ಸಾವಿರಕಂಬದ ಬಸದಿಯಲ್ಲಿ `ನಮ್ಮ ದೇಶ, ನಮ್ಮ ಮಣ್ಣು' ಅಭಿಯಾನ

ಜಾಹೀರಾತು/Advertisment
ಜಾಹೀರಾತು/Advertisment

 ಸಾವಿರಕಂಬದ ಬಸದಿಯಲ್ಲಿ `ನಮ್ಮ ದೇಶ, ನಮ್ಮ ಮಣ್ಣು' ಅಭಿಯಾನ



ಮೂಡುಬಿದಿರೆ: ಇತಿಹಾಸ ಪ್ರಸಿದ್ಧ ಮೂಡುಬಿದಿರೆಯ ಸಾವಿರಕಂಬದ ಬಸದಿಯಲ್ಲಿ `ನಮ್ಮ ದೇಶ, ನಮ್ಮ ಮಣ್ಣು' ಅಭಿಯಾನ ಅಂಗವಾಗಿ ಬುಧವಾರ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಮೃತ್ತಿಕೆ ಸಂಗ್ರಹ ಮಾಡಲಾಯಿತು.



ಭಟ್ಟಾರಕ ಸ್ವಾಮೀಜಿ ಸಂದೇಶ ನೀಡಿ, ದೇಶದ ಪವಿತ್ರ ಕೇಂದ್ರ, ಇತಿಹಾಸ ಪ್ರಸಿದ್ದ ಕೇಂದ್ರಗಳ ಮೃತ್ತಿಕೆ ಸಂಗ್ರಹ ಶುಭ ಸಂಕೇತ. ದೇಶದ ಐಕ್ಯತೆ, ಸಮಗ್ರತೆ, ರಾಷ್ಟಾçಭಿಮಾನ ಹೆಚ್ಚಿಸುವ ಕಾರ್ಯಕ್ರಮ ಅತ್ಯಂತ ಔಚಿತ್ಯಪೂರ್ಣ ಕಾರ್ಯ. ಮೂಡುಬಿದಿರೆ ಅಂಚೆ ಇಲಾಖೆ ಜಾಗೃತಿ ಮೂಡಿ ಸಿರುವುದು ಉತ್ತಮ ನಡೆ ಎಂದು ಅಭಿನಂದಿಸಿದರು. 

ಅಂಚೆ ಇಲಾಖೆಯ ಸಹಾಯಕ ಸುಪೇರಿಡೆಂಟ್ ಪ್ರಹ್ಲಾದ್, ಅಂಚೆಪಾಲಕಿ ಉಷಾ, ಪೋಸ್ಟ್ಮ್ಯಾನ್ ಗಣೇಶ್ ಗೌಡ, ಪ್ರಮುಖರಾದ ವಾಣಿಶ್ರೀ, ಅರುಣಾ ಕ್ಷಿ ಜಯರಾಮ ಶೆಟ್ಟಿ ಉಪಸ್ಥಿತರಿದ್ದರು.

Post a Comment

0 Comments