ಎಕ್ಸಲೆಂಟ್‌ ಯುವರಾಜ್ ಜೈನ್ ಗೆ ವಿವಿಧ ಸಂಘ, ನಾಗರಿಕರಿಂದ ಅಭಿನಂದನೆ

ಜಾಹೀರಾತು/Advertisment
ಜಾಹೀರಾತು/Advertisment

 ಎಕ್ಸಲೆಂಟ್‌ ಯುವರಾಜ್ ಜೈನ್ ಗೆ ವಿವಿಧ ಸಂಘ, ನಾಗರಿಕರಿಂದ ಅಭಿನಂದನೆ



ಮೂಡುಬಿದಿರೆ: ನವದೆಹಲಿಯ ಗ್ಲೋಬಲ್ ಅಂಬಾಸಿಡರ್ ಆಫ್ ಎಜುಕೇಷನ್ ಎಕ್ಸಲೆನ್ಸ್ ಅವಾರ್ಡ್ ಹಾಗೂ ಮೂಡುಬಿದಿರೆ ಸಮಾಜ ಮಂದಿರ ಪುರಸ್ಕಾರ ೨೦೨೩ಕ್ಕೆ ಭಾಜನರಾಗಿರುವ  ಕಲ್ಲಬೆಟ್ಟು ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ, 'ಶಿಕ್ಷಣ ರತ್ನ' ಯುವರಾಜ್ ಜೈನ್ ಅವರನ್ನು ವಿವಿಧ ಸಂಘ ಸಂಸ್ಥೆಗಳು, ಸಂಸ್ಥೆ ಮತ್ತು ನಾಗರಿಕರ ವತಿಯಿಂದ  ರಾಜ ಸಭಾಂಗಣದಲ್ಲಿ ಗೌರವಿಸಿ ಸನ್ಮಾನಿಸಲಾಯಿತು.


ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ  ಹಲವು ಸಂಘ ಸಂಸ್ಥೆಗಳನ್ನು ಹುಟ್ಟು ಹಾಕಿ, ಸಮಾಜ ಸೇವೆಯಲ್ಲೂ ತೊಡಗಿಕೊಂಡಿರುವ ಯುವರಾಜ ಜೈನ್ “ಕಿರು ಅವಧಿಯಲ್ಲಿ ಶ್ರೇಷ್ಟ ಗುಣಮಟ್ಟದ ಶಿಕ್ಷಣ ಸಂಸ್ಥೆಯನ್ನು `ಮಾದರಿ’ಯಾಗಿ ಕಟ್ಟಿಬೆಳೆಸಿ ಸಾಧನೆ ಮಾಡಿದ್ದಾರೆಂದರು. 



ಎಕ್ಸಲೆಂಟ್ ಸಹಾಯ ನಿಧಿ’ಯ ರೂಪದಲ್ಲಿ ಲಭ್ಯವಾಗುವ ಸೇವೆಯನ್ನು ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಿದರು. ಮಾಜಿ ಸಚಿವ ಕೆ ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿದ್ದರು.   ರರೋಟರಿಕ್ಲಬ್ ಟೆಂಪಲ್ ಟೌನ್ ಅಧ್ಯಕ್ಷ ರೊನಾಲ್ಡ್ ಫೆರ್ನಾಂಡೀಸ್, ಜೆಸಿ ಅಧ್ಯಕ್ಷ ಸುನಿಲ್ ಕುಮಾರ್, ಜೈನ್ ಮಿಲನ್ ಅಧ್ಯಕ್ಷ ದಿನೇಶ್ ಆನಡ್ಕ ಉಪಸ್ಥಿತರಿದ್ದರು.


ರೋಟರಿ ಟೆಂಪಲ್ ಟೌನ್, ಮೂಡುಬಿದಿರೆ ಜೈನ್ ಮಿಲನ್, ಜೆಸಿಐ ಮೂಡುಬಿದಿರೆ ಸಂಘಟನೆಯ ಪ್ರಮುಖರು  ಭಾಗವಹಿಸಿದ್ದರು.

 ಡಾ.ಬಿ ಸಂಪತ್ ಕುಮಾರ್ ಸ್ವಾಗತಿಸಿದರು. ರಶ್ಮಿತಾ ಜೈನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಜೇಂದ್ರ ಭಟ್ ಅಭಿನಂದನಾ ನುಡಿಗಳನ್ನಾಡಿದರು. ಮೌಲ್ಯ ಅವರಿಂದ ಕಾವ್ಯಾಭಿನಂದನೆ ನಡೆಯಿತು. ಡಾ.ಪ್ರಭಾತ್ ಬಲ್ನಾಡು ಕಾರ್ಯಕ್ರಮ ನಿರ್ವಹಿಸಿದರು.

Post a Comment

0 Comments