ಅಳಿಯೂರು ಪ.ಪೂ.ಕಾಲೇಜಿನ ನಾಮಫಲಕ ಉದ್ಘಾಟನೆ
ಮೂಡುಬಿದಿರೆ: ಅಳಿಯೂರು ಸರಕಾರಿ ನೂತನ ಪ.ಪೂ. ಕಾಲೇಜಿನ
ನಾಮ ಫಲಕವನ್ನು ಶಾಸಕ ಉಮಾನಾಥ ಕೋಟ್ಯಾನ್ ಭಾನುವಾರ ಬೆಳಿಗ್ಗೆ ಉದ್ಘಾಟಿಸಿದರು.
ವಾಲ್ಪಾಡಿ ಗ್ರಾ.ಪಂನ ಉಪಾಧ್ಯಕ್ಷ ಗಣೇಶ್ ಬಿ ಅಳಿಯೂರು ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾಲೇಜಿನ ನೂತನ ಕೊಠಡಿಗೆ ರೂ.1ಕೋ, ಪ್ರಾಥಮಿಕ ಶಾಲೆಗೆ ವಾರ್ಷೀಕೋತ್ಸವದ ಅಭಿವೃದ್ಧಿಗಾಗಿ ಕೊಡುಗೆಯಾಗಿ ರೂ. 7 ಲಕ್ಷ ಅನುದಾನ ಹಾಗೂ ಪ್ರೌಡಶಾಲಾ ರಜತ ಮಹೋತ್ಸವಕ್ಕೆ ಅನುದಾನವನ್ನು ಒದಗಿಸುವುದಾಗಿ ಶಾಸಕರು ತಿಳಿಸಿದ್ದಾರೆಂದು ಪ್ರಕಟಿಸಿದರು.
ದಾನಿ ರಮಾನಂದ ಸಾಲ್ಯಾನ್ , ಅಳಿಯೂರು ಕಾಲೇಜಿನ ಪ್ರಾಂಶುಪಾಲರಾದ ಚಂದ್ರು, ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ, ಶಾಲಾಭಿವ್ರಧ್ಧಿ ಸಮಿತಿ ಅಧ್ಯಕ್ಷ ರವೀಂದ್ರ ಮತ್ತು ಸದಸ್ಯರು ಉಪಸ್ಥಿತರಿದ್ದರು.
0 Comments