ಶ್ರೀ ಮಹಾವೀರ ಕಾಲೇಜಿನಲ್ಲಿ ತಾಲೂಕು ಮಟ್ಟದ ವಿವಿಧ ಸ್ಪರ್ಧೆಗಳ ಉದ್ಘಾಟನೆ
ಮೂಡುಬಿದಿರೆ: ಭಾರತದಲ್ಲಿ ಹುಟ್ಟಿದ ವ್ಯಕ್ತಿ 18 ವರ್ಷ ತುಂಬಿದಾಗ ಮತದಾನ ಮಾಡುವ ಹಕ್ಕನ್ನು ಪಡೆಯುತ್ತಾನೆ. ಮತದಾನ ಮಾಡಲು ನೋಂದಾವಣೆ ಅಗತ್ಯವಿದ್ದು ಭಾರತೀಯ ಚುನಾವಣಾ ಆಯೋಗ ಈ ಕೆಲಸವನ್ನು ಸರಳಗೊಳಿಸಿದೆ. ಕೈಯಳತೆಯಲ್ಲೇ ಎಲ್ಲಾ ನೊಂದಾವಣೆಯ ಪ್ರಕ್ರಿಯೆಗಳು ನಡೆಯಲು ಅವಕಾಶ ಕಲ್ಪಿಸಿದ್ದು ನಾವೆಲ್ಲರೂ ಪ್ರಾಮಾಣಿಕವಾಗಿ ಮತ ಚಲಾಯಿಸಬೇಕು ಎಂದು ದಕ್ಷಿಣಕನ್ನಡ ಜಿಲ್ಲಾ ಚುನಾವಣಾ ಸಾಕ್ಷರತಾ ಘಟಕದ ನೋಡೆಲ್ ಅಧಿಕಾರಿ ಚಂದ್ರನಾಥ ಎಂ.ಕರೆ ನೀಡಿದರು.
ಅವರು ಶ್ರೀ ಮಹಾವೀರ ಕಾಲೇಜು, ಮೂಡುಬಿದಿರೆ ಇಲ್ಲಿ ನಡೆದ ಮೂಡುಬಿದಿರೆ ತಾಲೂಕು ಮಟ್ಟದ ವಿವಿಧ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದರು.
ಭವಿಷ್ಯದ ಮತದಾರರನ್ನು ಗುರಿಯಾಗಿಟ್ಟುಕೊಂಡು, ಚುನಾವಣೆ ಮತ್ತು ಮತದಾನದ ಅರಿವು ಮೂಡಿಸುವ ಉದ್ದೇಶದಿಂದ ಚುನಾವಣಾ ಸಾಕ್ಷರತಾ ಕ್ಲಬ್‌ನ್ನು ಭಾರತೀಯ ಚುನಾವಣಾ ಆಯೋಗ ಶಿಕ್ಷಣ ಸಂಸ್ಥೆಗಳಲ್ಲಿ ರಚನೆ ಮಾಡಿದೆ.
ನಮ್ಮ ದೇಶದಲ್ಲಿ ಹೆಚ್ಚು ಶೇಕಡಾವಾರು ಮತದಾನ ನಡೆಯುವುದು. ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಿತ ಸಮುದಾಯವೇ ಮತದಾನದ ಪ್ರಕ್ರಿಯೆಯಿಂದ ದೂರ ಉಳಿದಿದೆ. ಚುನಾವಣೆ, ಮತದಾನದ ಸಂಪೂರ್ಣ ಅರಿವನ್ನು ಮೂಡಿಸುವುದು ಇಂದಿನ ಅನಿವಾರ್ಯತೆಗಳಲ್ಲಿ ಒಂದು. ನಾವೆಲ್ಲರೂ ಸುಂದರ ಭಾರತವನ್ನು ಸೃಷ್ಟಿಸುವ ಶಿಲ್ಪಿಗಳು.ಇದನ್ನು ಅರಿತುಕೊಳ್ಳಿ ಎಂದು ತಿಳಿಸಿದರು. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರಮೇಶ್ ಭಟ್ ಅಧ್ಯಕ್ಷತೆ ವಹಿಸಿದ್ದರು.
ಶ್ರೀ ಮಹಾವೀರ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ರಾಧಾಕೃಷ್ಣ, ಜೈನ್ ಪದವಿ ಪೂರ್ವಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕರಾದ ಮಹಾವೀರಜೈನ್, ಸಂಯೋಜಕರಾದ ಪೂರ್ಣಿಮಾ, ಕಾಲೇಜಿನ ಚುನಾವಣಾ ಸಾಕ್ಷರತಾ ಕ್ಲಬ್‌ನ ಕಾರ್ಯದರ್ಶಿಯಾದ ಅರುಣ್ ಉಪಸ್ಥಿತರಿದ್ದರು.
ಸಂಯೋಜಕರಾದ ಪೂರ್ಣಿಮಾ ಸ್ವಾಗತಿಸಿ, ಇತಿಹಾಸ ವಿಭಾಗದ ಮುಖ್ಯಸ್ಥರಾದ ರಶ್ಮಿತಾ ವಂದಿಸಿದರು. ಕನ್ನಡ ಉಪನ್ಯಾಸಕಿ ವಿಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು.
0 Comments