ಬೆಳುವಾಯಿಯಲ್ಲಿ ಜೂಜಾಟದ
ಅಡ್ಡೆಗೆ ಪೊಲೀಸರಿಂದ ದಾಳಿ: ಕಾರು, ಬೈಕ್ ಸಹಿತ ಆರು ಮಂದಿ ವಶಕ್ಕೆ
ಮೂಡುಬಿದಿರೆ : ಬೆಳುವಾಯಿಯಲ್ಲಿ ಮಂಗಳವಾರ ಮಧ್ಯರಾತ್ರಿ ನಡೆಯುತ್ತಿದ್ದ ಇಸ್ಪೀಟ್ ಅಡ್ಡೆಗೆ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ.ನೇತೃತ್ವದ ತಂಡವು ದಾಳಿ ನಡೆಸಿ ರೂ 9000 ನಗದು, ಸ್ವಿಪ್ಟ್ ಕಾರು, ಬೈಕ್ ಮತ್ತು ಆಟ ಆಡುತ್ತಿದ್ದ ಆರು ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ತಾಲೂಕಿನ ಬೆಳುವಾಯಿಯ ಮುಡೇಕಾಡು ಎಂಬಲ್ಲಿ ಇಸ್ಪೀಟ್ ರೂವಾರಿ ಬೆಳುವಾಯಿ ಇಂಟರ್ಲಾಕ್ ವಿನ್ಸಿ, ಬೆಳುವಾಯಿ ಅಬ್ಬಾಯಿ ಕಜೆಯ ಮಹೇಂದ್ರ ಕುಮಾರ್, ದರೆಗುಡ್ಡೆಯ ಸಂತೋಷ್ ಪೂಜಾರಿ, ಕೆಲ್ಲಪುತ್ತಿಗೆಯ ಪ್ರದೀಪ್ ಸುವರ್ಣ, ಅಳಿಯೂರು ಮುಡಾಯಿಕಾಡಿನ ಸಂತೋಷ್ ಅಳಿಯೂರಿನ ರಾಮ ಯಾನೆ ರಾಮಚಂದ್ರ ಆಟ ಆಡುತ್ತಿದ್ದವರು.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಪೊಲೀಸರು ವಶಕ್ಕೆ ಪಡೆದುಕೊಂಡು ನ್ಯಾಯಾಲಕ್ಕೆ ಹಾಜರು ಪಡಿಸಲಾಗಿದೆ.
0 Comments