*ಸಾಕ್ಷರತೆಯಿಂದ ಮಾನವನ ಜೀವನದಲ್ಲಿ ಪರಿವರ್ತನೆ ಸಾಧ್ಯ: ಡಾ.ರಾಮಕೃಷ್ಣ ಶಿರೂರು*
ಅಕ್ಷರ ಜ್ಞಾನ ಮಾನವನ ಬದುಕಿಗೆ ಅತಿ ಅವಶ್ಯ. ಪ್ರಾಚೀನ ಕಾಲದಲ್ಲಿ ಮೌಖಿಕ ಭಾಷೆಯಿಂದಲೇ ಬದುಕು ಮುನ್ನಡೆಯುತ್ತಿತ್ತು. ಕಾಲಂತರದಲ್ಲಿ ಮಾತು ಬರವಣಿಗೆಯ ರೂಪವನ್ನು ಪಡೆಯಿತು. ಬರವಣಿಗೆ ಸಾರ್ವತ್ರಿಕವಾಗಿ ಎಲ್ಲರಿಗೂ ತಲುಪುವ ಸ್ಥಿತಿ ನಿರ್ಮಾಣವಾಯಿತು. ಸಾಕ್ಷರತೆಯಿಂದ ಮಾನವನ ಜೀವನದಲ್ಲಿ ಪರಿವರ್ತನೆ ಸಾಧ್ಯ ಎಂದು ಕನ್ನಡ ಅಧ್ಯಾಪಕ ಪ್ರೌಢಶಾಲಾ ಸಹ ಶಿಕ್ಷಕ ಸಂಘದ ಮೂಡುಬಿದಿರೆ ತಾಲೂಕು ಘಟಕದ ಅಧ್ಯಕ್ಷರಾದ ಡಾ.ರಾಮಕೃಷ್ಣ ಶಿರೂರು ತಿಳಿಸಿದರು.
ಅವರು ಹೋಲಿ ರೋಸರಿ ಪ್ರೌಢಶಾಲೆಯಲ್ಲಿ ನಡೆದ ವಿಶ್ವ ಸಾಕ್ಷರತಾ ದಿನಾಚರಣೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಸಮೂಹ ಗೀತೆ ಕಿರು ನಾಟಕ ಭಾಷಣಗಳ ಮೂಲಕ ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಪ್ರಾರ್ಥನೆ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು.
ಕುಮಾರಿ ಶ್ರೀನಿಧಿ ಶಿಕ್ಷಣದ ಪ್ರಾಮುಖ್ಯತೆಯನ್ನು, ಸಾಕ್ಷರತೆಯ ಅವಶ್ಯಕತೆಯನ್ನು ತಿಳಿಸಿದರು.
ಸಮಾನತೆಗೆ ಸಂಬಂಧಿಸಿದ ಸಮೂಹ ಗೀತೆಯನ್ನು ವಿದ್ಯಾರ್ಥಿಗಳು ಹಾಡಿದರು. ಕಿರು ನಾಟಕದ ಮೂಲಕ ಅಕ್ಷರ ಜಾಗೃತಿಯನ್ನು ಉಂಟುಮಾಡಿದರು.
ವಿದ್ಯಾರ್ಥಿನಿ ಕುಮಾರಿ ಧನ್ವಿ ಸಾಕ್ಷರತೆಯ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದರು. ವಿದ್ಯಾರ್ಥಿನಿ ಕುಮಾರಿ ವರ್ಷಿತ ಕಾರ್ಯಕ್ರಮ ನಿರ್ವಹಣೆ ನಡೆಸಿಕೊಟ್ಟರು. ಶ್ರೀ ಮುಬಶಿರ್ ಎಲ್ಲರನ್ನು ಸ್ವಾಗತಿಸಿದರು.
ಶ್ರೀ ಮುಫೀದ್ ಧನ್ಯವಾದ ಸಲ್ಲಿಸಿದರು.
0 Comments