15ರಂದು ಕಲ್ಲಮುಂಡ್ಕೂರಿನಲ್ಲಿ ಯೋಗ ಶಿಬಿರದ ಪ್ರಥಮ ವಾರ್ಷಿಕೋತ್ಸವ

ಜಾಹೀರಾತು/Advertisment
ಜಾಹೀರಾತು/Advertisment

 ಅ.15ರಂದು ಕಲ್ಲಮುಂಡ್ಕೂರಿನಲ್ಲಿ ಯೋಗ ಶಿಬಿರದ ಪ್ರಥಮ ವಾರ್ಷಿಕೋತ್ಸವ



ಮೂಡುಬಿದಿರೆ: ಪತಂಜಲಿ ಯೋಗಪೀಠ ಹರಿದ್ವಾರ ಇದರ ಮಾರ್ಗದರ್ಶನದಲ್ಲಿ ಕಲ್ಲಮುಂಡ್ಕೂರಿನ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಉಚಿತ ಯೋಗ ಶಿಬಿರದ ಪ್ರಥಮ ವಾರ್ಷಿಕೋತ್ಸವವು ಅ.15ರಂದು ಬೆಳಗ್ಗೆ 5.30ರಿಂದ ಕಲ್ಲಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಸಭಾಂಗಣದಲ್ಲಿ  ನಡೆಯಲಿದೆ ಎಂದು ಕಲ್ಲಮುಂಡ್ಕೂರಿನ ಸರ್ವೋದಯ ಪ್ರೌಢಶಾಲೆಯ ಶಿಕ್ಷಕ ಗುರು ಎಂ.ಪಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಬೆಳಗ್ಗೆ 8ಗಂಟೆಯಿAದ ನಡೆಯುವ ಸಭಾ ಕಾರ್ಯಕ್ರಮವನ್ನು ವೇಣೂರು ನಮನ ಕ್ಲಿನಿಕ್‌ನ ಡಾ.ಶಾಂತಿಪ್ರಸಾದ್ ಇಂದ್ರ ಕಾರ್ಯಕ್ರಮ ಉದ್ಘಾಟಿಸುವರು. ಸರ್ವೋದಯ ಪ್ರೌಢಶಾಲೆಯ ಸಂಚಾಲಕ, ದೈಲಬೆಟ್ಟು ಶ್ರೀ ಅಬ್ಬಗದಾರಗ ಮಹಾಲಿಂಗೇಶ್ವರ ದೇವಸ್ಥಾನ ಸಂಚಾಲಕ ಜಯಪ್ರಕಾಶ್ ಪಡಿವಾಳ್ ಅಧ್ಯಕ್ಷತೆವಹಿಸಲಿರುವರು. ಕಲ್ಲಮುಂಡ್ಕೂರು ಗ್ರಾಪಂ ಅಧ್ಯಕ್ಷೆ ಪ್ರೇಮಾ ಶೆಟ್ಟಿ ಸಹಿತ ಗಣ್ಯರು ಭಾಗವಹಿಸಲಿದ್ದಾರೆ.

 ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್, ಕಲ್ಲಮುಂಡ್ಕೂರಿನ ವಿವಿಧ ಸಂಸ್ಥೆಗಳಾದ  ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ,  ವ್ಯವಸಾಯ ಸೇವಾ ಸಹಕಾರಿ ಸಂಘ, ಓಂಕಾರ್ ಸ್ಪೋರ್ಟ್ಸ್-ಗೇಮ್ಸ್ ಕೆ.ಎಫ್.ಸಿ ಪತಂಜಲಿ ಯೋಗ ಪರಿವಾರದ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದರು.

ಯೋಗ ಶಿಕ್ಷಕ ಶರತ್ ಮೂಡುಬಿದಿರೆ, ಕಲ್ಲಮುಂಡ್ಕೂರು ಪ್ರೌಢ ಶಾಲೆಯ ಶಿಕ್ಷಕ ಗುರು ಎಂ.ಪಿ., ಅಂಚೆ ಇಲಾಖೆ ಸಿಬ್ಬಂದಿ ನಾರಾಯಣ ಕುಂದರ್, ರೋಟರಿ ಕ್ಲಬ್ ಮಿಡ್‌ಟೌನ್ ನ  ಕೋಶಾಧಿಕಾರಿ ರೇಖಾ ಭಂಡಾರಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Post a Comment

0 Comments