ರಾಮ ಮತ್ತು ಕೃಷ್ಣನನ್ನು ಬಿಟ್ಟರೆ ದೇಶಕ್ಕೆ ಅಸ್ತಿತ್ವವಿಲ್ಲ : ಸುದರ್ಶನ್ ಎಂ
ಮೂಡುಬಿದಿರೆ: ಭಗವಾನ್ ಶ್ರೀ ಕೃಷ್ಣ ಗೋಪಾಲಕನಾಗಿ, ನೀರಿನ ರಕ್ಷಣೆಗಾಗಿ ಗೋವರ್ಧನನಾಗಿ ಬಂದವನು. ರಾಮ ಮತ್ತು ಕೃಷ್ಣನನ್ನು ಬಿಟ್ಟರೆ ನಮ್ಮ ದೇಶಕ್ಕೆ ಅಸ್ತಿತ್ವವಿಲ್ಲ. ಶ್ರೀಕೃಷ್ಣನ ಪ್ರತಿಯೊಂದು ಹೆಜ್ಜೆಯಲ್ಲೂ ಒಂದೊಂದು ಸಂದೇಶವಿದೆ, ಆತ ಮೊದಲ ಮನೋವಿಜ್ಞಾನಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ.ಹೇಳಿದರು. ಅವರು ಇಲ್ಲಿನ ಮೊಸರು ಕುಡಿಕೆ ಉತ್ಸವದ ಪ್ರಯುಕ್ತ ನಿಶ್ಚಿತಾ ಟವರ್ಸ್ ಬಳಿಯ ಅಮರನಾಥ ಶೆಟ್ಟಿ ವೃತ್ತದ ಸಮೀಪ ನಿರ್ಮಿಸಿದ ಬಲಿಪ ನಾರಾಯಣ ಭಾಗವತ ವೇದಿಕೆಯಲ್ಲಿ ಜವನೆರ್ ಬೆದ್ರ ಸಂಘಟನೆಯ ವತಿಯಿಂದ ಜರಗಿದ ಯಕ್ಷ ಸಂಭ್ರಮ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಚೌಟರ ಅರಮನೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಜವನ ಬೆದ್ರ ಸಂಘಟನೆಯ ಎಲ್ಲಾ ಸೇವಾ ಕಾರ್ಯಗಳನ್ನು ಪ್ರಶಂಸಿಸಿದರು.
ಎಕ್ಸಲೆಂಟ್ ವಿದ್ಯಾಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಅವರು ಜವನೆರ್ ಬೆದ್ರ ಫೌಂಡೇಶನ್ ನ ಲೋಗೋ ಅನಾವರಣಗೊಳಿಸಿ ಮಾತನಾಡಿ, ನಮಗಾಗಿ ಮಾತ್ರ ನಾವು ಬದುಕಿದರೆ ಜನರು ನಮ್ಮನ್ನು ನೆನಪಿಡುವುದಿಲ್ಲ. ಜಗತ್ತಿನ ಸಮಾಜಕ್ಕೋಸ್ಕರ ನಾವು ಬದುಕಿದರೆ ಜನರು ಯಾವತ್ತೂ ನೆನಪಿಡುತ್ತಾರೆ ಹಲವು ವರ್ಷಗಳಿಂದ ಸಮಾಜಮುಖಿ ಕಾರ್ಯ ನಡೆಸುತ್ತಿರುವ ಜವನೆರ್ ಬೆದ್ರ ಸಂಘಟನೆಯ ಸೇವಾ ಕಾರ್ಯ ದೀರ್ಘಕಾಲ ಉಳಿಯಲಿ ಎಂದರು.
ಜವನೆರ್ ಬೆದ್ರ ಸಂಘಟನೆಯ ಸಂಸ್ಥಾಪಕ ಅಮರ್ ಕೋಟಿ ಮಾತನಾಡಿ
ಮೂಡುಬಿದಿರೆಯ ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ತನ್ನದೇ ಆದ ಐತಿಹ್ಯವಿದ್ದು ಯಕ್ಷಗಾನ ಮೇಳವೊಂದು ಇಲ್ಲಿ ಇದ್ದ ಕಾರಣ ಜವನೆರ್ ಬೆದ್ರ ಸಂಘಟನೆ ಈ ಮೊಸರು ಕುಡಿಕೆ ಉತ್ಸವದ ಸಂದರ್ಭ ಯಕ್ಷಗಾನ ಪ್ರದರ್ಶನವನ್ನು ನಡೆಸಲು ಆಯ್ಕೆ ಮಾಡಿಕೊ೦ಡಿದೆ ಎಂದರು.
ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಕೆ. ಶ್ರೀಪತಿ ಭಟ್, ವಕೀಲ ಶರತ್ ಶೆಟ್ಟಿ,
ಶ್ರೀ ಗೋಪಾಲ ದೇವಸ್ಥಾನದ ಆಡಳಿತ ಮೊಕ್ತೇಸರ ರಾಘವೇಂದ್ರ ಹೊಳ್ಳ, ಎಸ್ .ಕೆ.ಎಫ್ .ಸಂಸ್ಥೆಯ ಪ್ರಜ್ವಲ್ ಆಚಾರ್ಯ, ವಿಶಾಲ್ ಡೆವಲಪರ್ಸ್ ನ ರಾಜೇಶ್ ಕೋಟೆಕಾರ್, ಪ್ರಭಾತ್ ಸಿಲ್ಕ್ ನ ಪ್ರಭಾಚ೦ದ್ರ, ಶ್ರೀ ಯಕ್ಷದೇವ ಮಿತ್ರ ಕಲಾ ಮಂಡಳಿ ಬೆಳುವಾಯಿ ಇದರ ಸಂಘಟಕ, ಕಲಾವಿದ ಎಂ. ದೇವಾನಂದ ಭಟ್ ಅವರನ್ನು ಸನ್ಮಾನಿಸಲಾಯಿತು.
ಹ್ಯುಮಾನಿಟಿ ಟ್ರಸ್ಟ್, ಅಮೃತ ಸಂಜೀವಿನಿ ಸಂಸ್ಥೆ, ರಾಮ ಫ್ರೆಂಡ್ಸ್ ನವಚೇತನಾ ವೃಂದ, ವೀರಾಂಜನೇಯ ಸೇವಾ ಸಮಿತಿ, ಹೊಸ ಕನಸು ಸೇವಾ ಟ್ರಸ್, ಸರ್ವೋದಯ ಫ್ರೆಂಡ್ಸ್, ತುಳುನಾಡ ಪೊರ್ಲು ಟ್ರಸ್ಟ್, ಚಾರಿಟೇಬಲ್ ಟ್ರಸ್ಟ್ ಶ್ರೀ ವಿನಾಯಕ ಸೇವಾ ವೃಂದ ಮುಂತಾದ ಸಂಸ್ಥೆಗಳಿಗೆ ಗೌರವ ಅರ್ಪಿಸಲಾಯಿತು.
ನಿರ್ವಾಣ ಸರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಮಾರಿಗುಡಿ ಫ್ರೆಂಡ್ ಮತ್ತು ದ್ವಿತೀಯ ಸ್ಥಾನ ಪಡೆದ ಒಂಟೆಕಟ್ಟೆ ಫ್ರೆಂಡ್ ತಂಡಗಳಿಗೆ ನೀಡಲಾಯಿತು, . ಪಿ. ಜಗದೀಶ್ ಅಧಿಕಾರಿ,
ಜೆಡಿಎಸ್ ರಾಜ್ಯ ನಾಯಕಿ ಡಾ. ಅಮರನಾಥ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಿದ್ದರು.
ಅಕ್ಷಯ್ ಕುಮಾರ್ ಸ್ವಾಗತಿಸಿದರು. ನಿತೇಶ್ ಕುಮಾರ್ ಮಾರ್ನಾಡ್ ಕಾರ್ಯಕ್ರಮ ನಿರೂಪಿಸಿದರು.
ಸಂಜೆ ದೇವಾನಂದ ಭಟ್ ಸ೦ಯೋಜನೆಯಲ್ಲಿ ಶ್ರೀ ಕೃಷ್ಣಾ೦ತರ೦ಗ ಯಕ್ಷಗಾನ ಬಯಲಾಟ ನಡೆಯಿತು.
0 Comments