ಮೂಡುಬಿದಿರೆಯ ಮೊಸರು ಕುಡಿಕೆ ಉತ್ಸವದಲ್ಲಿ ಗುಣಪಾಲ ಕಡಂಬರಿಗೆ "ಶ್ರೀ ಕೃಷ್ಣ" ಪ್ರಶಸ್ತಿ ಪ್ರದಾನ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆಯ ಮೊಸರು ಕುಡಿಕೆ ಉತ್ಸವದಲ್ಲಿ ಗುಣಪಾಲ ಕಡಂಬರಿಗೆ "ಶ್ರೀ ಕೃಷ್ಣ" ಪ್ರಶಸ್ತಿ ಪ್ರದಾನ



ಮೂಡುಬಿದಿರೆ : ಮೂಡುಬಿದಿರೆಯಲ್ಲಿ ಕರ್ಮಜೀವನ ಆರಂಭಿಸಿ 50 ವರ್ಷ ತುಂಬಿರುವ  ಈ ಸುಸಂದರ್ಭದಲ್ಲಿ ತನ್ನ ಅಧ್ಯಾಪನ, ಆಡಳಿತ, ಕಂಬಳ, ಕೃಷಿ, ಧಾರ್ಮಿಕ ಸೇವಾನುಭವವನ್ನು  ಗುರುತಿಸಿ ನೀಡಿರುವ ಗೌರವವನ್ನು ಸಂತೃಪ್ತಿ, ಸಂತೋಷದಿಂದ ಸ್ವೀಕರಿಸಿದ್ದೇನೆ, ಎಲ್ಲ ರಂಗಗಳಲ್ಲೂ ಪ್ರಾಮಾಣಿಕ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟವರೆಲ್ಲರನ್ನೂ ಕೃತಜ್ಞತಪೂರ್ವಕ ನೆನೆಯುವೆ ಎಂದು ಜೈನ ಪ.ಪೂ. ಕಾಲೇಜಿನ ನಿವೃತ್ತ ಪ್ರಾಚಾರ್ಯ, ಕಂಬಳ ವಿದ್ವಾಂಸ, ಸಂಶೋಧನಶೀಲ ಕೃಷಿಕ ಕೆ. ಗುಣಪಾಲ ಕಡಂಬ ಹೇಳಿದರು.

ಅವರು  ಶ್ರೀ ಕೃಷ್ಣ ಫ್ರೆಂಡ್ಸ್ ಸರ್ಕಲ್ ವತಿಯಿಂದ ಕೃಷ್ಣ ಕಟ್ಟೆಯ ಎದುರು ಗುರುವಾರ ನಡೆದ 37ನೇ ವರ್ಷದ ಮೊಸರು ಕುಡಿಕೆ ಉತ್ಸವದಲ್ಲಿ,  ಸಂಘಟನೆಯ ಗೌರವಾಧ್ಯಕ್ಷ ಕೆ. ಶ್ರೀಪತಿ ಭಟ್ ಅಧ್ಯಕ್ಷತೆಯಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ನೀಡಿರುವ `ಶ್ರೀ ಕೃಷ್ಣ ಪ್ರಶಸ್ತಿ'ಯನ್ನು  ಸ್ವೀಕರಿಸಿ ಮಾತನಾಡಿದರು. 

 

ಸಂಘಟನೆಯ ಪ್ರ. ಕಾರ್ಯದರ್ಶಿ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ. ಕಡಂಬರಿಗೆ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಶ್ರೀ ಕೃಷ್ಣ ಕೃಷಿಕ, ಹೈನುಗಾರರ ಸ್ಪೂರ್ತಿಯ ಚಿಲುಮೆ, ಬಾಲ್ಯದಲ್ಲಿ ಕ್ರೀಡೆಗಳನ್ನು ವಿನೋದವಾಗಿ ತೋರಿದವಲ್ಲದೆ ಜಗತ್ತಿಗೆ ಗೀತೋಪದೇಶವನ್ನು ಬೋಧಿಸಿದವ. ಅದೇ ರೀತಿಎನ್‌ಸಿಸಿಯ ಶಿಸ್ತು, ಕನ್ನಡ ಭಾಷಾ ಬೋಧಕ, ಪ್ರಾಚಾರ್ಯ, ಕಂಬಳ ಕ್ರೀಡೆಗೆ ಹೊಸ ನೋಟ, ಚೌಕಟ್ಟು ಒದಗಿಸಿದ, ಉತ್ತಮ ಕೃಷಿಕನಾಗಿ ನೀರಾವರಿಯಲ್ಲಿ ಸಂಶೋಧನೆ, ಬಸದಿಗಳ ಜೀರ್ಣೋದ್ಧಾರ,  ವರ್ಧಮಾನ ಪ್ರಶಸ್ತಿ ಪೀಠವೇ ಮೊದಲಾದ ಸಾಹಿತ್ಯ ಸಾಂಸ್ಕೃತಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡವರು. ಹಾಗಾಗಿ ಶ್ರೀ ಕೃಷ್ಣ ಪ್ರಶಸ್ತಿ ಅವರಿಗೆ ಅರ್ಹವಾಗಿ ಸಲ್ಲುವ ಗೌರವ ಎಂದರು.

  ಸಮಿತಿಯ  ಗೌರವಾಧ್ಯಕ್ಷ  ಉದ್ಯಮಿ ಕೆ. ಶ್ರೀಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. 


ಉದ್ಯಮಿ ರಾಜೇಂದ್ರಕುಮಾರ್ ಜೈನ್, ಐ. ರಾಘವೇಂದ್ರ ಪ್ರಭು,

 ಸಂಘಟನೆಯ ಗೌರವಾಧ್ಯಕ್ಷ  ಪ್ರಮಥ್ ಕುಮಾರ್, ಗೋಪಾಲಕೃಷ್ಣ ದೇವಸ್ಥಾನದ ಮೊಕ್ತೇಸರ ಗುರುಪ್ರಸಾದ ಹೊಳ್ಳ ಮುಖ್ಯ ಅತಿಥಿಗಳಾಗಿದ್ದರು.






ಯಕ್ಷಗಾನೀಯ ಶ್ರೀ ಕೃಷ್ಣ ವೇಷಧಾರಿಯಾಗಿ ಸೇವೆ ಸಲ್ಲಿಸುತ್ತಿರುವ ಚಂದ್ರಶೇಖರ ಮಳಲಿ ಇವರಿಗೆ ಶ್ರೀ ಕೃಷ್ಣ ಫ್ರೆಂಡ್ಸ್ ಸರ್ಕಲ್ ನ ಅಧ್ಯಕ್ಷ ಬಿ. ಗಣೇಶ ರಾವ್, ಸಂಚಾಲಕ ಸಂತೋಷ್ ಕುಮಾರ್ ಸಹಿತ ಪದಾಧಿಕಾರಿಗಳು ನೋಟಿನ ಮಾಲೆ ತೊಡಿಸಿ, ಹಿಮ್ಮೇಳವಾದಕರಿಗೆ ಗೌರವಕಾಣಿಕೆ ಸಮರ್ಪಿಸಿ ಗೌರವಿಸಿದರು.


ಮುದ್ದು ಕೃಷ್ಣ ಸ್ಪರ್ಧೆಯಲ್ಲಿ ಪುರಸ್ಕೃತರಾದ 50 ಮಕ್ಕಳಿಗೆ ಬಹುಮಾನ ವಿತರಣೆ, ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಗಳಲ್ಲಿ ವಿಶೇಷ ಸಾಧನೆ ತೋರಿದ ಸದಸ್ಯರ ಮಕ್ಕಳಾದ ಸುಹಾನ್ ಕರ್ಕೇರ, ಪೂಜಾ ಭಂಡಾರಿ, ಸುಹಾಸ್ ರಾವ್ ಬೊಕ್ಕಸ, ಹಾಗೂ ಚಿನ್ಮಯ್ ಬೋರ್ಕರ್ ಪರವಾಗಿ ರಾಧಾಕೃಷ್ಣ ಬೋರ್ಕರ್ ಇವರನ್ನು ಪುರಸ್ಕರಿಸಲಾಯಿತು. ಮಾಜಿ ಸಚಿವ ಅಭಯಚಂದ್ರ, ಸಾಂಸ್ಕೃತಿಕ ಪ್ರಾಯೋಜಕ, ಉದ್ಯಮಿ ಎ.ಕೆ. ರಾವ್ ಸಮಾರಂಭಕ್ಕೆ ಶುಭ ಕೋರಿದರು. 

 ಪುತ್ತೂರು ಜಗದೀಶ ಆಚಾರ್ಯ ಬಳಗದವರು ಸಂಗೀತ ಗಾನ ಸಂಭ್ರಮ ಕಾರ್ಯಕ್ರಮ ಪ್ರಸ್ತುತಪಡಿಸಿದರು. 

ಸಂಘಟನೆ ಅಧ್ಯಕ್ಷ ಬಿ. ಗಣೇಶ ರಾವ್ ಸ್ವಾಗತಿಸಿ, ಶಿಷ್ಯ ಎಂ. ಗಣೇಶ ಕಾಮತ್ ಶುಭಾಭಿವಂದನ ಪತ್ರ ವಾಚಿಸಿದರು.ಸಂಚಾಲಕ ಸಂತೊ ಷ್ ಕುಮಾರ ಅತಿಥಿಗಳನ್ನು ಗೌರವಿಸಿದರು. ಹಿರಿಯ ಪತ್ರಕರ್ತ ಧನಂಜಯ ಮೂಡುಬಿದಿರೆ ಕಾರ್ಯಕ್ರಮ ನಿರೂಪಿಸಿದರು.







.

Post a Comment

0 Comments