ಅಖಿಲ ಭಾರತೀಯ ಅಂತರ್ ವಿವಿ ಪುರುಷರ ಕಬಡ್ಡಿ ಚಾಂಪಿಯನ್‌ಶಿಪ್: ಮಂಗಳೂರು ವಿವಿ ಚಾಂಪಿಯನ್ಸ್
ಮಂಗಳೂರು ವಿವಿ ತಂಡದ ಏಳು ಆಟಗಾರರಲ್ಲಿ ಐವರು ಆಳ್ವಾಸ್‌ನ ವಿದ್ಯಾರ್ಥಿಗಳು
ಸುದೀರ್ಘ ೩೩ ವರ್ಷಗಳ ನಂತರ ಮಂಗಳೂರು ವಿವಿ ಚಾಂಪಿಯನ್ಸ್
ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ನಡೆದ ಅಖಿಲ ಭಾರತೀಯ ಅಂತರ್ ವಿವಿ ಪುರುಷರ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಮಂಗಳೂರು ವಿವಿಯು ಸುದೀರ್ಘ ೩೩ ವರ್ಷಗಳ ಬಳಿಕ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿದೆ. ಮಂಗಳೂರು ವಿವಿಯ ಕಬಡ್ಡಿ ತಂಡವನ್ನು ಪ್ರತಿನಿಧಿಸಿದ ಒಟ್ಟು ೧೨ ಜನರ ತಂಡದಲ್ಲಿ ೫ ಆಟಗಾರರು ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದರೆ ಎನ್ನುವುದು ಉಲ್ಲೇಖನೀಯ. ಮಂಗಳೂರು ವಿವಿಯು ಫೈನಲ್ ಪಂದ್ಯಾಟದಲ್ಲಿ ಚೆನ್ನೈನ ವೆಲ್ಸ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಟೆಕ್ನಾಲಜಿ ಅಂಡ್ ಅಡ್ವಾನ್ಸ್ಡ್ ಸ್ಟಡೀಸ್ ವಿಶ್ವವಿದ್ಯಾನಿಲಯವನ್ನು ಏಕಮುಖ ಹೋರಾಟದ ಮುಖಾಂತರ ೪೭-೧೫ ಅಂಕಗಳೊAದಿಗೆ ಸೋಲಿಸಿ ಸಮಗ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಇದಕ್ಕೂ ಮೊದಲು ನಡೆದ ಸೆಮಿ ಫೈನಲ್ ಪಂದ್ಯಾಟದಲ್ಲಿ ಮಂಗಳೂರು ವಿವಿಯು ಹರಿಯಾಣದ ಚೌಧರಿ ಬನ್ಸಿಲಾಲ್ ವಿಶ್ವವಿದ್ಯಾನಿಲಯವನ್ನು ೪೮-೩೫ ಅಂಕಗಳ ಅಂತರದೊAದಿಗೆ ಸೋಲಿಸಿ ಫೈನಲ್ಗೇರಿತು. ಫೈನಲ್ ಪಂದ್ಯವಾಡಿದ ೭ ಜನರ ಮಂಗಳೂರು ವಿವಿ ತಂಡದಲ್ಲಿ ೫ ಜನ ಆಟಗಾರರು ಆಳ್ವಾಸ್‌ನ ವಿದ್ಯಾರ್ಥಿಗಳಾಗಿದ್ದರು. ಮಾಯಾಂಕ್, ಪ್ರವೀಣ್, ವಿನೋದ್ ನಾಯ್ಕ್, ಜತಿನ್ ನಾಯ್ಕ್, ನಿಖಿಲ್ ಮಂಗಳೂರು ವಿವಿ ಕಬಡ್ಡಿ ತಂಡವನ್ನು ಪ್ರತಿನಿಧಿಸಿದ ಆಳ್ವಾಸ್‌ನ ವಿದ್ಯಾರ್ಥಿಗಳು. ಈ ಐವರು ವಿದ್ಯಾರ್ಥಿಗಳು ಕ್ರೀಡಾ ದತ್ತು ಶಿಕ್ಷಣ ಅಡಿಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಮಂಗಳೂರು ತಂಡದ ಉಪನಾಯಕ ಆಳ್ವಾಸ್‌ನ ವಿದ್ಯಾರ್ಥಿ ವಿನೋದ್ ನಾಯ್ಕ್ ಬೆಸ್ಟ್ ಕ್ಯಾಚರ್ ಪ್ರಶಸ್ತಿಗೆ ಭಾಜನರಾದರು. ಚಾಂಪಿಯನ್ಸ್ ತಂಡದ ತರಬೇತುದಾರ ಸತೀಶ್ ನಾಯಕ್ ಸಹ ಆಳ್ವಾಸ್ ಶಿಕ್ಷಣ ಸಂಸ್ಥೆಯ ಉಪನ್ಯಾಸಕ ಹಾಗು ತರಬೇತುದಾರರಾಗಿದ್ದಾರೆ. ಅಖಿಲ ಭಾರತೀಯ ಅಂತರ್ ವಿವಿ ಕಬಡ್ಡಿ ಚಾಂಪಿಯನ್‌ಶಿಪ್‌ನ ತರಬೇತಿ ಶಿಬಿರವು ಆಳ್ವಾಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಉಚಿತ ವಸತಿ ಮತ್ತು ಆಹಾರದ ವ್ಯವಸ್ಥೆಯೊಂದಿಗೆ ನಡೆದಿತ್ತು. ಮಂಗಳೂರು ವಿವಿ ತಂಡದ ಸಾಧನೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಶ್ಲಾಘಿಸಿದ್ದಾರೆ.
0 Comments