವಿದ್ಯಾರ್ಥಿಗಳಲ್ಲಿ ಸ್ವಾಮಿ ವಿವೇಕಾನಂದರ ಆದರ್ಶ ಹಾಗೂ ವ್ಯಕ್ತಿತ್ವ ನಿರ್ಮಾಣಕ್ಕಾಗಿ ಈ ಪರೀಕ್ಷೆಯನ್ನು ರಾಜ್ಯದಾದ್ಯಂತ ಸ್ವಾಮಿ ವೀರೇಶಾನಂದ ಸರಸ್ವತಿ ಅವರ ಮಾರ್ಗದರ್ಶನದಲ್ಲಿ ನಡೆಸಲಾಯಿತು. ಸುಮಾರು 318 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಿದ್ದರು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಡ್ಯಾರು ಇಲ್ಲಿನ ಮುಖ್ಯ ಶಿಕ್ಷಕ ಪ್ರಸನ್ನ ವಿ ಶೆಣೈ ಮುಖ್ಯ ಪರೀಕ್ಷಕರಾಗಿ, ರಾಮಕೃಷ್ಣ ಆಶ್ರಮದ ಪ್ರಜ್ವಲ್ ಶೆಣೈ, ಆಳ್ವಾಸ್ ನ ಸ್ವಯಂ ಸೇವಕರಾದ ಯೋಗೀಶ್ ಹಿರೇಮಠ್ ,ಶಶಾಂಕ್ ಆರ್ ಹಾಗೂ ಸ್ವಯಂಸೇವಕರಾಗಿ ಪ್ರತಿಭಾ ಶೆಣೈ ಮತ್ತು ಅಚ್ಯುತ ಭಾರ್ಗವ,ಎಕ್ಸಲೆಂಟ್ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಶಿವಪ್ರಸಾದ್ ಭಟ್ ಮತ್ತು ಸಹ ಶಿಕ್ಷಕ ನವೀನ್ ಮತ್ತು ಇತರ ಸಿಬ್ಬಂದಿ ಸಹಕರಿಸಿದರು.
0 Comments