ಶಾಲಾ ಅಂಗಳಕ್ಕೆ ಅಳವಡಿಸಿರುವ ಇಂಟರ್ ಲಾಕ್ ಕಾಮಗಾರಿ ಉದ್ಘಾಟನೆ
ಮೂಡುಬಿದಿರೆ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡಂಗಲ್ಲು ಇಲ್ಲಿನ ಶಾಲಾ ಅಂಗಳಕ್ಕೆ ರೂ.5 ಲಕ್ಷ ವೆಚ್ಚದಲ್ಲಿ ಅಳವಡಿಸಿರುವ ಇಂಟರ್ ಲಾಕ್ ಕಾಮಗಾರಿಯನ್ನು ಶಾಸಕ ಉಮಾನಾಥ ಕೋಟ್ಯಾನ್ ಶುಕ್ರವಾರ ಉದ್ಘಾಟಿಸಿದರು.
ಶಾಲೆಯ ವತಿಯಿಂದ ಶಾಸಕ ಉಮಾನಾಥ ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು.
ವಾಡ್ ೯ ಸದಸ್ಯೆ ಸುಜಾತ ಶಶಿಕಿರಣ್, ಪುರಸಭಾ ನಿರ್ಗಮಿತ ಅಧ್ಯಕ್ಷ ಪ್ರಸಾದ್ ಕುಮಾರ್, ಸ್ಥಾಯಿ ಸಮಿತಿ ನಿರ್ಗಮಿತ ಅಧ್ಯಕ್ಷ ನಾಗರಾಜ ಪೂಜಾರಿ, ಸದಸ್ಯರಾದ ಸುರೇಶ್ ಕೋಟ್ಯಾನ್, ಕೊರಗಪ್ಪ, ರಾಜೇಶ್ ನಾಯ್ಕ್, ಸೌಮ್ಯ ಶೆಟ್ಟಿ, ಜಯಶ್ರೀ ಕೇಶವ್, ಧನಲಕ್ಷ್ಮೀ, ಸ್ವಾತಿ ಪ್ರಭು,ದಿವ್ಯ ಜಗದೀಶ್ , ನಾಮ ನಿರ್ದೇಶಿತ ಸದಸ್ಯ ದಿನೇಶ್ ಪೂಜಾರಿ, ಎಪಿಎಂಸಿಯ ಮಾಜಿ ಅಧ್ಯಕ್ಷ ಕೆ.ಕೃಷ್ಣರಾಜ ಹೆಗ್ಡೆ, ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ರಾಜಶ್ರೀ ಬಿ., ಸರಕಾರಿ ತಾಲೂಕು ನೌಕರರ ಸಂಘದ ಅಧ್ಯಕ್ಷ ನಾಗೇಶ್, ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷ ನಜೀರ್ ಅಹಮ್ಮದ್, ಅಯ್ಯಪ್ಪ ಮಂದಿರದ ಗುರುಸ್ವಾಮಿ ರಾಘು ಪೂಜಾರಿ, ಶಾಲಾ ಮುಖ್ಯ ಶಿಕ್ಷಕಿ ಸೆಲಿನ್ ಡಿ'ಸೋಜ,ಕೋಟೆಬಾಗಿಲು ಉರ್ದು ಶಾಲೆಯ ಶಿಕ್ಷಕಿ ವಿಲ್ಮಾ,ಅಂಗನವಾಡಿ ಕಾರ್ಯಕರ್ತೆ ಫ್ಲೋರಿನ್ ಡಿ'ಸೋಜ, ಸಹಾಯಕಿ ದೇವಕಿ, ಶಕ್ತಿ ಸ್ವಸಹಾಯ ತಂಡದ ಸದಸ್ಯರು, ಹಳೆ ವಿದ್ಯಾರ್ಥಿಗಳು, ಪೋಷಕರು ಈ ಸಂದರ್ಭದಲ್ಲಿದ್ದರು.
ಶಶಿಕಿರಣ್ ಕಲ್ಲಬೆಟ್ಟು ಸ್ವಾಗತಿಸಿದರು. ಹರೀಶ್ ಎಂ.ಕೆ.ಕಾರ್ಯಕ್ರಮ ನಿರೂಪಿಸಿದರು.
0 Comments