ಜೈನ ಪದವಿ ಪೂರ್ವ ಕಾಲೇಜಿನ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ

ಜಾಹೀರಾತು/Advertisment
ಜಾಹೀರಾತು/Advertisment

 ಜೈನ ಪದವಿ ಪೂರ್ವ ಕಾಲೇಜಿನ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ 



ಮೂಡುಬಿದಿರೆ:  ಜೈನ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರವು ಹೊಸಬೆಟ್ಟು

ಸರಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಆರಂಭಗೊಂಡಿತು.   ಇರುವೈಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಪ್ರಧಾನ ಅರ್ಚಕರಾದ ರಾಘವೇಂದ್ರ ಆಸ್ರಣ್ಣ ಅವರು ಉದ್ಘಾಟಿಸಿ ಮಾತನಾಡಿ  ಬಾಲ್ಯದಲ್ಲಿ ತಾವು ಭಾಗವಹಿಸಿದ್ದ ಧಾರ್ಮಿಕ ಶಿಬಿರಗಳು ಈ ವಾರ್ಷಿಕ ಶಿಬಿರದ ಮಾದರಿಯಲ್ಲಿ ಇದ್ದು ನಮ್ಮ ವ್ಯಕ್ತಿತ್ವವನ್ನು ರೂಪುಗೊಳಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿ ಶಿಬಿರಕ್ಕೆ ಶುಭ ಹಾರೈಸಿದರು. 



ಕಾಲೇಜಿನ ಪ್ರಾಂಶುಪಾಲ ಡಾ. ಪ್ರಭಾತ್ ಬಲ್ನಾಡು ಸಭಾಧ್ಯಕ್ಷತೆ ವಹಿಸಿದ್ದರು. 

ಹೊಸಬೆಟ್ಟು ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಪದ್ಮಪ್ರಸಾದ್ ಮಾತನಾಡಿ ವಿದ್ಯಾರ್ಥಿಗಳಿಗೆ ನಾಯಕತ್ವದ ಗುಣಗಳನ್ನು ತಿಳಿಸಿದರು.

ನಿವೃತ್ತ ಅಂಚೆ ಅಧಿಕಾರಿ ಫ್ರಾನ್ಸಿಸ್ ಗೋವಿಯಸ್ ಅವರು ಜೈನ ಪದವಿಪೂರ್ವ ಕಾಲೇಜಿನ ತಮ್ಮ ವಿದ್ಯಾರ್ಥಿ ಜೀವನದ ಮಾದರಿ ವ್ಯವಸ್ಥೆಯನ್ನು ನೆನಪಿಸಿಕೊಂಡು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು. ಶಾಲಾ ಮುಖ್ಯ ಶಿಕ್ಷಕಿ  ಶಾಲಿನಿ ಕುಮಾರಿ. ಯಂ,  ಎಸ್ ಡಿ ಎಂ ಸಿ ಅಧ್ಯಕ್ಷ ಸಚೀಂದ್ರ

ಎಸ್ ಡಿ ಎಂ ಸಿ ಸದಸ್ಯ ಚೆನ್ನಪ್ಪ ಸಾಲಿಯಾನ್,   ಅಧ್ಯಾಪಕ ಸುದರ್ಶನ್ ರಾವ್, ವಿದ್ಯಾರ್ಥಿ ನಾಯಕರುಗಳಾದ ಪ್ರತೀಕ್ ಮತ್ತು ದೀಕ್ಷಾ ವೇದಿಕೆಯಲ್ಲಿ ಉಪಸ್ಥಿತರಿದ್ದರು ಮುಂತಾದವರು ಉಪಸ್ಥಿತರಿದ್ದರು. 

 ಎನ್.ಎಸ್.ಎಸ್. ಅಧಿಕಾರಿ  ವಾಣಿ ಸ್ವಾಗತಿಸಿದರು. ವನಿತಾ ಕೆಂಬಾರೆ ವಂದಿಸಿದರು. ವಿದ್ಯಾರ್ಥಿನಿ ಕು. ಸಪ್ನಾ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments