ದವಲಾ ಕಾಲೇಜಿನಲ್ಲಿ 'ಬ್ಲೂಮಿಂಗ್ ಆಟ್ಸ್ ೯ 2ಏ23' ವಿವಿಧ ಸ್ಪರ್ಧೆಗಳ ಉದ್ಘಾಟ

ಜಾಹೀರಾತು/Advertisment
ಜಾಹೀರಾತು/Advertisment

 ದವಲಾ ಕಾಲೇಜಿನಲ್ಲಿ 'ಬ್ಲೂಮಿಂಗ್ ಆಟ್ಸ್ ೯ 2ಏ23' ವಿವಿಧ ಸ್ಪರ್ಧೆಗಳ ಉದ್ಘಾಟನೆ 



ಮೂಡುಬಿದಿರೆ: ಶ್ರೀಧವಲಾ ಕಾಲೇಜಿನ ಕಲಾ ಸಂಘದ ವತಿಯಿಂದ ಕಲಾವಿಭಾಗದ ವಿದ್ಯಾರ್ಥಿಗಳಿಗೆ “ಬ್ಲೂಮಿಂಗ್ ಆರ್ಟ್ಸ್ ೨ಏ೨೩” ವಿವಿಧ ಸ್ಪರ್ಧೆಗಳನ್ನು ಶುಕ್ರವಾರ ಏರ್ಪಡಿಸಲಾಗಿತ್ತು.

ಉದ್ಯಮಿ, ಶ್ರೀಧವಲಾ ಕಾಲೇಜಿನ ಹಳೆವಿದ್ಯಾರ್ಥಿ ಸಿ.ಎಚ್.ಗಫೂರ್‌ ಅವರು ಸ್ಪರ್ಧೆಗಳನ್ನು ಉದ್ಘಾಟಿಸಿದರು.


ನಂತರ ಮಾತನಾಡಿದ ಅವರು ವಿದ್ಯಾರ್ಥಿಗಳು ಕಲಿಕೆಯನ್ನು ಪ್ರೀತಿಸಬೇಕು, ಮುಂದಿನ ಜೀವನದ ಕುರಿತು ಜವಾಬ್ದಾರಿಯುತವಾಗಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಶಕ್ತರಿರಬೇಕು. ಹೆತ್ತವರನ್ನು, ಗುರುಹಿರಿಯರನ್ನು, ಸಹಪಾಠಿಗಳನ್ನು, ಸಮಾಜದ ಎಲ್ಲಾ ವರ್ಗದವರಲ್ಲೂ ಪ್ರೀತಿಯಿಂದ ಕಾಣುವುದರಿಂದ ಸಾಮಾಜಿಕ ಸ್ವಾಸ್ಥ್ಯದೊಂದಿಗೆ ನಮ್ಮ ಸ್ವಾಸ್ಥ್ಯವನ್ನು ಚೆನ್ನಾಗಿಟ್ಟುಕೊಳ್ಳಬಹುದು ಎಂದು ಹೇಳಿದರು.

 ಕಾಲೇಜಿನ ಪ್ರಾಂಶುಪಾಲ ಪ್ರೊ.ಮಹಾವೀರ ಅಜ್ರಿ ಅವರು ಅಧ್ಯಕ್ಷತೆಯನ್ನು ವಹಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಲಾಸಂಘದ ಮುಖ್ಯ ಸಂಚಾಲಕರಾದ ಡಾ. ರೂಪಾ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಂಘದ ಉಪಸಂಚಾಲಕ ಲೆಫ್ಟಿನೆಂಟ್ ಸೂರಕ್ ಕೋಟ್ಯಾನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ಕಲಾಸಂಘದ ಕಾರ್ಯದರ್ಶಿ ರಂಜಿತ್ ಬಲ್ಲಾಳ್ ತೃತೀಯ ಬಿ.ಎ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಇಶಾ ಶೆಟ್ಟಿ ದ್ವಿತೀಯ ಬಿ.ಎ ವಂದಿಸಿದರು ಹಾಗೂ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಯಕ್ಷೀತಾ ತೃತೀಯ ಬಿ.ಎ.ಕಾರ್ಯಕ್ರಮವನ್ನು ನಿರೂಪಿಸಿದರು.


ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಜೈನ ಪದವಿಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀ ಮಹಾವೀರ ಜೈನ್ ಆಗಮಿಸಿ, ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಿ, ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಸ್ಪರ್ಧಾವಿಜೇತರ ಪಟ್ಟಿಯನ್ನು ಕಲಾಸಂಘದ ಸಹಸಂಯೋಜಕರಾದ ಸೂರಜ್ ಕೋಟ್ಯಾನ್ ವಾಚಿಸಿದರು.


ಪ್ರಾಂಶುಪಾಲ ಪ್ರೊ.ಮಹಾವೀರ ಅಜ್ರಿಯವರು ವಿಜೇತರನ್ನು ಅಭಿನಂದಿಸಿದರು. ಸುಭೀಕ್ಷ ತೃತೀಯ ಬಿ.ಎ ಕಾರ್ಯಕ್ರಮವನ್ನು ನಿರೂಪಿಸಿದರು. ಸುರಕ್ಷಾ ತೃತೀಯ ಬಿ.ಎ. ವಂದಿಸಿದರು. ಕಲಾ ಸಂಘದ ಮುಖ್ಯ ಸಂಯೋಜಕರಾದ ಡಾ. ರೂಪಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Post a Comment

0 Comments