ಮಾನಸಿಕ ಖಿನ್ನತೆಯಿಂದ ಕೂಲಿಕಾರ್ಮಿಕ ಆತ್ಮಹತ್ಯೆ

ಜಾಹೀರಾತು/Advertisment
ಜಾಹೀರಾತು/Advertisment

 ಮಾನಸಿಕ ಖಿನ್ನತೆಯಿಂದ ಕೂಲಿಕಾರ್ಮಿಕ ಆತ್ಮಹತ್ಯೆ



ಮೂಡುಬಿದಿರೆ : ಕಳೆದ 7 ವರ್ಷಗಳಿಂದ  ಅನಾರೋಗ್ಯದಿಂದ ಬಳಲುತ್ತಿದ್ದ ಕೂಲಿಕಾರ್ಮಿಕನೋರ್ವ ಮಾನಸಿಕ ಖಿನ್ನತೆಯಿಂದ ವಿಷ ಪದಾರ್ಥ ಸೇವಿಸಿ ಆತ್ಯಹತ್ಯೆ ಮಾಡಿಕೊಂಡ ಘಟನೆ ಗುರುವಾರ ರಾತ್ರಿ ಬೆಳುವಾಯಿ ಗ್ರಾ.ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.

  ಬೆಳುವಾಯಿ ಅಂಬೂರಿ ನಿವಾಸಿ ನೇಮಿ (43) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. 

 ನೇಮಿ ಅವರು ಅನಾರೋಗ್ಯವನ್ನು ಹೊಂದಿದ್ದು ಔಷಧಿ ಪಡೆಯುತ್ತಿದ್ದರು. ಇತ್ತೀಚಿನ ದಿನಗಳಲ್ಲಿ   ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದ ಅವರು ಗುರುವಾರ ರಾತ್ರಿ ಕಟ್ಟಿಗೆಯನ್ನು ಶೇಖರಿಸಿಡುತ್ತಿದ್ದ ಕೊಟ್ಟಿಗೆಯಲ್ಲಿ ವಿಷ ಪದಾರ್ಥವನ್ನು ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದರು.

 ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Post a Comment

0 Comments