ಅವರು ಕೋರ್ಟಿಗೆ ಬಾರದೆ ಭಾವನಾತ್ಮಕ ಭಾಷಣ ಮಾಡಿದ್ರೆ ನ್ಯಾಯ ಸಿಗುತ್ತಾ?:ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಪ್ರಶ್ನೆ

ಜಾಹೀರಾತು/Advertisment
ಜಾಹೀರಾತು/Advertisment

 ಅವರು ಕೋರ್ಟಿಗೆ ಬಾರದೆ ಭಾವನಾತ್ಮಕ ಭಾಷಣ ಮಾಡಿದ್ರೆ ನ್ಯಾಯ ಸಿಗುತ್ತಾ?:ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಪ್ರಶ್ನೆ





"ಸೌಜನ್ಯಳ ಕುಟುಂಬದ ಹೊರತಾಗಿ ನೀವ್ಯಾಕೆ ನ್ಯಾಯಾಲಯದಲ್ಲಿ ಬಂದು ಅರ್ಜಿ ಹಾಕಿದ್ದೀರಿ? ಅವರ ಬೇಡಿಕೆ ಏನಿದ್ದರೂ ನ್ಯಾಯಾಲಯದಲ್ಲಿ ಕೇಳಲಿ. ಸಭೆ,ಸಮಾರಂಭ, ಭಾವನಾತ್ಮಕ ಭಾಷಣಗಳು ತನಿಖೆಗೆ ಅನ್ವಯ ಆಗಲ್ಲ. ಅವರು ಯಾಕೆ ನ್ಯಾಯಾಲಯಕ್ಕೆ ಬರುತ್ತಿಲ್ಲ? ನೀವು ಅವರನ್ನು ಒಪ್ಪಿಸಿ ಅವರೊಂದಿಗೆ ಸಹಕರಿಸಿ ಕರೆದುಕೊಂಡು ಬನ್ನಿ. ಪ್ರತಿಭಟನೆಯಿಂದ ಯಾವ ಪ್ರಯೋಜನವೂ ಇಲ್ಲ"


ಇದು ಹಿರಿಯ ನ್ಯಾಯವಾದಿ ಅರುಣ್ ಶ್ಯಾಮ್ ರವರಿಗೆ ನ್ಯಾಯಾಲಯ ಕೇಳಿದ ಪ್ರಶ್ನೆ.


ಧರ್ಮಸ್ಥಳದ ಬಾಲಕಿ ಕುಮಾರಿ ಸೌಜನ್ಯಳ ರೇಪ್ ಆಂಡ್ ಮರ್ಡರ್ ವಿಚಾರಕ್ಕೆ ಸಂಬಂಧಿಸಿದಂತೆ ಈ ಪ್ರಕರಣವನ್ನು ಮರು ತನಿಖೆ ನಡೆಸಲು ನ್ಯಾಯಾಲಯದಲ್ಲಿ ಅರ್ಜಿ ಹಾಕಲಾಗಿತ್ತು.


ಅರ್ಜಿದಾರರಾದ ವಿಶ್ವಹಿಂದೂ ಪರಿಷತ್ ಪ್ರಮುಖರಾದ ಗಿರೀಶ್ ಭಾರದ್ವಾಜ್, ನವೀನ್ ಕುಮಾರ್ ನೆರಿಯಾ ಹಾಗೂ ವಿನಾಯಕ ಫ್ರೆಂಡ್ಸ್ ಟ್ರಸ್ಟ್ ಬಲ್ನಾಡ್ ಇವರ ಪರವಾಗಿ ಹಿರಿಯ ವಕೀಲ ಅರುಣ್ ಶ್ಯಾಮ್ ಅರ್ಜಿ ಸಲ್ಲಿಸಿದರು. ಆದರೆ ಈ ಅರ್ಜಿಯನ್ನು ತಿರಸ್ಕರಿಸಿದ ಹೈಕೋರ್ಟ್ ವಿಭಾಗೀಯ ಪೀಠ ನಿಮ್ಮ ಅರ್ಜಿಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದೆ.


ಪ್ರಕರಣಕ್ಕೆ ಸಂಬಂಧಿಸಿದಂತೆ ಸೌಜನ್ಯಳ ಕುಟುಂಬಸ್ಥರು ಮೇಲ್ಮನವಿ ಸಲ್ಲಿಸಬಹುದು. ಅಲ್ಲಿ ಅವರ ಮನವಿಯನ್ನು ಪರಿಗಣಿಸಿ ಯಾವ ಆಯಾಮದಲ್ಲಿ ತನಿಖೆ ನಡೆಸಬಹುದು ಎಂದು ನಿರ್ಧರಿಸುವ ಅವಕಾಶ ಇದೆ. ಸರ್ಕಾರವೂ ಈ ಬಗ್ಗೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರೆ ನ್ಯಾಯಾಲಯ‌ ಆ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು. ಆದರೆ ಸಾರ್ವಜನಿಕವಾಗಿ ಅರ್ಜಿಯನ್ನು ಪುರಸ್ಕರಿಸಲು ಅಥವಾ ತನಿಖೆ ನಡೆಸಲು ಅವಕಾಶ ಇಲ್ಲ ಎಂದು ಹೈಕೋರ್ಟ್ ಸ್ಪಷ್ಟವಾಗಿ ಹೇಳಿದೆ.

Post a Comment

0 Comments