ಪೊಲೀಸರಿಗೆ ನಕ್ಸಲ್ ಪಟ್ಟ ಕಟ್ಟಿದ ಖತರ್ನಾಕ್ ವ್ಯಕ್ತಿ

ಜಾಹೀರಾತು/Advertisment
ಜಾಹೀರಾತು/Advertisment
ಪೊಲೀಸರಿಗೆ ನಕ್ಸಲ್ ಪಟ್ಟ ಕಟ್ಟಿದ ಖತರ್ನಾಕ್ ವ್ಯಕ್ತಿ 




ಮೂಡುಬಿದಿರೆ: ಪೊಲೀಸರಿಗೆ ಬೇಕಾಗಿದ್ದ ಕೇರಳ ಮೂಲದ ಖತರ್ನಾಕ್ ವ್ಯಕ್ತಿಯೋರ್ವ  ತನ್ನನ್ನು ಸೆರೆ ಹಿಡಿಯಲು ಬಂದ ಪೊಲೀಸರನ್ನೇ ನಕ್ಸಲ್‌ ಎಂದು ಇನ್ನೊಂದು ಠಾಣೆಗೆ ದೂರು ನೀಡಿದ ಘಟನೆ ನಾರಾವಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಕೇರಳ ಮೂಲದ ಜೋಸ್ಸಿ ಆಂಟನಿ ಎಂಬಾತ ಕುತ್ಲೂರು ಹುಡುಗಿಯನ್ನು ಮದುವೆಯಾಗಿ ಅಲ್ಲೇ ವಾಸವಾಗಿದ್ದು ಆತ ಒಂದೇ ಜಾಗವನ್ನು ಮಾರಾಟ ಮಾಡಲು 22 ಜನರ ಜತೆ ಎಗ್ರಿಮೆಂಟ್ ಮಾಡಿಕೊಂಡಿದ್ದ ಅದರಲ್ಲಿ ಇಬ್ಬರಿಗೆ  ರೂ 48 ಲಕ್ಷ ವಂಚನೆ ಮಾಡಿರುವ ಬಗ್ಗೆ ಸುಹಾನ ಮತ್ತು ಶರತ್ ಎಂಬವರು ಮೂಡುಬಿದಿರೆ ಠಾಣೆಗೆ ದೂರು ನೀಡಿದ್ದರಿಂದ ತನಿಖೆ ನಡೆಸಿ ಆರೋಪಿಯನ್ನು  ಬಂಧಿಸಲು ಪೊಲೀಸರು ತೆರಳಿದ್ದರು.

ಸುಮಾರು ಜನರಿಗೆ ಪಂಗನಾಮ ಹಾಕಿರುವ ಆ್ಯಂಟನಿ ದಂಪತಿಗಳು ಹಗಲಿನಲ್ಲಿ ಮನೆಯಲ್ಲಿ ಸಿಗದಿದ್ದ ಕಾರಣ ಪೊಲೀಸರು ರಾತ್ರಿ ವೇಳೆಗೆ ಕುತ್ಲೂರಿಗೆ ಹೋಗಿದ್ದರು. ಆಗ ಮನೆಯಲ್ಲಿದ್ದ ದಂಪತಿಗಳಿಗೆ ಪೊಲೀಸರು ತಮ್ಮನ್ನು ಹುಡುಕಿಕೊಂಡು ಬಂದಿರುವ ವಿಷಯ ಗಮನಕ್ಕೆ ಬಂದಿದ್ದು ಪೊಲೀಸರು ಬಾಗಿಲು ತೆರೆಯುವಂತೆ ಹೇಳಿದರೂ ಬಾಗಿಲು ತೆರೆಯಲು ಒಪ್ಪಿರಲಿಲ್ಲ. ಆದ್ದರಿಂದ ಮೂಡುಬಿದಿರೆ  ಪೊಲೀಸರು ರಾತ್ರಿ 10.30ರ ವೇಳೆಗೆ ಅಲ್ಲಿಂದ ಹಿಂತಿರುಗಿ ಬಂದಿದ್ದರು. ಈ ಸಂದರ್ಭ ಆ್ಯಂಟನಿ 112 ಗೆ ಕರೆ ಮಾಡಿ ನಕ್ಸಲ್ ತಮ್ಮ ಮನೆಯ ಬಳಿ ಬಂದಿದ್ದಾರೆಂದು ಸುಳ್ಳು ಮಾಹಿತಿಯನ್ನು ನೀಡಿದ್ದಾರೆ.

 ನಕ್ಸಲ್ ಎಂಬ ಬಗ್ಗೆ ಮಾಹಿತಿ ಬಂದ ತಕ್ಷಣ ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ಧಾವಿಸಿ ಬಂದಿದ್ದಾರೆ. ಆದರೆ ಅಲ್ಲಿ ಬಂದಾಗ  ಮೂಡುಬಿದಿರೆ ಪೊಲೀಸರು ಭೇಟಿ ನೀಡಿರುವುದು ಗಮನಕ್ಕೆ ಬಂದಿದೆ.

ಸುಹಾನ ಮತ್ತು ಶರತ್ ಅವರು ಮೂಡುಬಿದಿರೆ ಠಾಣೆಗೆ ದೂರು ನೀಡಿದ್ದರಿಂದ ಮೂಡುಬಿದಿರೆ ಪೊಲೀಸರು ತೆರಳಿದ್ದರು.

Post a Comment

0 Comments